‘ಬ್ಯೂಟಿ ವಾಲ್ ಸ್ಪಾಟ್’ ಮೂಲಕ ಚಿತ್ರ ಕಲಾವಿದರಿಗೆ ಆಸರೆ

Update: 2016-05-03 19:00 GMT

ಮಂಗಳೂರು, ಮೇ 3: ಮಂಗಳೂರಿನ ಚಿತ್ರಕಲಾವಿದರ ಪೇಂಟಿಂಗ್‌ಗಳಿಗೆ ಜಪಾನ್ ದೇಶದಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಗಿದೆ.
ನಗರದ ವಿಶ್ವಾಸ್ ಕೃಷ್ಣ ಎಂಬವರು ಆರಂಭಿಸಿದ ಬ್ಯೂಟಿ ವಾಲ್ ಸ್ಪಾಟ್ ಎಂಬ ಸಂಸ್ಥೆ ಮಂಗಳೂರಿನ ಕಲಾವಿದರಿಗೆ ಈ ಅವಕಾಶವನ್ನು ಮಾಡಿಕೊಟ್ಟಿದೆ.
  ಸಾಧಾರಣವಾಗಿ ಕಲಾವಿದರು ರಚಿಸುವ ಕಲಾಕೃತಿಗಳು ಮಾರಾಟ ವಾಗಲು ಸಾಕಷ್ಟು ಸಮಯ ಬೇಕಾ ಗುತ್ತದೆ. ಕಲಾವಿದರು ರಚಿಸುವ ಅತ್ಯುತ್ತಮ ಕಲಾಕೃತಿಗಳನ್ನು ಕಲಾಸ ಕ್ತರು ಪಡೆದುಕೊಳ್ಳಲು ಬೇಕಾದ ಸರಿಯಾದ ವೇದಿಕೆಯಿಲ್ಲ. ಇದನ್ನು ಮನಗಂಡು ಆರಂಭಿಸಲಾದ ಬ್ಯೂಟಿ ವಾಲ್ ಸ್ಪಾಟ್ ಸಂಸ್ಥೆ ಇಕಾಮರ್ಸ್ ಮೂಲಕ ಕಲಾವಿದರಿಗೆ ಉತ್ತಮವಾದ ವೇದಿಕೆಯನ್ನು ನೀಡಿದೆ.
ಬ್ಯೂಟಿವಾಲ್‌ಸ್ಪಾಟ್.ಕಾಮ್ ಎಂಬ ವೆಬ್‌ಸೈಟ್‌ನಲ್ಲಿ ಕಲಾವಿದರು ತಮ್ಮ ಕಲಾಕೃತಿಗಳ ಚಿತ್ರಗಳನ್ನು ಅಪ್‌ಲೋಡ್ ಮಾಡಿ, ಅದಕ್ಕೆ ನಿಗದಿಪಡಿಸಿದ ದರವನ್ನು ನಮೂದಿಸಿದರೆ ಜಗತ್ತಿನ ಎಲ್ಲ ಕಲಾಸಕ್ತರಿಗೆ ಇಂತಹದೊಂದು ಕಲಾಕೃತಿಯ ಬಗ್ಗೆ ಮಾಹಿತಿ ತಿಳಿಯುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಬ್ಯೂಟಿವಾಲ್‌ಸ್ಪಾಟ್.ಕಾಮ್ ಪ್ರಚಾರವನ್ನು ಮಾಡಿ ಕಲಾಕೃತಿಗಳು ಮಾರಾಟವಾಗುವಂತೆ ನೋಡುತ್ತದೆ. ಕಲಾವಿದರು ತಮ್ಮ ಕಲಾಕೃತಿಗಳನ್ನು ಸುಲಭ ರೀತಿಯಲ್ಲಿ ಅಪ್‌ಲೋಡ್ ಮಾಡಲು ಅವಕಾಶ ನೀಡಲಾಗಿದೆ. ಕಲಾವಿದರ ಕಲಾಕೃತಿಗಳನ್ನು ಪಡೆಯಲು ಮುಂದಾಗುವ ಕಲಾಸಕ್ತರು ಕಲಾಕೃತಿಗಳನ್ನು ಬ್ಯೂಟಿವಾಲ್ ಸ್ಪಾಟ್ ಮೂಲಕ ಪಡೆದುಕೊಳ್ಳುವ ವ್ಯವಸ್ಥೆಯನ್ನು ಮಾಡಲಾಗಿದೆ. ಈ ವೇದಿಕೆಯಿಂದ ಮಂಗಳೂರಿನ ಕಲಾವಿದರಲ್ಲೊಬ್ಬರಾದ ಪ್ರೇಮನಾಥ ಮರ್ಣೆಯವರ 60 ಕಲಾಕೃತಿಗಳನ್ನು ಜಪಾನ್ ದೇಶದಲ್ಲಿ ಕಲಾಸಕ್ತರು ಖರೀದಿಸಿದ್ದಾರೆ. ಇಕಾಮರ್ಸ್ ಸಂಸ್ಥೆ ಆರಂಭವಾಗಿ ಮೂರೆ ತಿಂಗಳಾಗಿದ್ದು, ಇದೀಗ ಇದರಲ್ಲಿ ಕೆಲವು ಕಲಾವಿದರ ಕಲಾಕೃತಿಗಳು ಮಾತ್ರವೆ ಲಭ್ಯವಿದೆ. ಈ ಬಗ್ಗೆ ಈಗಾಗಲೆ ಕಲಾವಿದರ ಜೊತೆ ಸಮಾಲೋಚನೆ ಮಾಡಿರುವ ಸಂಸ್ಥೆ ಜಿಲ್ಲೆಯ ಎಲ್ಲ ಕಲಾವಿದರು ಈ ಮೂಲಕ ತಮ್ಮ ಕಲಾಕೃತಿಗಳ ಮಾರಾಟ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದೆ. ಇದು ಸಫಲವಾದರೆ ಜಿಲ್ಲೆಯ ಎಲ್ಲ ಕಲಾವಿದರು ಕಲಾಕೃತಿಗಳು ದೇಶ ವಿದೇಶಗಳಲ್ಲಿರುವ ಕಲಾಸಕ್ತರಿಗೆ ಖರೀದಿಸಲು ಅನುಕೂಲವನ್ನು ಮಾಡಿಕೊಡಲಿದೆ.
 ಈ ಸಂಸ್ಥೆಯಿಂದ ಕೊಣಾಜೆಯಲ್ಲಿ 16 ಎಕರೆ ಜಾಗದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕಲಾ ಗ್ರಾಮವನ್ನು ಆರಂಭಿ ಸಲು ಸಿದ್ಧತೆಯೂ ನಡೆಯುತ್ತಿದೆ. ಕಲಾವಿದರ ಕಲಾಕೃತಿಗಳನ್ನು ಹೆಚ್ಚಿನ ರೀತಿಯಲ್ಲಿ ಕಲಾಸಕ್ತರು ಪಡೆಯಲು ಹಾಗೂ ಆಕರ್ಷಿಸಲು ‘ವರ್ಲ್ಡ್ ಆರ್ಟ್ ಕಾರ್ಡ್’ನ್ನು ಆರಂಭಿಸಲಾಗಿದ್ದು ಇದರಲ್ಲಿ 1 ಸಾವಿರ ರೂ. ಪಾವತಿಸಿ ನೊಂದಾಯಿಸಿದವರಿಗೆ ಪ್ರತಿವಾರ ಪ್ರಸಿದ್ಧ ಕಲಾವಿದರೊಬ್ಬರ ಕಲಾಕೃತಿಯನ್ನು ಪೋಸ್ಟ್ ಕಾರ್ಡ್ ಸೈಜಿನಲ್ಲಿ ಮನೆಗೆ ತಲುಪಿಸುವ ವ್ಯವಸ್ಥೆ ಮತ್ತು ಕಲಾಕೃತಿಗಳನ್ನು ಪಡೆಯುವಾಗ ಆಕರ್ಷಕ ಕೊಡುಗೆಗಳನ್ನು ನೀಡುವ ಯೋಜನೆಯನ್ನು ಮಾಡುತ್ತಿದೆ.
ಬ್ಯೂಟಿ ವಾಲ್ ಸ್ಪಾಟ್ ಗುರುತಿಸಿದ ಕೆಲವು ಕಲಾಕೃತಿಗಳನ್ನು ಖರೀದಿಸಿದ ಗ್ರಾಹಕರು ಒಂದು ವರ್ಷದಲ್ಲಿ ಅದನ್ನು ಖರೀದಿಸಿದ ದರದ ಶೇ.120 ಹೆಚ್ಚಿಗೆ ಮಾರಾಟ ಮಾಡುವ ಗ್ಯಾರಂಟಿಯನ್ನು ಸಂಸ್ಥೆ ನೀಡಿದೆ.

ನಾನೊಬ್ಬ ಕಲಾವಿದನಾಗಿ ಕಲಾವಿದರು ತಾವು ಮಾಡಿದ ಕಲಾಕೃತಿಗಳನ್ನು ಮಾರಾಟ ಮಾಡಲು ಅನುಭವಿಸುತ್ತಿದ್ದ ತೊಂದರೆಯನ್ನು ಗಮನಿಸಿದ್ದೆ. ಈ ಸಮಸ್ಯೆಯನ್ನು ಪರಿಹರಿಸಿ ಕಲಾ ವಿದರು ತಮ್ಮ ಕಲಾಕೃತಿಗಳನ್ನು ಸುಲಭ ರೀತಿಯಲ್ಲಿ ಮಾರಾಟ ಮಾಡಲು ಅನುಕೂಲವಾಗಲು ಇದನ್ನು ಆರಂಭಿಸಲಾಗಿದೆ.
                                          - ವಿಶ್ವಾಸ್ ಕೃಷ್ಣ, ಬ್ಯೂಟಿ ವಾಲ್ ಸ್ಪಾಟ್.ಕಾಮ್ ಮಾಲಕರು

Writer - ವಿನೋದ್ ಪುದು

contributor

Editor - ವಿನೋದ್ ಪುದು

contributor

Similar News