×
Ad

ಲಂಡನ್ ಮೇಯರ್ ಆಗಿ ಸಾದಿಕ್ ಖಾನ್ ಆಯ್ಕೆ

Update: 2016-05-06 23:07 IST

ಲಂಡನ್,ಮೇ 7: ಲಂಡನ್ ಮೇಯರ್ ಚುನಾವಣೆಯ ಮೊದಲ ಪ್ರಾಶಸ್ತ್ಯದ ಮತಗಳ ಎಣಿಕೆ ಶುಕ್ರವಾರ ಆರಂಭಗೊಂಡಿದ್ದು, ಲೇಬರ್ ಪಕ್ಷದ ಅಭ್ಯರ್ಥಿ ಸಾದಿಕ್ ಖಾನ್, ತನ್ನ ಎದುರಾಳಿಯಾದ ಕನ್ಸರ್ವೇಟಿವ್ ಪಕ್ಷದ ಝಾಕ್ ಗೋಲ್ಡ್‌ಸ್ಮಿತ್ ಅವರಿಗಿಂತ ಭಾರೀ ಮುನ್ನಡೆಯನ್ನು ಸಾಧಿಸಿದ್ದಾರೆ.

ಈವರೆಗೆ ಶೇ.80ರಷ್ಟು ಪ್ರಥಮ ಪ್ರಾಶಸ್ತ್ಯದ ಮತಗಳ ಎಣಿಕೆಯಾಗಿದ್ದು, ಖಾನ್ ಅವರು ಝಾಕ್ ಗೋಲ್ಡ್‌ಸ್ಮಿತ್ ಅವರಿಗಿಂತ ಶೇ.10 ಅಂಕಗಳನ್ನು ಮುಂದಿದ್ದಾರೆ. ದ್ವಿತೀಯ ಪ್ರಾಶಸ್ತ್ಯದ ಮತಗಳ ಎಣಿಕೆಯ ಬಳಿಕ ಈ ಅಂಕವು ಕನಿಷ್ಠ 12 ಅಂಕಗಳಿಗೆ ಏರುವ ನಿರೀಕ್ಷೆಯಿದೆಯೆಂದು ಚುನಾವಣಾ ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.

ಖಾನ್ ಅವರು ತನ್ನ ಎದುರಾಳಿಗಿಂತ ಉತ್ತಮವಾದ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ. ಆದರೆ ಕನ್ಸರ್ವೇಟಿವ್ ಪಕ್ಷದ ಪ್ರಾಬಲ್ಯವಿರುವ ಕೆಲವು ಕ್ಷೇತ್ರಗಳ ಮತಏಣಿಕೆ ಫಲಿತಾಂಶವು ಇನ್ನಷ್ಟೇ ಘೋಷಣೆಯಾಗಬೇಕಿದೆ. ಕಳೆದ ಎಂಟು ವರ್ಷಗಳ ಲಂಡನ್ ಮೇಯರ್ ಸ್ಥಾನವು ಕನ್ಸರ್ವೇಟಿವ್ ಪಕ್ಷದ ವಶದಲ್ಲಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News