ಒಂಬತ್ತು ರಾಷ್ಟ್ರಗಳಲ್ಲಿ 150 ಶೋರೂಮ್‌ಗಳು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಸಾಧನೆ

Update: 2016-05-05 18:17 GMT

ಮಂಗಳೂರು, ಮೇ 5: ವಿಶ್ವದಲ್ಲಿ ಬೃಹತ್ ಚಿನ್ನಾಭರಣ ಮಾರಾಟ ಮಳಿಗೆಗಳಲ್ಲೊಂದಾಗಿರುವ ಮಲಬಾರ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಇದೀಗ 9 ರಾಷ್ಟ್ರಗಳಲ್ಲಿ 150 ಶೋರೂಂಗಳನ್ನು ಹೊಂದುವ ಮೂಲಕ ಇನ್ನೊಂದು ಮೈಲಿಗಲ್ಲನ್ನು ಸಾಧಿಸಿದೆ. ಸಂಸ್ಥೆಯ ಬ್ರಾಂಡ್ ಅಂಬಾಸಿಡರ್ ಖ್ಯಾತ ಬಾಲಿವುಡ್ ನಟಿ ಬೇಗಂ ಕರೀನಾ ಕಪೂರ ಖಾನ್ ಇತ್ತೀಚೆಗೆ ಸಂಸ್ಥೆಯ 149ನೆ ಶೋರೂಂನ್ನು ಮೆಹ್ದಿಪಟ್ಣಂ ಮತ್ತು 150ನೆ ಶೋರೂಂನ್ನು ಬೆಳಗಾವಿಯಲ್ಲಿ ಉದ್ಘಾಟಿಸಿದರು.
ಈ ವಿಶೇಷ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ ತನ್ನ ಗ್ರಾಹಕರಿಗಾಗಿ ನೂತನ ವಿನ್ಯಾಸಗಳ ವಿಶಿಷ್ಟ ಆಭರಣಗಳ ಸಂಗ್ರಹವನ್ನು ವಿಶೇಷ ಬೆಲೆಗಳಲ್ಲಿ ನೀಡುತ್ತಿದೆ. ಅಲ್ಲದೇ ಬೆಲೆಗಳ ಏರಿಳಿತದ ವಿರುದ್ಧ ರಕ್ಷಣೆಯಾಗಿ ಗ್ರಾಹಕರು ತಮ್ಮ ಆಯ್ಕೆಯ ಆಭರಣಗಳನ್ನು ಅಡ್ವಾನ್ಸ್ ಬುಕ್ಕಿಂಗ್ ಮಾಡುವ ಸೌಲಭ್ಯವನ್ನು ಒದಗಿಸಿದೆ.
1993ರಲ್ಲಿ ಕಲ್ಲಿಕೋಟೆಯಲ್ಲಿ ಪುಟ್ಟ ಆಭರಣಗಳ ಅಂಗಡಿ ಯಾಗಿ ಆರಂಭಗೊಂಡಿದ್ದ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಗುಣಮಟ್ಟ ಮತ್ತು ಶುದ್ಧತೆಯೊಂದಿಗೆ ರಾಜಿ ಮಾಡಿಕೊಳ್ಳದ ತನ್ನ ನಿಲುವಿನಿಂದಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಉದ್ಯಮ ಕೂಟವಾಗಿದೆ. ಯುಎಇ, ಒಮನ್, ಸೌದಿ ಅರೇಬಿಯ, ಕತರ್, ಕುವೈತ್, ಬಹರೈನ್, ಸಿಂಗಾಪುರ, ಮಲೇಶ್ಯಗಳಲ್ಲಿ ತನ್ನ ಮಳಿಗೆಗಳನ್ನು ಹೊಂದಿದೆ. ರಿಯಲ್ ಎಸ್ಟೇಟ್ ಮತ್ತು ಪ್ರಾಪರ್ಟಿ ಮ್ಯಾನೇಜ್‌ಮೆಂಟ್, ಬ್ರಾಂಡೆಡ್ ವಾಚ್, ಫರ್ನಿಚರ್ ಮತ್ತು ಸಮಗ್ರ ಗೃಹ ಅಗತ್ಯಗಳ ಮಾರಾಟ ಕ್ಷೇತ್ರಗಳಲ್ಲೂ ಮಲಬಾರ್ ಗ್ರೂಪ್ ಯಶಸ್ಸು ಸಾಧಿಸಿದೆ ಎಂದು ಮಲಬಾರ್ ಗ್ರೂಪ್‌ನ ಅಧ್ಯಕ್ಷ ಎಂ.ಪಿ.ಅಹ್ಮದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News