ಅರ್ಜಿ ಆಹ್ವಾನ

Update: 2016-05-05 18:07 GMT

ವಸತಿ ನಿಲಯ
 ಮಂಗಳೂರು, ಮೇ 5: ಸಮಾಜ ಕಲ್ಯಾಣ ಇಲಾಖಾ ವತಿಯಿಂದ ಮತ್ತು ಪರಿಶಿಷ್ಟ ವರ್ಗ ಕಲ್ಯಾಣ ಇಲಾಖಾ ವತಿಯಿಂದ ನಡೆಸಲ್ಪಡುತ್ತಿರುವ ವಿದ್ಯಾರ್ಥಿ ನಿಲಯ/ಆಶ್ರಮ ಶಾಲೆಗಳಿಗೆ 2016-17ನೆ ಸಾಲಿಗೆ ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸುವ ಬಗ್ಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ನಮೂನೆಯನ್ನು ಸಂಬಂಧಪಟ್ಟ ವಿದ್ಯಾರ್ಥಿ ನಿಲಯಗಳಿಂದ ಅಥವಾ ಸಹಾಯಕ ನಿರ್ದೇಶಕರು (ಗ್ರೇಡ್-1) ಸಮಾಜ ಕಲ್ಯಾಣ ಇಲಾಖೆ ಮಂಗಳೂರು, ಕಚೇರಿಯಿಂದ ಪಡೆಯಬಹುದು. ಅರ್ಜಿ ಸಲ್ಲಿಸಲು ಮೇ 28 ಕೊನೆಯ ದಿನವಾಗಿದೆ. ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, (ಗ್ರೇಡ್-1) ಸಮಾಜ ಕಲ್ಯಾಣ ಇಲಾಖೆ ಮಂಗಳೂರು ಅಂಬೇಡ್ಕರ್ ಭವನ ಕೊಡಿಯಾಲ ಬೈಲು ಮಂಗಳೂರು, ದೂ.ಸಂ: 0824-2441269 ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

ಪ್ರಯೋಗ ಶಾಲಾ ತಂತ್ರಜ್ಞರ ಹುದ್ದೆ
 ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿಯಲ್ಲಿ ತಾಲೂಕು ಆಸ್ಪತ್ರೆ ಪುತ್ತೂರು, ಬೆಳ್ತಂಗಡಿ, ಸುಳ್ಯದ ರಕ್ತ ಶೇಖರಣ ಘಟಕಕ್ಕೆ ಗುತ್ತಿಗೆ ಆಧಾರದ ಮೇಲೆ ತಲಾ 1 ಪ್ರಯೋಗ ಶಾಲಾ ತಂತ್ರಜ್ಞರನ್ನು ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ. ಆಸಕ್ತರು ಮೇ 18ರಂದು ಸಂಜೆ 4 ಗಂಟೆಯೊಳಗೆ ಜಿಲ್ಲಾ ಏಡ್ಸ್ ತಡೆಗಟ್ಟುಕೆ ಮತ್ತು ನಿಯಂತ್ರಣ ಘಟಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನೆಹರೂ ಮೈದಾನ ರಸ್ತೆ, ಮಂಗಳೂರು ಇಲ್ಲಿಗೆ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವಂತೆ ಹಾಗೂ ಹೆಚ್ಚಿನ ಮಾಹಿತಿಗೆ ದೂ.ಸಂ: 0824-2441710 ಸಂಪರ್ಕಿಸಲು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳ ಪ್ರಕಟನೆ ತಿಳಿಸಿದೆ.

ವಿದ್ಯಾರ್ಥಿ ನಿಲಯ
ಉಡುಪಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಜಾತಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಗಳಾದ ಕುಂಜಿಬೆಟ್ಟು, ಯಡ್ತಾಡಿ, ಕೂರಾಡಿ ಪಡುಬಿದ್ರೆ ಹಾಗೂ ಬಾಲಕಿಯರ ವಿದ್ಯಾರ್ಥಿ ನಿಲಯಗಳಾದ ಕಾಪು, ಕೂರಾಡಿ, ಯಡ್ತಾಡಿ, ಬನ್ನಂಜೆ ಹಾಗೂ ಪರಿಶಿಷ್ಟ ವರ್ಗದ ವಿದ್ಯಾರ್ಥಿ ನಿಲಯ ಆದಿಉಡುಪಿ ಮತ್ತು ಬನ್ನಂಜೆಯ ಪರಿಶಿಷ್ಟ ವರ್ಗದ ಆಶ್ರಮ ಶಾಲೆಗಳಲ್ಲಿ ಖಾಲಿ ಇರುವ ಸ್ಥಾನಗಳಿಗೆ ವಿದ್ಯಾರ್ಥಿಗಳ ಸೇರ್ಪಡೆಗಾಗಿ 5ರಿಂದ 10ನೆ ತರಗತಿ ಕಲಿಯುತ್ತಿರುವ ವಿದ್ಯಾರ್ಥಿ ಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಯನ್ನು ವಿದ್ಯಾರ್ಥಿ ನಿಲಯಗಳಲ್ಲಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಯಲ್ಲಿ ಉಚಿತವಾಗಿ ಪಡೆದು ತೇರ್ಗಡೆ ಪ್ರಮಾಣ ಪತ್ರ ಹಾಗೂ 2 ಭಾವಚಿತ್ರದೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಮೇ 31ರೊಳಗೆ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ತಾಪಂ ಉಡುಪಿ ಇವರಿಗೆ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 ವಸತಿ ಯೋಜನೆ
ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ 2015-16ನೆ ಸಾಲಿನ ಡಾ.ಬಿ.ಆರ್.ಅಂಬೇಡ್ಕರ್ ನಿವಾಸ ಯೋಜನೆಯನ್ನು ಅನುಷ್ಠಾನಗೊಳಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯು 2011ರ ಸೂಚಿತ ಆರ್ಥಿಕ ಮತ್ತು ಜಾತಿ ಗಣತಿಯಲ್ಲಿ ಗುರುತಿಸಲಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಸತಿ ರಹಿತರ ಪಟ್ಟಿಯಲ್ಲಿ ಸ್ವಂತ ನಿವೇಶನ ಹೊಂದಿರುವ ಅರ್ಹ ಫಲಾನುಭವಿಗಳು ಸೂಕ್ತ ದಾಖಲೆಗಳೊಂದಿಗೆ ವಸತಿ ಸೌಲಭ್ಯ ಪಡೆಯಲು ಮೇ 25ರೊಳಗೆ ಅರ್ಜಿ ಸಲ್ಲಿಸಬಹುದು ಎಂದು ನಗರಸಭಾ ಪೌರಾಯುಕ್ತರ ಪ್ರಕಟನೆ ತಿಳಿಸಿದೆ.

ವಾಜಪೇಯಿ ವಸತಿ ಯೋಜನೆ
ವಾಜಪೇಯಿ ನಗರ ವಸತಿ ಯೋಜನೆಯಡಿ ಮನೆ ನಿರ್ಮಿಸಲು ಪ್ರತೀ ಮನೆಯ ಘಟಕ ವೆಚ್ಚ 2 ಲಕ್ಷ ರೂ.ಗಳಾಗಿದ್ದು, ಈ ಮೊತ್ತದಲ್ಲಿ 1.20 ಲಕ್ಷ ರೂ. ಸರಕಾರದ ಸಹಾಯಧನ, 30,000 ರೂ. ಫಲಾನುಭವಿಗಳ ವಂತಿಗೆ ಹಾಗೂ 50,000 ರೂ. ಬ್ಯಾಂಕಿ ನಿಂದ ಸಾಲ ಅಥವಾ ಹೆಚ್ಚುವರಿ ಫಲಾನುಭವಿಗಳ ವಂತಿಕೆ ಒಳಗೊಂಡಿದೆ. 2015-16ನೆ ಸಾಲಿನಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ 30,000 ರೂ.ಗಳ ವಂತಿಗೆಯನ್ನು ಸರಕಾರದ ವತಿಯಿಂದ ಭರಿಸಲಾಗುವುದು. ಉಳಿದ 50,000 ರೂ. ಬ್ಯಾಂಕ್ ಸಾಲ/ ಫಲಾನುಭವಿಯ ವಂತಿಗೆ ರೂಪದಲ್ಲಿರುತ್ತದೆ. ಉಡುಪಿ ನಗರಸಭೆಗೆ 200 ಗುರಿಯನ್ನು ನಿಗದಿಪಡಿಸಿದ್ದು, ಈ ಬಗ್ಗೆ ಈಗಾಗಲೇ 15 ಅರ್ಜಿಗಳು ಮಾತ್ರ ಬಂದಿವೆ. ಆದುದರಿಂದ ಸ್ವಂತ ನಿವೇಶನ ಹೊಂದಿರುವ ಅರ್ಹ ಫಲಾನುಭವಿಗಳು ಸೂಕ್ತ ದಾಖಲೆಗಳೊಂದಿಗೆ ಮೇ 25ರೊಳಗೆ ಅರ್ಜಿ ಸಲ್ಲಿಸುವಂತೆ ನಗರಸಭಾ ಪೌರಾಯುಕ್ತರ ಪ್ರಕಟನೆ ತಿಳಿಸಿದೆ. ಮಕ್ಕಳ ಬೇಸಿಗೆ ಶಿಬಿರ
ಕೃಷಿ ವಿಜ್ಞಾನ ಕೇಂದ್ರ ಮಂಗಳೂರು, ಪ್ರೊಫೆಶನಲ್ ಫಿಶರೀಶ್ ಗ್ರ್ಯಾಜುಯೇಟ್ಸ್ ೆರಂ ಮುಂಬೈ, ಸ್ಕ್ಯೂಬ ಸಾಂಸ್ಕೃತಿಕ ತಂಡ, ಮೀನುಗಾರಿಕೆ ಮಹಾವಿದ್ಯಾಲಯ ಮತ್ತು ಸಂಕೇತ ಮಂಗಳೂರು ಜಂಟಿಯಾಗಿ ವಿದ್ಯಾರ್ಥಿಗಳಲ್ಲಿ ಕೃಷಿ ಚಟುವಟಿಕೆಗೆ ಉತ್ತೇಜನ ನೀಡಲು ಮಕ್ಕಳ ಬೇಸಿಗೆ ಶಿಬಿರ ಮಂಗಳೂರಿನಲ್ಲಿ ಮೇ 9ರಿಂದ 14ರವರೆಗೆ ನಡೆಯಲಿದೆ. ಶಿಬಿರದಲ್ಲಿ ಮಕ್ಕಳಿಗೆ ಹೈನುಗಾರಿಕೆ, ಕೋಳಿ ಸಾಕಣೆ, ಕೃಷಿ, ಅಲಂಕಾರಿಕ ಮೀನು ಸಾಕಣೆ, ವೈಜ್ಞ್ಞಾನಿಕ ಚಲನಚಿತ್ರ ವೀಕ್ಷಣೆ ಮತ್ತು ರಂಗ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸಲಾಗುವುದು. ಶಿಬಿರವು ಮಂಗಳೂರಿನ ಎಕ್ಕೂರಿನಲ್ಲಿರುವ ಮೀನುಗಾರಿಕಾ ಮಹಾವಿದ್ಯಾಲಯದ ಆವರಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯಲಿದೆ. ವಿದ್ಯಾರ್ಥಿಗೆ ಪ್ರವೇಶ ಶುಲ್ಕ 500 ರೂ. ನಿಗದಿಪಡಿಸಲಾಗಿದೆ. ಆಸಕ್ತರು (ಮೊ.ಸಂ. 7795249745) ಸಂಪರ್ಕಿಸಿ ಹೆಸರು ನೋಂದಾಯಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News