ಹಿಜಾಬ್ ತಾರತಮ್ಯ; ಅಮೆರಿಕದಲ್ಲಿ ಪೊಲೀಸನ ವಿರುದ್ಧ ಕೇಸು
Update: 2016-05-04 18:14 IST
ಲಾಸ್ ಏಂಜಲೀಸ್, ಮೇ 4: ಹಿಜಾಬ್ ಧರಿಸಿದ ನೆಪದಲ್ಲಿ ತಾರತಮ್ಯಕ್ಕೊಳಗಾಗಿದ್ದೇವೆಎಂದು ಬೆಟ್ಟು ಮಾಡಿ ಕ್ಯಾಲಿಫೋರ್ನಿಯಾದಲ್ಲಿ ಎರಡು ಅರ್ಜಿಗಳನ್ನು ಸಲ್ಲಿಸಲಾಗಿದೆ. ಒಂದು ಪ್ರಕರಣದಲ್ಲಿ ಪೊಲೀಸ್ನ ವಿರುದ್ಧ ಆರೋಪ ಹೊರಿಸಿಲಾಗಿದೆ. ಸಂಶಯದ ಹೆಸರಲ್ಲಿ ಬಂಧಿಸಿದ ಮಹಿಳೆಯ ಹಿಜಾಬ್ನ್ನು ಬಲವಂತದಿಂದ ಪೊಲೀಸರು ಬಿಚ್ಚಿಸಿದ್ದಾರೆ ಎಂದುಆರೋಪ ವಿದೆ.
ಕೌನ್ಸಿಲ್ ಆನ್ ಅಮರಿಕನ್ ಇಸ್ಲಾಮಿಕ್ ರಿಲೇಶನ್ಸ್(ಕೆಯರ್) ಇವರಿಗಾಗಿ ಅರ್ಜಿ ಸಲ್ಲಿಸಿದೆ. ಇನ್ನೊಂದು ಅರ್ಜಿಯಲ್ಲಿ ಲಗುನ ಬೀಚ್ನಲ್ಲಿರುವ ಕೆಫೆಯಲ್ಲಿ ಕೂತಿದ್ದಾಗ ಹಿಜಾಬ್ ಧಾರಿಗಳಾದ ಆರು ಮಹಿಳೆಯರನ್ನು ರೆಸ್ಟೋರೆಂಟ್ ಮ್ಯಾನೇಜರ್ ಹೊರದಬ್ಬಿದ್ದಾನೆಂದು ಆರೋಪಿಸಲಾಗಿದೆ. ಲಾಸ್ ಏಂಜಲೀಸ್ ಸ್ಯಾನ್ಫ್ರಾನ್ಸಿಸ್ಕೋದಲ್ಲಿ ಜನಾಂಗೀಯ ತಾರತಮ್ಯ ಹೆಚ್ಚಳಗೊಳ್ಳುತ್ತಿದೆ ಎಂಬ ಪ್ರಚಾರ ಅಧಿಕಗೊಳ್ಳುತ್ತಿರುವ ವೇಳೆಯೇ ಹಿಜಾಬ್ನ ವಿರುದ್ಧ ತಾರತಮ್ಯದ ಕೇಸನ್ನು ದಾಖಲಿಸಲಾಗಿದೆ ಎಂದು ವರದಿಗಳು ತಿಳಿಸಿವೆ.