ಇನ್ನೂ ಕಂಪ್ಯೂಟರ್‌ನಲ್ಲೂ ವಾಟ್ಸಾಪ್ ಬಳಸಿ!
ಹೊಸದಿಲ್ಲಿ, ಮೇ 8: ವಾಟ್ಸಾಪ್‌ಪ್ರಿಯರಿಗೆ ಇದೊಂದು ಸಂತಸದಾಯಕ ಸುದ್ದಿ. ಮೊಬೈಲ್ ಫೋನ್‌ಗಳಲ್ಲಿ ಸದ್ಯ ಕ್ರಾಂತಿ ಮೂಡಿಸಿರುವ ವಾಟ್ಸಾಪ್ ಇನ್ನು ಮುಂದೆ ಡೆಸ್ಕ್‌ಟಾಪ್ ಕಂಪ್ಯೂಟರ್‌ನಲ್ಲೂ ಪೂರ್ಣ ಪ್ರಮಾಣದಲ್ಲಿ ಬಳಕೆಗೆ ಲಭ್ಯವಾಗಲಿದೆ.
ಇನ್ನು ಮುಂದೆ ಕಂಪ್ಯೂಟರ್ ಮುಖಾಂತರವೇ ವಾಟ್ಸಾಪ್ ಮೆಸೇಜ್ ಮಾಡಬಹುದು, ಫೈಲ್ ಶೇರಿಂಗ್, ವಾಯ್ಸಾ ಕಾಲಿಂಗ್ ಇತ್ಯಾದಿ ಸೌಲಭ್ಯಗಳನ್ನು ಬಳಸಿಕೊಳ್ಳುವಂತೆ ವಾಟ್ಸಾಪ್ ಮಾತೃಸಂಸ್ಥೆ ಫೇಸ್‌ಬುಕ್ ರೂಪಿಸಲಿದೆ.
ಮೊಬೈಲ್‌ಗಳಲ್ಲಿ ವಾಟ್ಸಾಪ್ ಬಳಕೆದಾರರ ಸಂಖ್ಯೆ 100 ಕೋಟಿ ದಾಟಿರುವ ಬೆನ್ನಲ್ಲೇ ಈ ಜನಪ್ರಿಯ ಆ್ಯಪ್ ಅನ್ನು ಕಂಪ್ಯೂಟರ್ ಬಳಕೆಗೆ ಯೋಗ್ಯವಾಗುವಂತೆ ಮಾಡಲು ಸಂಸ್ಥೆಯೂ ಮುಂದಾಗಿದೆ.
ಪ್ರಸ್ತುತ ಬ್ರೌಸರ್‌ಗಳ ಮೂಲಕ ‘ಎಕ್ಸ್‌ಟೆನ್ಶನ್’ ಮೂಲಕ ವಾಟ್ಸಾಪ್ ಅನ್ನು ಕಂಪ್ಯೂಟರ್‌ಗಳಲ್ಲಿ ಬಳಸಬಹುದಾಗಿದೆ. ಆದರೆ ಮೊಬೈಲ್ ಫೋನ್‌ನಲ್ಲಿ ಬಳಸುವಂತೆ ಎಲ್ಲಾ ಫೀಚರ್‌ಗಳು ಇಲ್ಲಿ ಲಭ್ಯವಾಗುತ್ತಿಲ್ಲ. ಜೊತೆಗೆ ಬ್ರೌಸರ್ ಅನ್ನು ಸದಾ ಓಪನ್ ಆಗಿಯೇ ಇಟ್ಟಿರಬೇಕಾದದ್ದು ಅನಿವಾರ್ಯ. ಈ ಹಿನ್ನೆಲೆಯಲ್ಲಿ ಇದು ಅಷ್ಟೊಂದು ಜನಸ್ನೇಹಿಯಾಗಿ ಗುರುತಿಸಿಕೊಂಡಿಲ್ಲ. ಈ ಕೊರತೆ ನೀಗಿಸಲು ಇದೀಗ ಮುಂದಾಗಿರುವ ವಾಟ್ಸಾಪ್ ಮಾತೃಸಂಸ್ಥೆ ಫೇಸ್‌ಬುಕ್, ಇದಕ್ಕಾಗಿ ವಾಟ್ಸಾಪ್ ಕಂಪ್ಯೂಟರ್ ಸಾಫ್ಟ್‌ವೇರ್ ಹೊರತರಲಿದೆ. ಈ ನಿಟ್ಟಿನಲ್ಲಿ ಸಂಸ್ಥೆಯು ಪ್ರಯೋಗಗಳನ್ನು ನಡೆಸುತ್ತಿದೆ.
*ಶೀಘ್ರ ಬರಲಿವೆ ಹೊಸ ಫೀಚರ್ಸ್
ಮೊಬೈಲ್ ಫೋನ್ ಬಳಕೆದಾರರ ಅನುಕೂಲಕ್ಕಾಗಿ ವಾಟ್ಸಾಪ್‌ನಲ್ಲಿ ಕೆಲವು ಹೊಸ ಫೀಚರ್‌ಗಳನ್ನು ಅಳವಡಿಸಲು ಸಂಸ್ಥೆ ನಿರ್ಧರಿಸಿದೆ. ಅದರಂತೆ ವಾಯ್ಸೆ ಮೇಲ್, ಝಿಪ್ ಫೈಲ್‌ಗಳ ಶೇರಿಂಗ್ ಸೇರಿದಂತೆ ಹಲವು ನೂತನ ಸೇವೆಗಳು ಶೀಘ್ರ ಬರಲಿವೆ. ಈ ಎಲ್ಲಾ ಸೌಲಭ್ಯಗಳು ಡೆಸ್ಕ್‌ಟಾಪ್ ಅಪ್ಲೀಕೇಶನ್‌ನಲ್ಲೂ ಲಭ್ಯವಾಗಲಿದೆ.