×
Ad

ಸಹೋದರನನ್ನು ಟೀಕಿಸಿದ ಜೆಮಿಮಾ ಗೋಲ್ಡ್‌ಸ್ಮಿತ್

Update: 2016-05-07 17:59 IST

ಲಂಡನ್, ಮೇ 7: ಲಂಡನ್ ಮೇಯರ್ ಚುನಾವಣೆಯಲ್ಲಿ ತನ್ನ ಎದುರಾಳಿ ಅಭ್ಯರ್ಥಿ ಸಾದಿಕ್ ಖಾನ್ ವಿರುದ್ಧ ಜನಾಂಗೀಯವಾದಿ ಪ್ರಚಾರವನ್ನು ಕೈಗೊಂಡಿರುವುದಕ್ಕಾಗಿ ಟೋರಿ ಝ್ಯಾಕ್ ಗೋಲ್ಡ್‌ಸ್ಮಿತ್‌ರನ್ನು ಸ್ವತಃ ಸಹೋದರಿ ಜೆಮಿಮಾ ಗೋಲ್ಡ್‌ಸ್ಮಿತ್ ತರಾಟೆಗೆ ತೆಗೆದುಕೊಂಡಿದ್ದಾರೆ.

ಜೆಮಿಮಾ ಗೋಲ್ಡ್‌ಸ್ಮಿತ್ ಪಾಕಿಸ್ತಾನದ ರಾಜಕಾರಣಿ ಹಾಗೂ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್‌ರ ಮಾಜಿ ಪತ್ನಿಯಾಗಿದ್ದಾರೆ.

ಮೇಯರ್ ಚುನಾವಣೆಯಲ್ಲಿ ಸಾದಿಕ್ ಖಾನ್ ವಿಜಯಿಯಾಗಿರುವುದನ್ನು ಸ್ಮರಿಸಬಹುದಾಗಿದೆ.

ಸಾದಿಕ್ ಖಾನ್‌ರನ್ನು ಉಗ್ರಗಾಮಿಗಳಿಗೆ ಸಮೀಕರಿಸುವ ಪ್ರಚಾರವನ್ನು ಗೋಲ್ಡ್‌ಸ್ಮಿತ್ ಕೈಗೊಂಡಿದ್ದರು.

 ‘‘ನನ್ನ ಸಹೋದರ ಪರಿಸರ ಸ್ನೇಹಿ ಹಾಗೂ ನೇರ ನಡೆಯ ಸ್ವತಂತ್ರ ಮನೋಭಾವದ ವ್ಯಕ್ತಿ ಎಂಬುದಾಗಿ ನನಗೆ ಗೊತ್ತು. ಆದರೆ, ಅವರ ಪ್ರಚಾರ ನನ್ನ ಈ ಕಲ್ಪನೆಗೆ ಪೂರಕವಾಗಿಲ್ಲ. ಲಂಡನ್‌ನ ಪ್ರಥಮ ಮುಸ್ಲಿಂ ಮೇಯರ್ ಸಾದಿಕ್ ಖಾನ್‌ರಿಗೆ ಅಭಿನಂದನೆಗಳು’’ ಎಂದು ಜೆಮಿಮಾ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News