ಬಸ್‌ನಲ್ಲಿ ದಲಿತ ಬಾಲಕಿಯ ಅತ್ಯಾಚಾರ ಯತ್ನ, ಆರೋಪಿಗಳಿಗೆ ರಿಮಾಂಡ್
ಕೊಚ್ಚಿ, ಮೇ 4: ಅಪ್ರಾಪ್ತ ವಯಸ್ಸಿನ ದಲಿತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಲು ಶ್ರಮಿಸಿದ ಇಬ್ಬರು ಖಾಸಗಿ ಬಸ್ ನೌಕರರನ್ನು ರಿಮಾಂಡ್‌ಗೆ ಕಳುಹಿಸಲಾಗಿದೆ.
ಕಳೆದ ಶನಿವಾರ ಈ ಘಟನೆ ನಡೆದು ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು. ಬೆಳಗ್ಗಿನ ಹನ್ನೊಂದು ಗಂಟೆಗೆ ಪೆರುಂಬಾವೂರ್‌ನಿಮದ ಇಡಪಳ್ಳಿಗೆ ಬರುತ್ತಿದ್ದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿಯನ್ನು ಅತ್ಯಾಚಾರವೆಸಗಲು ಇವರು ಶ್ರಮಿಸಿದ್ದರು ಎಂದು ಆರೋಪಿಸಲಾಗಿದೆ. ಕೊಲಂಚೇರಿ ನಿವಾಸಿ ವಿಪಿನ್(25)ಪಟ್ಟಿಮ ನಿವಾಸಿ ಮುಹಮ್ಮದಲಿ(26) ರಿಮಾಂಡ್‌ಗೊಳಗಾದ ಯುವಕರಾಗಿದ್ದಾರೆ.ಇವರು ಲುಲುಮಾಲ್‌ಗೆ ಹೋಗಲು ಬಸ್‌ನಲ್ಲಿ ಬಂದಿದ್ದ ಬಾಲಕಿಯನ್ನು ಆ ಬಸ್‌ಸ್ಟಾಪ್‌ನಲ್ಲಿ ಇಳಿಸದೆ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅಪ್ಪಿ ಹಿಡಿದಿದ್ದರು.
ಬಾಲಕಿ ಮನೆಗೆ ಬಂದ ಮೇಲೆ ಪಟ್ಟಿಮಟ್ಟಂಪೊಲೀಸ್‌ಸ್ಟೇಶನ್‌ನಲ್ಲಿ ದೂರು ನೀಡಿದ್ದಳು. ಸೋಮವಾರ ಸಂಜೆ ಇಡಪಳ್ಳಿಯಿಂದ ಬಸ್ ನೌಕರರನ್ನು ಪೊಲೀಸರು ಬಂಧಿಸಿದ್ದಾರೆ. ಬಸ್‌ನ್ನು ಕಸ್ಟಡಿಗೆ ಪಡೆಯಲಾಗಿದೆ. ತೃಕ್ಕರಕರ ಅಸಿಸ್ಟೆಂಟ್ ಪೊಲೀಸ್ ಕಮೀಶನರ್‌ಗೆ ಪ್ರಕರಣದ ತನಿಖೆಯ ಹೊಣೆಯನ್ನು ವಹಿಸಲಾಗಿದೆ ಎಂದು ವರದಿಯಾಗಿದೆ.