×
Ad

ದಿಲ್ಲಿ: ವಿದೇಶಿ ಮಹಿಳೆಗೆ ಚಾಲಕನಿಂದ ಕಿರುಕುಳ ಯತ್ನ!

Update: 2016-05-08 19:27 IST

ಹೊಸದಿಲ್ಲಿ,ಮೇ 8: ದೇಶದ ರಾಜಧಾನಿ ದಿಲ್ಲಿಯಲ್ಲಿ ವಿದೇಶಿ ಮಹಿಳೆಗೆ ಕಾರು ಚಾಲಕನೊಬ್ಬ ಕಿರುಕುಳ ನೀಡಲು ಯತ್ನಿಸಿದ ಘಟನೆ ವರದಿಯಾಗಿದೆ. ದಿಲ್ಲಿ ಚಿತ್ತರಂಜನ್ ಪಾರ್ಕ್‌ಗೆ ಪ್ರಯಾಣಿಸುವ ನಡುವೆ ಒಲಾ ಟ್ಯಾಕ್ಸಿ ಚಾಲಕ ತನ್ನನ್ನು ಅಪಮಾನಿಸಿದನೆಂದು ವಿದೇಶಿ ಯುವತಿ ದೂರಿನಲ್ಲಿ ಪೊಲೀಸರಿಗೆ ತಿಳಿಸಿದ್ದಾರೆ.

 ಬೇಗನೆ ಉದ್ದೇಶಿತ ಸ್ಥಳಕ್ಕೆ ತಲುಪಿಸುತ್ತೇನೆ ಎಂದು ಹೇಳಿ ಚಾಲಕ ಬೇರೆ ದಾರಿಯಲ್ಲಿ ವಾಹನದಲ್ಲಿ ಸುತ್ತಾಡಿಸಿದ್ದಾನೆ . ಅಪಾಯ ಮನಗಂಡು ಗೆಳೆಯನನ್ನು ಕರೆದುದಾಗಿ ಆಕೆ ತಿಳಿಸಿದ್ದಾರೆ. ಆದರೆ ಮಹಿಳೆ ಹೋಗಬೇಕಾದ ಸ್ಥಳಕ್ಕೆ ತಲುಪಿಸುವ ಎಂದು ಚಾಲಕ ಗೆಳೆಯನಿಗೆ ಭರವಸೆ ನೀಡಿದ್ದ. ಆದರೆ ನಂತರ ಜಿಪಿಎಸ್‌ಗೆ ಕೆಟ್ಟುಹೋಗಿದೆ ಆದ್ದರಿಂದ ಮುಂದಿನ ಸೀಟಿನಲ್ಲಿ ಕೂತು ತನಗೆ ದಾರಿ ಹೇಳಿಕೊಡಬೇಕೆಂದು ಚಾಲಕ ತನ್ನೊಡನೆ ಕೇಳಿಕೊಂಡಾಗ ಮುಂದಿನ ಸೀಟಲ್ಲಿ ಕುಳಿತ ತನ್ನಮೊಬೈಲ್‌ನ್ನು ಬಲವಾಗಿ ಕಿತ್ತುಕೊಂಡು ಕಿರುಕುಳಕ್ಕೆ ಯತ್ನಿಸಿದ್ದಾನೆ ಎಂದು ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ದೂರು ಸಿಕ್ಕಿದೊಡನೆ ವಿದೇಶಿ ಯುವತಿಯ ಸಾಕ್ಷ್ಯವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಮ್ಯಾಜಿಸ್ಟ್ರೇಟ್‌ರ ಮುಂದೆ ಸಾಕ್ಷ್ಯ ನೀಡಿದ ನಂತರ ಕೇಸು ದಾಖಲಿಸಲಾಗುವುದೆಂದು ದಿಲ್ಲಿ ಪೊಲೀಸ್ ತಿಳಿಸಿದೆ. ಘಟನೆ ಆರೋಪಿ ಚಾಲಕನನ್ನು ವಜಾಗೊಳಿಸಲಾಗಿದೆ ಎಂದು ಒಲಾ ಟ್ಯಾಕ್ಸಿ ಸರ್ವೀಸ್ ತಿಳಿಸಿದೆಯೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News