×
Ad

ಫ್ರಾನ್ಸ್‌ನ ನೈಸ್ ನಗರದಲ್ಲಿ ಮುಸ್ಲಿಮ್ ಫುಟ್ಬಾಲ್ ಆಟಗಾರರು ಮೈದಾನದಲ್ಲಿ ಪ್ರಾರ್ಥಿಸುವುದಕ್ಕೆ ನಿಷೇಧ?

Update: 2016-05-03 21:06 IST

ಇಸ್ತಾಂಬುಲ್, ಮೇ 3: ಶಾಲೆಗಳಲ್ಲಿ ಹೆಣ್ಣು ಮಕ್ಕಳು ಶಿರವಸ್ತ್ರ ಧರಿಸುವುದನ್ನು ಫ್ರಾನ್ಸ್‌ನಲ್ಲಿ 2004ರಿಂದ ನಿಷೇಧಿಸಲಾಗಿದೆ. ಈಗ, ಫುಟ್ಬಾಲ್ ಮೈದಾನದಲ್ಲಿ ಪ್ರಾರ್ಥನೆ ಮಾಡಬಾರದು ಎಂಬುದಾಗಿ ಆಟಗಾರರಿಗೆ ಫ್ರಾನ್ಸ್‌ನ ನೈಸ್ ನಗರದ ಮೇಯರ್ ಕ್ರಿಶ್ಚನ್ ಎಸ್ಟ್ರೋಸಿ ಹೇಳುವರೇ?

ದಕ್ಷಿಣ ಫ್ರಾನ್ಸ್ ಮತ್ತು ಇಟಲಿಯ ಬೀಚ್‌ಗಳ ಮೇಲೆ ದಾಳಿ ನಡೆಸಲು ಭಯೋತ್ಪಾದಕರು ಯೋಜನೆ ರೂಪಿಸುತ್ತಿದ್ದಾರೆ ಎಂಬ ಸುದ್ದಿ ಎರಡು ವಾರಗಳ ಹಿಂದೆ ಪ್ರಚಾರದಲ್ಲಿತ್ತು. ಈ ಹಿನ್ನೆಲೆಯಲ್ಲಿ, ಮೇಯರ್ ಕ್ರಿಶ್ಚನ್ ಎಸ್ಟ್ರೋಸಿ ಮುಸ್ಲಿಮರ ವಿರುದ್ಧ ಅಸಾಮಾನ್ಯ ಕ್ರಮಕ್ಕೆ ಮುಂದಾಗುವರೇ ಎಂಬುದಾಗಿ ಹಲವರು ಪ್ರಶ್ನಿಸುತ್ತಿದ್ದಾರೆ.

 ನೈಸ್ ಮೇಯರ್ ದೊಡ್ಡ ಮಸೀದಿಯೊಂದನ್ನು ಮುಚ್ಚಲು ಪ್ರಯತ್ನಿಸುತ್ತಿದ್ದಾರೆ ಹಾಗೂ ಆಟಗಾರರು ಮೈದಾನದಲ್ಲಿ ಪ್ರಾರ್ಥಿಸುವುದನ್ನು ಮುಂದುವರಿಸಿದರೆ ಸ್ಥಳೀಯ ಫುಟ್ಬಾಲ್ ಕ್ಲಬ್‌ಗೆ ನೀಡುವ ಅನುದಾನವನ್ನು ನಿಲ್ಲಿಸುವ ಬೆದರಿಕೆ ಹಾಕಿದ್ದಾರೆ.

ನೈಸ್‌ನಲ್ಲಿ ಸೌದಿ ಅರೇಬಿಯ ಪ್ರಾಯೋಜಕತ್ವದ ಮಸೀದಿ ನಿರ್ಮಾಣವನ್ನು ತಡೆಯುವ ಪ್ರಯತ್ನವಾಗಿ ಫ್ರಾನ್ಸ್ ಸರಕಾರದ ವಿರುದ್ಧ ಮೊಕದ್ದಮೆ ಹೂಡಲು ನೈಸ್ ಮೇಯರ್ ಸೋಮವಾರ ಅನಮತಿ ಪಡೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News