ತೊಕ್ಕೊಟ್ಟು: ತೀಯಾ ಸೇವಾ ಸಹಕಾರಿ ಸಂಘದ ಲಾಂಛನ ಅನಾವರಣ

Update: 2016-05-05 17:45 GMT

ಉಳ್ಳಾಲ, ಮೇ 5: ತೊಕ್ಕೊಟ್ಟು ಒಳಪೇಟೆಯ ಶಿವಾನಿ ಕಾಂಪ್ಲೆಕ್ಸ್‌ನಲ್ಲಿ ತೀಯಾ ಸೇವಾ ಸಹಕಾರ ಸಂಘವು ಮೇ 9 ಸೋಮವಾರ ಉದ್ಘಾಟನೆಯಾಗಲಿದ್ದು, ಆ ಪ್ರಯುಕ್ತ ಸಂಘದ ಅಧಿಕೃತ ಲಾಂಛನವನ್ನು ತೊಕ್ಕೊಟ್ಟಿನಲ್ಲಿ ಅನಾವರಣಗೊಳಿಸಲಾಯಿತು.

ತೀಯಾ ಸಮಾಜದ ನಿರ್ದೇಶಕರಾದ ದಿನೇಶ್ ಕುಂಪಲ ಮಾತನಾಡಿ, ಅತ್ಯಂತ ಸಣ್ಣದಾಗಿದ್ದ ತೀಯಾ ಸಮುದಾಯವು ಎಲ್ಲರ ಬೆಂಬಲದೊಂದಿಗೆ ಬೆಳೆಯುತ್ತಿದ್ದು, 35 ವರುಷಗಳ ಹಿಂದೆ ಜಪ್ಪು ಜಗನ್ನಾಥರು ಸ್ಥಾಪಿಸಿದ ಭಗವತಿ ಬ್ಯಾಂಕ್ ಸಹಕಾರಿ ಸಂಘವಾಗಿ 7 ಶಾಖೆಗಳನ್ನು ಹೊಂದಿದೆ. ಸಮುದಾಯದ ಇನ್ನಷ್ಟು ಹಣಕಾಸು ಸಂಸ್ಥೆಗಳು,ವಿದ್ಯಾ ಸಂಸ್ಥೆಗಳು ಹುಟ್ಟಿ ಆರ್ಥಿಕ ಸಬಲೀಕರಣ ಹೊಂದಬೇಕು. ತೀಯಾ ಸಮುದಾಯದ ಹುಟ್ಟು ಮತ್ತು ನಡೆದು ಬಂದ ದಾರಿಯನ್ನು ಲಾಂಛನದಲ್ಲಿ ಬಿಂಬಿಸಲಾಗಿದ್ದು, ಮುಂದಿನ ಯುವ ಪೀಳಿಗೆಗೆ ಸಮುದಾಯದ ಚರಿತ್ರೆ ಅರಿಯುವಲ್ಲಿ ಈ ಲಾಂಛನ ಸಹಕಾರಿ ಎಂದು ಹೇಳಿದರು.

ತೀಯಾ ಸೇವಾ ಸಹಕಾರ ಸಂಘದ ಅಧ್ಯಕ್ಷರಾದ ಯು.ರವೀಂದ್ರ ಉಳ್ಳಾಲ್ ಮಾತನಾಡಿ, ಮೇ 9ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ ಖಾದರ್ ನೂತನ ಸಹಕಾರ ಸಂಘವನ್ನು ಉದ್ಘಾಟಿಸಲಿದ್ದು, ಉಳ್ಳಾಲ ಚೀರುಂಭ ಭಗವತೀ ಕ್ಷೇತ್ರದ ಆಚಾರ ಪಟ್ಟವರು ದೀಪ ಪ್ರಜ್ವಲಿಸಲಿದ್ದು, ಭಧ್ರತಾ ಕೋಶವನ್ನು ಸಹಕಾರಿ ಸಂಘಗಳ ಉಪನಿಬಂಧಕರಾದ ಬಿ.ಕೆ ಸಲೀಂ ಉದ್ಘಾಟಿಸಲಿದ್ದಾರೆಂದು ಹೇಳಿದರು.

ಭಾರತೀಯ ತೀಯಾ ಸಮುದಾಯದ ಅದ್ಯಕ್ಷ ಸದಾಶಿವ ಉಳ್ಳಾಲ್ ಲಾಂಛನ ಅನಾವರಣಗೊಳಿಸಿದರು.

ತೀಯಾ ಸೇವಾ ಸಹಕಾರ ಸಂಘದ ಉಪಾಧ್ಯಕ್ಷ ಯು.ಮಾಧವ ಸುವರ್ಣ ಒಂಭತ್ತುಕೆರೆ, ನಿರ್ದೇಶಕರುಗಳಾದ ಗಣೇಶ್ ಕೊಲ್ಯ,ಮನೋಹರ್ ಬೋಳಾರ್,ಅನಂತ್ ಕುಮಾರ್ ಮಾಸ್ತಿಕಟ್ಟೆ,ಪ್ರಕಾಶ್ ಎಮ್ ಉಳ್ಳಾಲ್,ಸುನಿಲ್ ಜೆ ಉಚ್ಚಿಲ್,ರಾಜೀವ್ ಬಿ ಒಂಭತ್ತುಕೆರೆ, ಗಂಗಾ ಜನಾರ್ಧನ್, ಚಿತ್ರಾ ಚಂದ್ರಕಾಂತ್, ಉಮೇಶ್ ಸಾಲಿಯಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News