×
Ad

ಬಿನ್ ಲಾದೆನ್ ಕಂಪೆನಿಯ ಭಾರತೀಯ ಉದ್ಯೋಗಿಗಳ ಸಮಸ್ಯೆಗೆ ಪರಿಹಾರ ತಂದು ಕೊಟ್ಟ ರಾಜಸ್ಥಾನ್ ಪತ್ರಿಕಾ

Update: 2016-05-09 16:35 IST

ರಿಯಾದ್ :ಸೌದಿ ಅರೇಬಿಯಾದ ದೈತ್ಯ ಕಂಪೆನಿ ಬಿನ್ ಲಾದೆನ್ ಸಮೂಹ ಸುಮಾರು 70,000 ಉದ್ಯೋಗಿಗಳನ್ನುಹೊರದಬ್ಬಿದ್ದು ಅವರಿಗೆಲ್ಲಾ ಕಳೆದ ಎಂಟು ತಿಂಗಳಿಂದ ವೇತನವನ್ನೂ ಪಾವತಿಸಿಲ್ಲ. ಈ ಉದ್ಯೋಗಿಗಳಿಗೆ ಈಗಾಗಲೇ ಎಕ್ಸಿಟ್ ವೀಸಾ ಕೂಡ ನೀಡಲಾಗಿರುವುದರಿಂದ ಅವರು ತಮ್ಮ ವೇತನ ಸಿಗುವ ತನಕ ಕಾಯಲೂ ಸಾಧ್ಯವಿಲ್ಲ. ಕಂಪೆನಿ ತನ್ನ ಉದ್ಯೋಗಿಗಳಿಗೆ ರೂ.4,394 ಕೋಟಿ ಬಾಕಿ ಪಾವತಿಸುವುದಿದೆ. ಆದರೆ ತಾನು ಈ ಬಾಕಿ ಪಾವತಿಸಲು ಅಸಮರ್ಥವೆಂದು ಅದು ಹೇಳಿಕೊಂಡಿದೆ. ಮೆಕ್ಕಾದಲ್ಲಿರುವ ಕಂಪೆನಿಯ 50 ಶಾಖೆಗಳಿಗೆ ಇತ್ತೀಚೆಗೆ ಮುತ್ತಿಗೆ ಹಾಕಿದ ಉದ್ಯೋಗಿಗಳು ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರಲ್ಲದೆ ಆಕ್ರೋಶಭರಿತರಾಗಿ 7 ವಾಹನಗಳಿಗೂ ಬೆಂಕಿಯಿಕ್ಕಿದ್ದರು.

ಈ ಕಂಪೆನಿಯ ಹೆಸರು ಕುಖ್ಯಾತ ಉಗ್ರ ಒಸಾಮನನ್ನು ನೆನಪಿಸುತ್ತದೆ ಹಾಗೂ ಅದು ಆತನ ಸಹೋದರನಿಂದ ಈಗ ನಡೆಸಲ್ಪಡುತ್ತಿದೆಯೆನ್ನುವುದು ಅಷ್ಟೇ ಸತ್ಯವಾಗಿದೆ.

ಕಳೆದ ವರ್ಷ ಸಂಭವಿಸಿದಭೀಕರ ಮರಳಿನ ಬಿರುಗಾಳಿಗೆ ಗೋಲ್ಡನ್ ಮಸೀದಿಯಲ್ಲಿ ಕ್ರೇನ್ ಉರುಳಿ ಬಿದ್ದು ಹಲವರು ಸಾವಿಗೀಡಾದ ನಂತರ ಕಂಪೆನಿಯ ಆರ್ಥಿಕತೆ ಹಿನ್ನಡೆಯನ್ನನುಭವಿಸಿತ್ತೆನ್ನಲಾಗಿದೆ. ತೈಲ ಬೆಲೆಗಳಲ್ಲಿ ಕುಸಿತ ಹಾಗೂ ಕಂಪೆನಿಗೆ ಕೊಡಲ್ಪಟ್ಟಿದ್ದ ಹೈಸ್ಪೀಡ್ ಟ್ರೈನ್ ಯೋಜನೆ ಹಾಗ ಫುಟ್ಬಾಲ್ ಮೈದಾನ ನಿರ್ಮಾಣ ಯೋಜನೆಯನ್ನು ಸರಕಾರ ಹಿಂದಕ್ಕೆ ಪಡೆದ ನಂತರ ಕಂಪೆನಿ ಕೆಟ್ಟ ಸ್ಥಿತಿಯಲ್ಲಿದೆ.

ಕಂಪೆನಿಯ ಹೆಚ್ಚಿನ ಉದ್ಯೋಗಿಗಳು ಭಾರತ ಹಾಗೂ ಪಾಕಿಸ್ತಾನದವರಾಗಿದ್ದು ಕೆಲಸ ಬಿಟ್ಟು ತೆರಳಬೇಕೆಂದು ಹೇಳಿದ ಉದ್ಯೋಗಿಗಳಲ್ಲಿ ಅರ್ಧದಷ್ಟು ಮಂದಿ ಭಾರತೀಯರಾಗಿದ್ದಾರೆ. ಅವರೆಲ್ಲಾ ಕಂಗಾಲಾಗಿರುವಂತೆ ಅವರ ಸಮಸ್ಯೆಯನ್ನು ರಾಜಸ್ಥಾನ್ ಪತ್ರಿಕಾ ತನ್ನ ವರದಿಗಳ ಮೂಲಕ ಜಗತ್ತಿನೆದುರು ಇಟ್ಟಿತು. ಸಮಸ್ಯೆ ಸಂಸತ್ ವರೆಗೂ ಹೋಗಿಸದಸ್ಯ ಓಂ ಬಿರ್ಲಾ ಈ ವಿಚಾರದ ಬಗ್ಗೆ ಭಾರತ ಸರಕಾರ ಸೌದಿ ಸರಕಾರದೊಂದಿಗೆ ಮಾತುಕತೆ ನಡೆಸಬೇಕೆಂದು ಒತ್ತಾಯಿಸಿದರು. ಇದು ಫಲ ನೀಡಿದೆ ಹಾಗೂ ಕಂಪೆನಿ ತಾನು ಹೊರನಡೆಯಲು ಹೇಳಿದ ಉದ್ಯೋಗಿಗಳ ಬಾಕಿ ವೇತನ ಪಾವತಿಸಬೇಕೆಂದು ಅಲ್ಲಿನ ಕಾರ್ಮಿಕ ಸಚಿವರು ಹೇಳಿದ್ದಾರೆ. ಕಂಪೆನಿಗೆ ಮತ್ತೊಮ್ಮ ಸರಕಾರಿ ಯೋಜನೆಗಳಿಗೆ ಬಿಡ್ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಕ್ರಮ ಕಂಪೆನಿಯ ಉದ್ಯೋಗಿಗಳಲ್ಲಿ ಆಶಾವಾದ ಮೂಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News