ಬೇಹುಗಾರಿಕೆ ಆರೋಪ, ಈಜಿಪ್ಟ್‌ನಲ್ಲಿ ಅಲ್‌ಜಝೀರಾ ಪತ್ರಕರ್ತರ ಸಹಿತ ಆರು ಮಂದಿಗೆ ಗಲ್ಲು ಶಿಕ್ಷೆ!
ಕೈರೋ ಮೇ 8: ಬೇಹುಗಾರಿಕೆ ನಡೆಸಿದ್ದಾರೆಂದು ಆರೋಪಿಸಿ ಅಲ್‌ಜಝೀರಾ ಪತ್ರಕರ್ತರ ಸಹಿತ ಆರು ಮಂದಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಕತರ್‌ಗೆ ದೇಶದ ರಹಸ್ಯಗಳನ್ನು ಸೋರಿಕೆ ಮಾಡಿದ್ದಾರೆಂದು ಇವರ ಮೇಲೆ ಆರೋಪ ಹೊರಿಸಲಾಗಿತ್ತು. ಇದೇ ಆರೋಪವನ್ನುಮುಂದಿಟ್ಟು ಬ್ರದರ್ ಹುಡ್ ನಾಯಕ ಮತ್ತು ಮಾಜಿ ಅಧ್ಯಕ್ಷ ಮುಹಮ್ಮದ್ ಮುರ್ಸಿಯನ್ನು ಜೈಲಿಗೆ ಹಾಕಲಾಗಿದೆ. ಜೂನ್‌ನಲ್ಲಿ ಈಜಿಪ್ಟ್ ಅಧ್ಯಕ್ಷ ಮುಫ್ತಿ ತೀರ್ಮಾನ ಪ್ರಕಾರ ಶಿಕ್ಷೆ ಅಂತಿಮವಾಗಿ ನಿರ್ಧರಿಸಲಾಗುವುದು. ಮುಫ್ತಿಯ ತೀರ್ಮಾನವನ್ನು ಒಪ್ಪಿಕೊಳ್ಳಲು ಅಥವಾ ತಿರಸ್ಕರಿಸಲಿಕ್ಕೂ ಕೋರ್ಟ್‌ಗೆ ಅಧಿಕಾರವಿದೆ. ಅದರೆ ಅವರ ಅಭಿಪ್ರಾಯವನ್ನು ಕೋರ್ಟ್ ಅನುಸರಿಸುವುದು ಅಲ್ಲಿನ ರೂಢಿಯಾಗಿದೆ.
ಶಿಕ್ಷಿಸಲ್ಪಟ್ಟವರಿಗೆ ತೀರ್ಪಿನ ವಿರುದ್ಧ ಅಪೀಲು ಸಲ್ಲಿಸಲು ಅವಕಾಶವಿದೆ. ಜೀವಾವಧಿ ಜೈಲು ಶಿಕ್ಷೆಗೊಳಗಾದ ಮುರ್ಸಿ ಮೂರು ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.
ಬ್ರದರ್‌ಹುಡ್‌ನೊಂದಿಗೆ ಸಂಬಂಧವಿದೆ ಎಂಬುದನ್ನು ಅಲ್‌ಜಝೀರಾ ತಳ್ಳಿಹಾಕಿದೆ ಎಂದು ವರದಿಯಾಗಿದೆ.