×
Ad

ಹಗ್ಗ ಜಗ್ಗಾಟವಾಡುತ್ತಿರುವ ನ್ಯಾಯಾಲಯ

Update: 2016-05-03 23:21 IST

ಮಾನ್ಯರೆ,

ಉತ್ತರಾಖಂಡದಲ್ಲಿ ತಲೆದೂರಿರುವ ರಾಜಕೀಯ ಬಿಕ್ಕಟ್ಟಿನ ಹಿಂದೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಹಗ್ಗ ಜಗ್ಗಾಟವಾಡುತ್ತಿರುವುದು ಜನರಿಗೆ ನ್ಯಾಯಾಲಯದ ಮೇಲೆ ಅನುಕಂಪ ಬರುವ ಸ್ಥಿತಿಗೆ ತಲುಪಿದೆ.ಕಳೆದ ಕೆಲವು ದಿನಗಳಿಂದ ಆ ರಾಜ್ಯದಲ್ಲಿ ಹರೀಶ್ ರಾವತ್ ಅವರ ಬಹುಮತ ಸರಕಾರವನ್ನು ಅಸ್ಥಿರತೆಗೊಳಿಸಿ ಉತ್ತರಾಖಂಡ ಜನತೆಗೆ ಶಾಕ್ ಕೊಟ್ಟು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ತಂದು ಆ ಬಳಿಕ ಕಾಂಗ್ರೆಸ್ ಬಂಡುಕೋರ ಶಾಸಕರನ್ನು ಕುದುರೆ ವ್ಯಾಪಾರ ಮಾಡಲು ಮುಂದಾಗಿದ್ದು ಇತಿಹಾಸ. ಕೇಂದ್ರದಲ್ಲಿ ಆಡಳಿತದಲ್ಲಿದ್ದೇವೆ ಎಂಬ ಅಹಂನಲ್ಲಿ ಇತರ ರಾಜ್ಯಗಳಲ್ಲೂ ಪ್ರಜಾಪ್ರಭುತ್ವ ಸರಕಾರಗಳನ್ನು ಕಗ್ಗೊಲೆ ಮಾಡಿ ಅಧಿಕಾರವನ್ನು ಚಲಾಯಿಸಲು ರಣತಂತ್ರ ಮಾಡುತ್ತಿರುವ ಬಿಜಿಪಿ ನಾಯಕರ ಕಸರತ್ತುಗಳನ್ನು ನೋಡಿದರೆ ಇವರಿಗೆ ಸಂವಿಧಾನದ ಮೇಲೆ ಎಷ್ಟೊಂದು ಗೌರವವಿದೆ ಎಂಬುದನ್ನು ದೇಶದ ಜನತೆ ಗಮನಿಸುತ್ತಿದ್ದಾರೆ ಎಂಬುದನ್ನು ಮರೆತಂತಿದೆ. ಕೇಂದ್ರ ಸರಕಾರ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಿದ್ದನ್ನು ಹೈಕೋರ್ಟ್ ಪ್ರಶ್ನಿಸಿ ಮೋದಿ ಸರಕಾರಕ್ಕೆ ಛೀಮಾರಿ ಹಾಕಿದ್ದು ಎಲ್ಲ್ಲ ಮಾಧ್ಯಮಕ್ಕೂ ದೊಡ್ಡ ಸುದ್ದಿ ಆಯಿತು. ಅದಾದ ಮರುದಿನವೇ ಸುಪ್ರೀಂ ಕೋರ್ಟ್, ಹೈಕೋರ್ಟ್ ನೀಡಿದ ತೀರ್ಪನ್ನು ತಳ್ಳಿಹಾಕಿದ್ದು ದೇಶದ ಜನತೆಗೆ ನ್ಯಾಯಾಂಗದ ಮೇಲೆ ಅಪನಂಬಿಕೆ ಉಂಟಾಗಿದೆ. ರಾಜಕೀಯ ನಾಯಕರು ನ್ಯಾಯಾಂಗದ ಮೇಲೆ ತನ್ನ ಪ್ರಭಾವವನ್ನು ಹಾಕುತ್ತಿದ್ದಾರೆಯೇ ಎಂಬ ಅನುಮಾನ ಉಂಟಾಗಲು ಇಂತಹ ತೀರ್ಪುಗು ಪುಷ್ಟಿನೀಡುವುದಂತೂ ಗ್ಯಾರಂಟಿ.

Writer - ರಿಯಾಝ್ ಜಿ., ಉಜಿರೆ

contributor

Editor - ರಿಯಾಝ್ ಜಿ., ಉಜಿರೆ

contributor

Similar News