ಅಮೆರಿಕದ ಧಾರ್ಮಿಕ ಸ್ವಾತಂತ್ರ ಉಲ್ಲಂಘಕರ ಪಟ್ಟಿಯಲ್ಲಿ ಪಾಕಿಸ್ತಾನ
Update: 2016-05-04 20:06 IST
ನ್ಯೂಯಾರ್ಕ್, ಮೇ 4: ಪಾಕಿಸ್ತಾನದಲ್ಲಿ ಹಿಂದೂಗಳು, ಕ್ರೈಸ್ತರು, ಶಿಯಾಗಳು ಮತ್ತು ಅಹ್ಮದೀಯಾಗಳ ಮೇಲೆ ಪದೇ ಪದೇ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆ ದೇಶವನ್ನು ಧಾರ್ಮಿಕ ಸ್ವಾತಂತ್ರ ಉಲ್ಲಂಘಕರ ಪಟ್ಟಿಯಲ್ಲಿ ಸೇರಿಸಬೇಕು ಎಂದು ಅಮೆರಿಕ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ ಆಯೋಗ (ಯುಎಸ್‌ಸಿಐಆರ್‌ಎಫ್) ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ.
ನವಾಝ್ ಶರೀಫ್ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ವರದಿ, ‘‘2015ರಲ್ಲಿ ಪಾಕಿಸ್ತಾನ ಸರಕಾರ ವ್ಯವಸ್ಥಿತ ಹಾಗೂ ನಿರಂತರ ಧಾರ್ಮಿಕ ಸ್ವಾತಂತ್ರ ಉಲ್ಲಂಘನೆಯಲ್ಲಿ ತೊಡಗಿತ್ತು ಹಾಗೂ ಅದನ್ನು ಸಹಿಸಿಕೊಂಡಿತ್ತು’’ ಎಂದು ಹೇಳಿದೆ. 2016ರ ವಾರ್ಷಿಕ ವರದಿಯನ್ನು ಸೋಮವಾರ ಬಿಡುಗಡೆ ಮಾಡಲಾಗಿದೆ.