ಮೇ 7-10 : ಆಳ್ವಾಸ್‌ನಲ್ಲಿ 16ನೆ ಅಂತರ್ ಕಾಲೇಜು ಸಾಂಸ್ಕೃತಿಕ ಯುವಜನೋತ್ಸವ

Update: 2016-05-05 17:55 GMT

ಮೂಡುಬಿದಿರೆ, ಮೇ 5: ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 16ನೆಯ ಅಂತರ-ಕಾಲೇಜು ಸಾಂಸ್ಕೃತಿಕ ಯುವಜನೋತ್ಸವ 2016 ಚಕ್ರವ್ಯೆಹವು ಮೇ 7ರಿಂದ 10ರವರೆಗೆ ವಿದ್ಯಾಗಿರಿಯಲ್ಲಿ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.

 ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ವಿಶ್ವವಿದ್ಯಾನಿಲಯಕ್ಕೆ ಒಳಪಟ್ಟ 150ಕ್ಕೂ ಹೆಚ್ಚು ತಾಂತ್ರಿಕ ಮಹಾವಿದ್ಯಾಲಯಗಳು ಇದರಲ್ಲಿ ಬಾಗವಹಿಸುತ್ತಿದ್ದು, 5 ಪ್ರಮುಖ ಸಾಂಸ್ಕೃತಿಕ ರಂಗಗಳಾದ ಸಂಗೀತ, ನೃತ್ಯ, ಸಾಹಿತ್ಯ, ನಾಟಕ ಮತ್ತು ಚಿತ್ರಕಲೆಗಳ 25 ಸ್ಪರ್ಧೆಗಳಲ್ಲಿ ಸುಮಾರು 5,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪರೀಕ್ಷಿಸಲಿದ್ದಾರೆ.

ಇದರೊಂದಿಗೆ ಚಿತ್ರೋತ್ಸವ ಎಂಬ ಕಿರುಚಿತ್ರ ಉತ್ಸವ ಕೂಡಾ ಮನರಂಜಿಸಲಿದೆ. ಜತೆಗೆ ವಿಭಿನ್ನ ರೀತಿಯ ವಸ್ತುಪ್ರದರ್ಶನವು ಈ ಉತ್ಸವದ ಅಂಗವಾಗಿದೆಯಲ್ಲದೆ, ಅಂಚೆ ಚೀಟಿ, ಕಲಾಕೃತಿಗಳು, ಚಿತ್ರಗಳು, ಮರದ ಆಟಿಕೆಗಳು, ಇಲೆಕ್ಟ್ರೋನಿಕ್ ಎಕ್ಸ್‌ಪೋ ಕರ್ನಾಟಕದ ಮತ್ತು ದಕ್ಷಿಣ ಕನ್ನಡದ ಪ್ರವಾಸಿ ತಾಣಗಳ ಬಗ್ಗೆ, ಕನ್ನಡ ರಾಜ್ಯದ ಬಗ್ಗೆ ಮಾಹಿತಿ ಕೊಡುವ ಮತ್ತು ಅದರ ವೈವ ಸಾರುವ ಪ್ರದರ್ಶನಗಳು ಸೇರಿವೆ ಎಂದರು.

ಉತ್ಸವವನ್ನು ಚಲನಚಿತ್ರ ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ್ ಮೇ.7ರಂದು ಬೆಳಗ್ಗೆ 10ಕ್ಕೆ ಉದ್ಘಾಟಿಸಲಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಯುವಜನ ಸೇವೆ ಮತ್ತು ಮೀನುಗಾರಿಕೆ ಸಚಿವ ಕೆ.ಅಯಚಂದ್ರ ಜೈನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪ್ರತಿ ದಿನ ಸಂಜೆ ಆಳ್ವಾಸ್ ಸಾಂಸ್ಕೃತಿಕ ವೈಭ ನಡೆಯಲಿದೆಎಂದು ತಿಳಿಸಿದರು.


ಮೇ 10ರಂದು ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು, ಬೆಳಗಾವಿಯ ವಿಟಿಯುನ ರಿಜಿಸ್ಟ್ರಾರ್ ಡಾ.ಕೆ.ಇ.ಪ್ರಕಾಶ್, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಮುಖ್ಯ ಅತಿಥಿಗಳಾಗಿ ಬಾಗವಹಿಸಿ ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ ಎಂದರು.

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್, ಆಳ್ವಾಸ್‌ನ ಮಾಧ್ಯಮ ಸಂಪರ್ಕಾಧಿಕಾರಿ ಡಾ.ಪದ್ಮನಾಭ ಶೆಣೈ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News