×
Ad

ಹಿಟ್ಲರ್‌ನ ಪ್ರತಿಮೆ 114 ಕೋಟಿ ರೂ.ಗೆ ಹರಾಜು

Update: 2016-05-09 21:28 IST

  ನ್ಯೂಯಾರ್ಕ್, ಮೇ 9: ಮಂಡಿಯೂರಿ ಕುಳಿತಿರುವ ಹಿಟ್ಲರ್‌ನ ಪ್ರತಿಮೆಯೊಂದು ರವಿವಾರ 17.2 ಮಿಲಿಯ ಡಾಲರ್ (ಸುಮಾರು 114 ಕೋಟಿ ರೂಪಾಯಿ)ಗೆ ರವಿವಾರ ಹರಾಜಾಗಿದೆ.

ಇಟಲಿಯ ಕಲಾವಿದ ವೌರೀಶಿಯೊ ಕ್ಯಾಟಲನ್‌ರ ಕೃತಿ ಇಷ್ಟೊಂದು ಬೆಲೆಗೆ ಹರಾಜಾಗಿರುವುದು ದಾಖಲೆಯಾಗಿದೆ.

‘ಹಿಮ್’ ಎಂಬ ಹೆಸರಿನ ಮೇಣ ಮತ್ತು ರೆಸಿನ್ ಪ್ರತಿಮೆಯನ್ನು ಕ್ರಿಸ್ಟೀಸ್ ಸಂಸ್ಥೆ ಹರಾಜು ಹಾಕಿದೆ.

 ಬಾಲಕನ ಗಾತ್ರದ ಪ್ರತಿಮೆಯಲ್ಲಿ ಬೂದು ಬಣ್ಣದ ಉಣ್ಣೆಯ ಬಟ್ಟೆ ಹಾಕಿರುವ ಹಿಟ್ಲರ್ ಮಂಡಿಯೂರಿ ಕುಳಿತಿದ್ದಾರೆ, ಅವರ ಕೈಗಳು ಒಂದಕ್ಕೊಂದು ತಳುಕು ಹಾಕಿಕೊಂಡಿವೆ ಹಾಗೂ ಅವರು ಮೇಲೆ ನೋಡುತ್ತಿದ್ದಾರೆ. ಈ ಕೃತಿಯನ್ನು 2001ರಲ್ಲಿ ಪೂರ್ಣಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News