ಕಟ್ಟಡ ಕುಸಿತ: 4 ದಿನಗಳ ಬಳಿಕ ಮಗುವಿನ ರಕ್ಷಣೆ

Update: 2016-05-03 15:17 GMT

ನೈರೋಬಿ, ಮೇ 3: ಕೆನ್ಯದ ರಾಜಧಾನಿ ನೈರೋಬಿಯಲ್ಲಿ ಆರು ಮಹಡಿಗಳ ಕಟ್ಟಡವೊಂದು ಕುಸಿದ ನಾಲ್ಕು ದಿನಗಳ ಬಳಿಕ, ರಕ್ಷಣಾ ಕಾರ್ಯಕರ್ತರು ಅವಶೇಷಗಳ ಅಡಿಯಿಂದ 18 ತಿಂಗಳ ಮಗುವೊಂದನ್ನು ಮಂಗಳವಾರ ಜೀವಂತವಾಗಿ ಹೊರದೆಗೆದಿದ್ದಾರೆ. ಈ ದುರ್ಘಟನೆಯಲ್ಲಿ 23 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಹೆಣ್ಣು ಮಗು ಬಟ್ಟೆಯೊಂದರಲ್ಲಿ ಸುತ್ತಿದ ಬಕೆಟ್‌ನಲ್ಲಿ ಪತ್ತೆಯಾಯಿತು. ಮಗು ಬಾಯಾರಿಕೆಯಿಂದ ಬಳಲುತ್ತಿತ್ತು. ಆದರೆ, ಅದರ ದೇಹದಲ್ಲಿ ಮೇಲ್ನೋಟಕ್ಕೆ ಕಾಣಿಸುವ ಗಾಯಗಳಿಲ್ಲ ಎಂದು ರೆಡ್ ಕ್ರಾಸ್ ಹೇಳಿದೆ. ಶುಕ್ರವಾರ ರಾತ್ರಿ ಕಟ್ಟಡ ಕುಸಿದ ಬಳಿಕ 80 ಗಂಟೆಗಳ ಕಾಲ ಮಗು ಅವಶೇಷಗಳಡಿಯಲ್ಲಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News