×
Ad

ಪ್ಲೂಟೊ ಉಪಗ್ರಹ ಹೈಡ್ರಾದಲ್ಲಿ ಜಲ ರೂಪದ ಮಂಜು

Update: 2016-05-06 23:11 IST

ವಾಶಿಂಗ್ಟನ್, ಮೇ 6: ನಾಸಾದ ‘ನ್ಯೂ ಹರೈಝನ್ಸ್’ ಶೋಧ ನೌಕೆಯು ಪ್ಲೂಟೊ ಗ್ರಹದ ನಾಲ್ಕು ಉಪಗ್ರಹಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಭೂಮಿಗೆ ಕಳುಹಿಸಿದ್ದು, ಶೀತಲ ಗ್ರಹದ ಉಪಗ್ರಹಗಳಿಗೆ ಸಂಬಂಧಿಸಿದ ಮೊದಲ ಮಾಹಿತಿಗಳು ಇದಾಗಿವೆ. ಹೈಡ್ರಾ ಉಪಗ್ರಹದಲ್ಲಿ ಜಲರೂಪದ ಮಂಜು ಭಾರೀ ಪ್ರಮಾಣದಲ್ಲಿ ಇರುವುದು ಪತ್ತೆಯಾಗಿದೆ. ಹೈಡ್ರಾದ ತರಂಗಾಂತರವು ಪ್ಲೂಟೊದ ಅತಿ ದೊಡ್ಡ ಉಪಗ್ರಹ ಚಾರನ್‌ನ ತರಂಗಾಂತರಕ್ಕೆ ಸಮವಾಗಿದೆ. ಈ ಉಪಗ್ರಹದಲ್ಲಿಯೂ ಹರಳುಗಟ್ಟಿದ ಜಲರೂಪದ ಮಂಜುಗಡ್ಡೆಯಿದೆ.
ಆದರೆ, ಹೈಡ್ರಾದ ಜಲಮಂಜು ಹೀರಿಕೆ ಬ್ಯಾಂಡ್ ಚಾರನ್‌ಗಿಂತಗಲೂ ಹೆಚ್ಚು ಆಳವಾಗಿದೆ. ಅಂದರೆ ಹೈಡ್ರಾದ ಮೇಲ್ಮೈಯಲ್ಲಿರುವ ಮಂಜಿನ ಸ್ಫಟಿಕಗಳು ದೊಡ್ಡದಾಗಿವೆ ಹಾಗೂ ನಿರ್ದಿಷ್ಟ ಕೋನಗಳಲ್ಲಿ ಚಾರನ್‌ಗಿಂತ ಹೆಚ್ಚಿನ ಬೆಳಕನ್ನು ಪ್ರತಿಫಲಿಸುತ್ತವೆ. ಪ್ಲೂಟೊದ ಅತ್ಯಂತ ಹೊರಗಿನ ಸಣ್ಣ ಉಪಗ್ರಹ ಹೈಡ್ರಾ ಸುಮಾರು 400 ಕೋಟಿ ವರ್ಷಗಳ ಹಿಂದೆ ರೂಪುಗೊಂಡಿತು ಎಂದು ಭಾವಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News