ಆಡನ್ನು ರಕ್ಷಿಸಲು ಬಾವಿಗಿಳಿದಿದ್ದ ನಾಲ್ವರು ಉಸಿರುಗಟ್ಟಿ ಸಾವು
Update: 2016-05-08 20:05 IST
ತಿರುಚ್ಚಿ,ಮೇ.8: 60 ಅಡಿ ಆಳದ ಬಾವಿಗೆ ಬಿದ್ದಿದ್ದ ಆಡೊಂದರ ರಕ್ಷಣೆಗಾಗಿ ಕೆಳಗಿಳಿದಿದ್ದ ನಾಲ್ವರು ಉಸಿರುಗಟ್ಟಿ ಸಾವನ್ನಪ್ಪಿದ ದುರಂತ ಘಟನೆ ರವಿವಾರ ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯ ಕರಂಬಕುಡಿ ಎಂಬಲ್ಲಿ ಸಂಭವಿಸಿದೆ.
ಧುವರ್ ಗ್ರಾಮದ ರೈತ ಸೌಂದರರಾಜನ್(45), ಸ್ನೇಹಿತರಾದ ರಂಗಸ್ವಾಮಿ(55), ಪೆರಮೈಯಾ(55) ಮತ್ತು ಐಯ್ಯಾವು(45) ಮೃತ ದುರ್ದೈವಿಗಳು.
ಬೆಳಿಗ್ಗೆ ಆಡೊಂದು ತನ್ನ ಬಾವಿಗೆ ಬಿದ್ದಿದ್ದನ್ನು ಗಮನಿಸಿದ ಸೌಂದರರಾಜನ್ ಸ್ನೇಹಿತರನ್ನು ಕರೆಸಿ ಬಳಿಕ ತಾನು ಹಗ್ಗದ ಮೂಲಕ ಕೆಳಗಿಳಿದಿದ್ದ. ಒಂದು ಗಂಟೆ ಕಳೆದರೂ ಆತ ಮೇಲಕ್ಕೆ ಬರದಿದ್ದಾಗ ಸ್ನೇಹಿತರೂ ಒಬ್ಬರಾದ ಬಳಿಕ ಒಬ್ಬರು ಬಾವಿಗಿಳಿದಿದ್ದರು.ಎಲ್ಲ ನಾಲ್ವರೂ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಕ್ಸಿಜನ್ ಸಿಲಿಂಡರ್‌ಗಳು ಮತ್ತು ಮಾಸ್ಕ್‌ಗಳನ್ನು ಧರಿಸಿ ಬಾವಿಗಿಳಿದು ಎಲ್ಲ ನಾಲ್ವರ ಶವಗಳನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾದರು.