×
Ad

ಮಹಿಳೆಯರು ಗೂಗಲ್ ನಲ್ಲಿ ಹುಡುಕುವುದೇನು ಗೊತ್ತೆ?

Update: 2016-05-08 11:49 IST

ಭಾರತೀಯ ಮಹಿಳೆಯನ್ನು ಅಂತರ್ಜಾಲದಲ್ಲಿ ಸಕ್ರಿಯಗೊಳಿಸಲು ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡು ಯಶಸ್ಸು ಪಡೆದಿರುವ ಗೂಗಲ್ ಮಹಿಳೆಯರು ಈಗ ಹೆಚ್ಚು ಅಂತರ್ಜಾಲ ಬಳಸುತ್ತಾರೆ ಎಂದು ಮಹಿಳಾ ದಿನಾಚರಣೆಯಂದು ಘೋಷಿಸಿದೆ.

ಗೂಗಲ್ ಹುಡುಕಾಟದಲ್ಲಿ ಕಾಲ ಕಳೆದಿರುವ ಹೆಚ್ಚು ಮಹಿಳೆಯರು ಮಧ್ಯಮ ವಯಸ್ಸಿನವರು. 35-44 ವರ್ಷದೊಳಗಿನ ಮಹಿಳೆಯರು ಗೂಗಲ್ ಹುಡುಕಾಟದಲ್ಲಿ ಕಳೆದ ಸಮಯವು ಮಧ್ಯ ವಯಸ್ಕ ಪುರುಷರಿಗಿಂತ ಶೇ 123ರಷ್ಟು ಅಧಿಕ! ಮಧ್ಯ ವಯಸ್ಸಿನ ಅಂದರೆ 55 ವರ್ಷದ ಮೇಲಿನ ಮಹಿಳೆಯರು ಕೂಡ ಹೆಚ್ಚು ಗೂಗಲ್ ಬಳಸಿದ್ದಾರೆ. 2015ರಲ್ಲಿ ಈ ವಿಭಾಗದ ಮಹಿಳೆಯರು 15-24ರೊಳಗಿನ ಮಹಿಳೆಯರು ಮತ್ತು 24-35 ವರ್ಷದೊಳಗಿನ ಮಹಿಳೆಯರನ್ನು ಮೀರಿಸಿ ಅಂತರ್ಜಾಲ ಬಳಸಿದ್ದಾರೆ. ಹುಡುಕಾಟದ ನಿಮಿಷಗಳನ್ನು ಗಣನೆಗೆ ತೆಗೆದುಕೊಂಡರೆ ಮಹಿಳೆಯರು ಅಂತರ್ಜಾಲ ಹುಡುಕುವುದು ಯುವ ವಯಸ್ಸಿನಲ್ಲೂ ಹೆಚ್ಚಾಗೇ ಇದೆ. 15-24 ವಯಸ್ಸಿನ ಮಹಿಳೆಯರಲ್ಲಿ ಪುರುಷರ ಶೇ 104ಕ್ಕೆ ಹೋಲಿಸಿದರೆ ಶೇ 110ರಷ್ಟು ಬಳಕೆ ಹೆಚ್ಚಿದೆ. 25-34 ಗುಂಪಲ್ಲಿ ಮಹಿಳೆಯರು ಶೇ 108 ಬಳಸಿದರೆ ಪುರುಷರು ಶೇ 98 ಬಳಸಿದ್ದಾರೆ. ಅಪ್ಪಂದಿರಿಗೆ ಹೋಲಿಸಿದರೆ ಅಮ್ಮಂದಿರೇ ಹೆಚ್ಚು ಗೂಗಲ್ ಬಳಸುತ್ತಾರೆ. ಮೂರರಲ್ಲಿ ಒಬ್ಬ ಅಂದರೆ ಶೇ 33ರಷ್ಟು ಮಹಿಳೆಯರು ವೆಬ್ ಹುಡುಕಾಡಿದ್ದಾರೆ. ಆದರೆ ನಾಲ್ಕರಲ್ಲಿ ಒಬ್ಬ ತಂದೆ ಮಾತ್ರ ಗೂಗಲ್ ಬಳಸಿದ್ದಾರೆ.

ಯಾವ ವಿಭಾಗದಲ್ಲಿ ಹುಡುಕಾಟ?

ಗೂಗಲ್ ಪ್ರಕಾರ ಮಹಿಳೆಯರು ವಿಭಿನ್ನ ವಿಭಾಗದಲ್ಲಿ ಹುಡುಕುವುದರಲ್ಲಿ ಪುರುಷರನ್ನು ಮೀರಿಸಿದ್ದಾರೆ. ಅವರ ಹುಡುಕಾಟ ಕೇವಲ ಫ್ಯಾಷನಿಗೆ ಸೀಮಿತವಾಗಿಲ್ಲ. ಭಾರತದಲ್ಲಿ ಶೇ 29 ಮಹಿಳೆಯರು ಅಂತರ್ಜಾಲ ಬಳಸಿದರೆ, ಗ್ರಾಮೀಣ ಮಹಿಳೆಯರಲ್ಲಿ ಶೇ 12ರಷ್ಟು ಅಂತರ್ಜಾಲ ಬಳಸುತ್ತಾರೆ.

ಕೃಪೆ:yourstory.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News