×
Ad

ಬ್ರಾಹ್ಮಣರ ಯಾಗದಲ್ಲಿ ಆಡುಗಳ ಬಲಿ

Update: 2016-05-04 13:05 IST

ಶಿವಮೊಗ್ಗ, ಮೇ 4 : ಆಘಾತಕಾರಿ ಘಟನೆಯೊಂದರಲ್ಲಿ ಇಲ್ಲಿನ ಹೊರವಲಯದ ಮತ್ತೂರಿನ ಶ್ರೀಕಂಠ ಪುರದಲ್ಲಿ ಸಂಕೇತಿ ಬ್ರಾಹ್ಮಣರು ನಡೆಸಿದ ಸೋಮ ಯಾಗದಲ್ಲಿ 8 ಆಡುಗಳನ್ನು ಬಲಿ ನೀಡಲಾಗಿದೆ.  ಸಾರ್ವಜನಿಕ ಕಲ್ಯಾಣಕ್ಕೆ ಎಂದು ನಡೆದಿರುವ ಈ ಆರು ದಿನಗಳ ಯಾಗ ಎಪ್ರಿಲ್ 22 ರಿಂದ ನಡೆದಿತ್ತು. ಪೂಜೆಯ ಬಳಿಕ ಬಾಯಿ ಕಟ್ಟಿ ಹಾಕಲಾಗಿದ್ದ ಆಡುಗಳನ್ನು ಅಗ್ನಿ ಕುಂಡದ ಬಳಿ ಬಲಿ ನೀಡಲಾಗಿದೆ ಎಂದು ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಚಂದ್ರಹಾಸ ಹಿರೇಮಳಲಿ ಅವರು ವರದಿ ಮಾಡಿದ್ದಾರೆ. ನಂತರ ಈ ಆಡುಗಳ ಭಾಗಗಳನ್ನು ತುಂಡು ಮಾಡಿ ಅಗ್ನಿ ಗೆ ಅರ್ಪಿಸಲಾಗಿದೆ. ಯಾಗದಲ್ಲಿ ಭಾಗವಹಿಸಿದ್ದ ಮುಖ್ಯ ಅರ್ಚಕ 'ಸೋಮ ರಸ' ಸೇವಿಸಿದ ಬಳಿಕ ಈ ಆಡುಗಳ ಮಾಂಸವನ್ನು ಸೇವಿಸಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ. ತಮಿಳು ನಾಡು, ಆಂಧ್ರ ಸೇರಿದಂತೆ ದೇಶದ ವಿವಿಧೆಡೆಗಳಿಂದ ಸುಮಾರು 17 ಅರ್ಚಕರು ಈ ಯಾಗದಲ್ಲಿ ಭಾಗವಹಿಸಿದ್ದರು.

ವೇದ ಕಾಲದಲ್ಲೂ ದೇವರ ಪ್ರೀತಿಗೆ ಪಾತ್ರರಾಗಲು ಪ್ರಾಣಿ ಬಲಿ ಅರ್ಪಿಸಲಾಗುತ್ತಿತ್ತು ಎಂದು ಯಾಗದ ಸಂಘಟಕರು ಡೆಕ್ಕನ್ ಹೆರಾಲ್ಡ್ ಗೆ  ತಿಳಿಸಿದ್ದಾರೆ. ಶ್ರೀ ರಾಮನೂ ಇಂತಹ ಧಾರ್ಮಿಕ ವಿಧಿವಿಧಾನಗಳನ್ನು ಏರ್ಪಡಿಸಿದ್ದ ಬಗ್ಗೆ ರಾಮಾಯಣದಲ್ಲಿ ಉಲ್ಲೇಖವಿದೆ. ಆದರೆ ಸಂಕೇತಿಗಳು ಪ್ರಾಣಿ ಬಲಿಯನ್ನು ದುಷ್ಟ ಕೃತ್ಯ ಎಂದು ಪರಿಗಣಿಸುವ ಅದ್ವೈತ ಸಿದ್ಧಾಂತವನ್ನು ಅನುಸರಿಸುವುದರಿಂದ ಈ ಯಾಗ ನಡೆಸಿದ್ದು ದುರದೃಷ್ಟಕರ ಎಂದು ಇನ್ನೊಂದು ಗುಂಪು  ಪ್ರತಿಕ್ರಿಯಿಸಿದ್ದಾರೆ. ಸಂಕೇತಿ ಆಗಿರುವ ಖ್ಯಾತ ವಿಮರ್ಶಕ ರಾಮಚಂದ್ರನ್ ಅವರು ' ಇದು ಅಮಾನವೀಯ, ದೇವರು ಪ್ರಾಣಿ ಬಲಿ ಸ್ವೀಕರಿಸುವುದಿಲ್ಲ . ಯಾವುದೇ ಧರ್ಮ ಕ್ರೂರತೆಯನ್ನು ಪ್ರತಿಪಾದಿಸುವುದಿಲ್ಲ . ಬದಲು ಪ್ರೀತಿ, ದಯೆಯನ್ನು ಸಾರುತ್ತವೆ ' ಎಂದು ಹೇಳಿದ್ದಾರೆ. ಸಂಸ್ಕೃತ ದಲ್ಲಿ ಡಾಕ್ಟೊರೇಟ್ ಮಾಡಿರುವ ಡಿ . ಸನತ್ ಕುಮಾರ್ ಅವರು ಈ ಯಾಗ ಆಯೋಜಿಸಿದ್ದು ಸರಿಯಲ್ಲ ಎಂದು ಇನ್ನೋರ್ವ ಹೆಸರು ಬಹಿರಂಗ ಪಡಿಸಲಿಚ್ಚಿಸದ ಸಮುದಾಯದ ಹಿರಿಯ ಮುಖಂಡ ಹೇಳಿದ್ದಾರೆ. 

ಸನತ್ ಕುಮಾರ್ ಅವರು ' ಈ ಬಗ್ಗೆ ಚರ್ಚೆ ಬೇಡ . ನಾನು ಯಾವುದೇ ಅಭಿಪ್ರಾಯ ಹೇಳುವುದಿಲ್ಲ. ನಾನು ಸಮುದಾಯದ ವಕ್ತಾರ ಅಲ್ಲ ' ಎಂದು ಹೇಳಿದ್ದಾರೆ. ಎಸ್ ಎಂ ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ನಿರ್ದಿಷ್ಟ ರಾಜಕೀಯ ನಾಯಕರೊಬ್ಬರ ಪ್ರಭಾವ ಕಡಿಮೆ ಮಾಡಲು ಇದೇ ಗ್ರಾಮದಲ್ಲಿ ಇಂತಹ ಯಾಗವೊಂದನ್ನು ಆಯೋಜಿಸಲಾಗಿತ್ತು. ಅದಕ್ಕಾಗಿ ನೂರಾರು ಆಡುಗಳನ್ನು ಬಲಿ ನೀಡಿ ಸುಮಾರು 50 ಲಕ್ಷ ರೂಪಾಯಿ ಖರ್ಚು ಮಾಡಲಾಗಿತ್ತು. ಆಗ ಸಂಕೇತಿ ಸಮುದಾಯದವರೇ ಆದ ಖ್ಯಾತ ಗಮಕಿ ಮತ್ತೂರು ಕೃಷ್ಣ ಮೂರ್ತಿ ಅವರು ಇದನ್ನು ವಿರೋಧಿಸಿದ್ದರು.

Courtesy : Deccan Herald

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News