×
Ad

ಜಿಶಾಗೆ ನ್ಯಾಯ ಸಿಗುವವರೆಗೆ ಮತದಾನ ಬಹಿಷ್ಕಾರಕ್ಕೆ ರಸೂಲ್ ಪೂಕುಟ್ಟಿ ಕರೆ

Update: 2016-05-06 19:50 IST

ತಿರುವನಂತಪುರಂ, ಮೇ. 6: ದಲಿತ ಕಾನೂನು ವಿದ್ಯಾರ್ಥಿನಿಯ ಭೀಕರ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಂತೆ ರಾಜ್ಯಾದ್ಯಂತ ಪ್ರತಿಭಟನೆ ತೀವ್ರಗೊಳ್ಳುತ್ತಿದೆ. ಈ ನಡುವೆ ಆಸ್ಕರ್ ವಿಜೇತ ಧ್ವನಿ ತಂತ್ರಜ್ಞ , ಕೇರಳದ ರಸೂಲ್ ಪೂಕುಟ್ಟಿ ಅವರು ಟ್ವೀಟ್ ಮಾಡಿ ' ಈ ಪ್ರಕರಣದಲ್ಲಿ ನ್ಯಾಯ ಸಿಗುವವರೆಗೆ ಮತದಾನ ಬಹಿಷ್ಕರಿಸೋಣ (‘no vote till justice’) ಎಂದು ಹೇಳಿದ್ದಾರೆ. " ಕೇರಳ ಎಂದರೆ ದೆಹಲಿಯಲ್ಲ. ನಾವು ಇನ್ನಷ್ಟು ದೃಢವಾಗಿ ನಿಲ್ಲಬೇಕು " (“Kerala is not Delhi, we have to be assertive.”) ಎಂದೂ ಅವರು ಹೇಳಿದ್ದಾರೆ.  ಇದೇ ರೀತಿಯ ಅಭಿಪ್ರಾಯವನ್ನು ಇನ್ನೂ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತ ಪಡಿಸಿದ್ದಾರೆ. 

ಕೇರಳ ಹಾಗು ಇತರ ನಾಲ್ಕು ರಾಜ್ಯಗಳಲ್ಲಿ ಈ ತಿಂಗಳ 16 ರಂದು ವಿಧಾನಸಭಾ ಚುನಾವಣೆ ನಡೆಯಲಿದ್ದು 19 ರಂದು ಫ಼ಲಿತಾಂಶ ಪ್ರಕಟವಾಗಲಿದೆ. 

೩೦ ವರ್ಷ ವಯಸ್ಸಿನ ದಲಿತ ಯುವತಿಯನ್ನು ಅವಳ ಮನೆಯಲ್ಲೇ ಅತ್ಯಂತ ಭೀಕರವಾಗಿ ಅತ್ಯಾಚಾರ ಮಾಡಿ ಕೊಂದು ಹಾಕಲಾಗಿತ್ತು. ಅವರ ಕರುಳನ್ನು ಬಗೆದು ಹೊರಗೆ ಹಾಕಲಾಗಿತ್ತು. ಈ ಪ್ರಕರಣದಲ್ಲಿ ಪೊಲೀಸರು ವಿಳಂಬ ನೀತಿ ಅನುಸರಿಸಿದ್ದರು ಎಂದು ಸಾರ್ವಜನಿಕರು ಆರೋಪಿಸಿದ್ದರು. ಇದೀಗ ಪ್ರಕರಣದ ಆರೋಪಿಯ ರೇಖಾ ಚಿತ್ರ ಬಿಡುಗಡೆ ಮಾಡಲಾಗಿದ್ದು ಈವರೆಗೆ ಯಾರನ್ನೂ ಬಂಧಿಸಿಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News