ರೋಗಿಯ ಜೊತೆ ಬಂದಿದ್ದ ವ್ಯಕ್ತಿಯಿಂದ ವೈದ್ಯಾಧಿಕಾರಿಗೆ ಜೀವಬೆದರಿಕೆ

Update: 2016-05-05 17:07 GMT

ಮಂಗಳೂರು, ಮೇ 5: ವಾಮಂಜೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರೇಣುಕಾರವರಿಗೆ ಚಿಕಿತ್ಸೆಗೆ ರೋಗಿಯೊಂದಿಗೆ ಬಂದಿದ್ದ ವ್ಯಕ್ತಿಯೊಬ್ಬ ಜೀವಬೆದರಿಕೆಯೊಡ್ಡಿದ ಘಟನೆ ಮೇ.3 ರಂದು ನಡೆದಿದೆ.

ಉಸ್ಮಾನ್ ಎಂಬ ರೋಗಿಯನ್ನು ಮುಹಮ್ಮದ್ ಸಿಲ್ಯಾನ್(ಮಯ್ಯದಿ) ಎಂಬವರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದರು. ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ವೆನ್ಲಾಕ್ ಆಸ್ಪತ್ರೆಗೆ ತೆರಳುವಂತೆ ವೈದ್ಯಾಧಿಕಾರಿಯವರು ಸೂಚಿಸಿದ್ದರು.

ಆದರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಸುಮಾರು 40 ನಿಮಿಷಗಳ ಕಾಲ ನಿಂತಿದ್ದ ರೋಗಿಯ ಬಗ್ಗೆ ವೈದ್ಯಾಧಿಕಾರಿಯವರು ಸಿಬ್ಬಂದಿಯೊಂದಿಗೆ ವಿಚಾರಿಸಿದಾಗ ಮುಹಮ್ಮದ್ ಸಿಲ್ಯಾನ್ ಅವಾಚ್ಯವಾಗಿ ನಿಂದಿಸಿ ಆಸ್ಪತ್ರೆಯ ನಾಮಫಲಕವನ್ನು ಒಡೆದುಹಾಕಿ ಆಸ್ಪತ್ರೆ ಕಟ್ಟಡವನ್ನು ಸುಟ್ಟು ಹಾಕುವುದಾಗಿ ಮತ್ತು ವೈದ್ಯರನ್ನು ಹೊರಗಡೆ ನೊಡಿಕೊಳ್ಳುವುದಾಗಿ ಜೀವ ಬೆದರಿಕೆಯೊಡ್ಡಿದ್ದಾನೆ ಎಂದು ವೈದ್ಯಾಧಿಕಾರಿ ರೇಣುಕಾ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News