ಬಿಸಿಸಿಐ ಅಧ್ಯಕ್ಷ ಸ್ಥಾನ ತ್ಯಜಿಸಲು ಮನೋಹರ್ ಸಿದ್ಧತೆ

Update: 2016-05-06 18:06 GMT

ಮುಂಬೈ, ಮೇ 6: ಕಳೆದ ಎರಡು ವಾರಗಳಲ್ಲಿ ಭಾರತದ ಕ್ರಿಕೆಟ್ ಮಂಡಳಿಯಲ್ಲಿ ಕೆಲವು ಬದಲಾವಣೆ ನಡೆದಿದೆ. ಹಾಲಿ ಅಧ್ಯಕ್ಷ ಶಶಾಂಕ್ ಮನೋಹರ್ ಇದೇ ತಿಂಗಳಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಸಾಧ್ಯತೆಯಿದೆ.

ಐಸಿಸಿ ಸ್ವತಂತ್ರ ಚೇರ್‌ಮೆನ್ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಮನೋಹರ್ ಸದ್ಯ ಪುಣೆ ಸಮೀಪದ ಮಹಾಬಲೇಶ್ವರಕ್ಕೆ ರಜೆ ಮೇಲೆ ತೆರಳಿದ್ದು, ನಗರಕ್ಕೆ ವಾಪಸಾದ ತಕ್ಷಣವೇ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲಿದ್ದಾರೆ.

ಮನೋಹರ್ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಿಸಿಸಿಐ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದರು. ತಿಂಗಳಾಂತ್ಯದಲ್ಲಿ ಗುಪ್ತ ಮತದಾನದ ಮೂಲಕ ಐಸಿಸಿಗೆ ಮೊದಲ ಬಾರಿ ಸ್ವತಂತ್ರ ಚೇರ್‌ಮೆನ್‌ರನ್ನು ಆಯ್ಕೆ ಮಾಡಲಾಗುತ್ತದೆ. ಹೊಸ ಚೇರ್‌ಮೆನ್ ಮೇ 2016 ರಿಂದ 2021ರ ತನಕ ಅಧಿಕಾರದಲ್ಲಿರುತ್ತಾರೆ.

ಮನೋಹರ್‌ಗೆ ಬಿಸಿಸಿಐ ಅಧ್ಯಕ್ಷರಾಗಿ ಮುಂದುವರಿಯಲು ಇಷ್ಟವಿಲ್ಲ. ಐಸಿಸಿಯಲ್ಲಿ ಉನ್ನತ ಹುದ್ದೆ ಗಿಟ್ಟಿಸಿಕೊಂಡರೆ ಐದು ವರ್ಷ ಅಧಿಕಾರದಲ್ಲಿರಬಹುದು. ಐಸಿಸಿಯ ಎಲ್ಲ ಕ್ರಿಕೆಟ್ ಮಂಡಳಿಯ ಸದಸ್ಯರನ್ನು ಒಟ್ಟಿಗೆ ಸೇರಿಸಿಕೊಂಡು ಉತ್ತಮ ಆಡಳಿತ ನೀಡಬಹುದು. ವೆಸ್ಟ್‌ಇಂಡೀಸ್ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಗಳು ಈಗಾಗಲೇ ಮನೋಹರ್‌ಗೆ ಬೆಂಬಲ ವ್ಯಕ್ತಪಡಿಸಿವೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News