ಸಹಿಷ್ಣು ಸಮಾಜದಲ್ಲಿ ಹೆಚ್ಚುತ್ತಿದೆ ಅಸಹಿಷ್ಣುತೆ
ಹಲವು ಮಂದಿ ಲೇಖಕರು ಹಾಗೂ ಗಣ್ಯ ನಾಗರಿಕರು 2015ರ ಕೊನೆಯಲ್ಲಿ ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣು ವಾತಾವರಣವನ್ನು ಪ್ರತಿಭಟಿಸಿ ತಮ್ಮ ರಾಷ್ಟ್ರ ಪ್ರಶಸ್ತಿಗಳನ್ನು ಹಿಂದಿರುಗಿಸಿದರು; ಹೀಗೆ ಪ್ರಶಸ್ತಿ ಮರಳಿಸಿದವರ ಪಟ್ಟಿ ದೊಡ್ಡದಾಗಿದ್ದ ಹಿನ್ನೆಲೆಯಲ್ಲಿ, ಇದು ಸಮಾಜದಲ್ಲಿ ಒಂದು ಬಗೆಯ ಆತ್ಮಾವಲೋಕನಕ್ಕೆ ಚಾಲನೆ ನೀಡಿತು. ಇಷ್ಟಾಗಿಯೂ ಆಡಳಿತಾರೂಢರು ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ ಸೇರಿದಂತೆ ಬಲಪಂಥೀಯ ಹಿಂದೂ ಸಂಘಟನೆಗಳು, ಪ್ರಶಸ್ತಿ ಮರಳಿಸಿದವರನ್ನು ಟೀಕಿಸಲು ಆರಂಭಿಸಿದವು. ಅವರ ಕ್ರಮ ರಾಜಕೀಯ ಪ್ರೇರಿತ ಎಂದು ಆಪಾದಿಸಿದವು. ಜತೆಗೆ ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅದರ ಮೇಲೆ ಪ್ರಭಾವ ಬೀರುವ ಸಲುವಾಗಿ ಹೀಗೆ ಮಾಡಿದ್ದಾರೆ ಎಂಬ ಟೀಕೆಗಳೂ ಕೇಳಿಬಂದವು.
ಆದರೆ ಬಹುತೇಕ ಪ್ರಶಸ್ತಿ ಪುರಸ್ಕೃತರು ಸಹಿಷ್ಣುತೆ ಬಗೆಗಿನ ತಮ್ಮ ನಿಲುವಿಗೇ ಅಂಟಿಕೊಂಡರು. ಅಭಿವ್ಯಕ್ತಿ ಸ್ವಾತಂತ್ರ್ಯ ತನ್ನ ಎಲ್ಲೆಯನ್ನು ಮೀರಿ, ಹಲವು ಗುಣಾತ್ಮಕ ಬದಲಾವಣೆ ಕಂಡಿದೆ. 2015ರ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕುರಿತ ಅಮೆರಿಕನ್ ಆಯೋಗದ ವರದಿ ಇದನ್ನು ಖಚಿತಪಡಿಸಿದೆ. ಇದು ಅಮೆರಿಕನ್ ಫೆಡರಲ್ ಸರಕಾರದ ಉಭಯ ಪಕ್ಷೀಯ ಆಯೋಗ. ವಿಶ್ವದಲ್ಲೇ ಈ ಬಗೆಯ ಮೊಟ್ಟಮೊದಲ ಆಯೋಗ ಇದಾಗಿದ್ದು, ಧಾರ್ಮಿಕ ಸ್ವಾತಂತ್ರ್ಯ ಮತ್ತು ನಂಬಿಕೆಯ ಸಾರ್ವತ್ರಿಕ ಹಕ್ಕನ್ನು ಸಂರಕ್ಷಿಸುವುದು ಇದರ ಉದ್ದೇಶ. ಈ ವರದಿ ಅತ್ಯಂತ ವಿಮರ್ಶಾತ್ಮಕವಾಗಿ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಸ್ಥಿತಿಗತಿಯನ್ನು ವಿವರಿಸಿದೆ. ಭಾರತದಲ್ಲಿ ಧಾರ್ಮಿಕ ಸಹಿಷ್ಣುತೆ ಕುಸಿದಿರುವುದು ಹಾಗೂ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ ಹೆಚ್ಚಿರುವುದು ಸೇರಿದಂತೆ ಋಣಾತ್ಮಕ ತ್ರಿವಳಿ ಅಂಶ ಒಳಗೊಂಡಿರುವುದನ್ನು ವರದಿ ಒತ್ತಿ ಹೇಳಿದೆ.
‘‘2015ರಲ್ಲಿ ಭಾರತದಲ್ಲಿ ಧಾರ್ಮಿಕ ಸಹಿಷ್ಣುತೆ ಕ್ಷೀಣಿಸಿದೆ ಹಾಗೂ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ ಹೆಚ್ಚಿದೆ. ಅಲ್ಪಸಂಖ್ಯಾತ ಸಮುದಾಯಗಳು ಅದರಲ್ಲೂ ಮುಖ್ಯವಾಗಿ ಕ್ರೈಸ್ತರು, ಮುಸಲ್ಮಾನರು ಹಾಗೂ ಸಿಖ್‌ಸಮುದಾಯದವರು ಹಲವು ದಾಳಿ, ಕಿರುಕುಳ ಹಾಗೂ ಹಿಂಸೆ ಘಟನೆಗಳನ್ನು ಅನುಭವಿಸಿದ್ದಾರೆ. ಇದಕ್ಕೆ ಕಾರಣವಾಗಿರುವವರು ಬಹುತೇಕ ಹಿಂದೂ ರಾಷ್ಟ್ರೀಯವಾದಿ ಸಂಘಟನೆಗಳು’’ ಎಂದು ವರದಿ ವಿವರಿಸಿದೆ.
ಇಂಥ ಹಕ್ಕುಗಳ ಉಲ್ಲಂಘನೆಯನ್ನು ವರದಿ ವಿವರಿಸಿದ್ದು, ಯುಎಸ್‌ಸಿಆರ್‌ಐಎಫ್ ಪರಿಸ್ಥಿತಿಯ ಮೇಲೆ ಮುಂದೆಯೂ ನಿಗಾ ವಹಿಸಲಿದೆ ಮತ್ತು ಅಮೆರಿಕದ ರಕ್ಷಣಾ ಇಲಾಖೆಗೆ ವರದಿ ನೀಡಿ, ಭಾರತವನ್ನು ನಿರ್ದಿಷ್ಟ ಕಳಕಳಿಯ ದೇಶಗಳ ಪಟ್ಟಿಯಲ್ಲಿ ಇಡುವಂತೆ ಶಿಫಾರಸ್ಸು ಮಾಡಲಾಗುವುದು ಎಂದು ಸ್ಪಷ್ಟಪಡಿಸಿದೆ. ಅಮೆರಿಕ ಸರಕಾರ ಭಾರತದ ಜತೆಗಿನ ದ್ವಿಪಕ್ಷೀಯ ಸಂಬಂಧಗಳನ್ನು ರೂಪಿ ಸುವಲ್ಲಿ ಹಾಗೂ ಭವಿಷ್ಯದಲ್ಲಿ ಪ್ರಮುಖ ಮಾತುಕತೆಗಳನ್ನು ನಡೆಸುವ ಅವಧಿಯಲ್ಲಿ ಇದನ್ನು ಗಮನದಲ್ಲಿಟ್ಟುಕೊಳ್ಳುವಂತೆ ಶಿಫಾರಸ್ಸು ಮಾಡಲಾಗು ವುದು ಎಂದು ಸ್ಪಷ್ಟಪಡಿ ಸಿದೆ.
ಕಾರ್ಮಿಕ ಸಮು ದಾಯಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವ ಅಧಿಕಾರಿಗಳು ಹಾಗೂ ಧಾರ್ಮಿಕ ಮುಖಂಡರನ್ನು ಸರಕಾರ ಸಾರ್ವಜನಿಕವಾಗಿ ಖಂಡಿಸುತ್ತಿದೆ. ಇದು ಇಡೀ ಪ್ರಕರಣದ ತಿರುಳು. ಇಂಥ ಹೇಳಿಕೆಗಳನ್ನು ನೀಡುವವರು ಆಡಳಿತ ಪಕ್ಷದ ಜೊತೆ ನೇರ ಸಂಬಂಧ ಹೊಂದಿರುವ ಸಾಧ್ವಿ ನಿರಂಜನ ಜ್ಯೋತಿ, ಗಿರಿರಾಜ್ ಸಿಂಗ್ (ಇಬ್ಬರೂ ಕೇಂದ್ರ ಸಚಿವರು) ಅಥವಾ ಸಂಸತ್ತಿನ ಪ್ರಮುಖ ಸದಸ್ಯರಾದ ಯೋಗಿ ಆದಿತ್ಯನಾಥ್ ಅಥವಾ ಸಾಕ್ಷಿ ಮಹಾರಾಜ್‌ನಂಥವರು ಎನ್ನುವುದು ಭಾರತೀಯ ರಾಜಕಾರಣವನ್ನು ಅರ್ಥ ಮಾಡಿಕೊಂಡವರಿಗೆ ಹಿಂದೆಂದಿಗಿಂತಲೂ ಸ್ಪಷ್ಟವಾಗಿ ತಿಳಿಯುತ್ತದೆ. ಇಂಥ ಹೇಳಿಕೆ ನೀಡುವ ಇತರರೆಂದರೆ, ಸಹ ಸಂಘಟನೆಗಳಾದ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಕಾರ್ಯಕರ್ತರು. ಮತ್ತೆ ಇವೆಲ್ಲ ಸಂಘಟನೆಗಳಳು ಕೂಡಾ ಸಂಘ ಪರಿವಾರದ ಸಹ ಸಂಘಟನೆಗಳೇ ಆಗಿವೆ ಎಂದು ವರದಿ ಸ್ಪಷ್ಟಪಡಿಸಿದೆ.
ಕಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಇಂಥ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದಾಗ, ಆಡಳಿತ ಪಕ್ಷ ಮುಂದೆ ಬಂದು, ಇದು ಪಕ್ಷದ ಅಧಿಕೃತ ನಿಲುವು ಅಲ್ಲ ಎಂದು ಹೇಳಿ ಅಷ್ಟಕ್ಕೇ ಸುಮ್ಮನಾಗುತ್ತದೆ. ಆದರೆ ಇದಕ್ಕೆ ಪ್ರತಿಯಾಗಿ, ಇಂಥ ಹೇಳಿಕೆ ನೀಡಿದವರಿಗೆ ಹಿಂಭಡ್ತಿ ನೀಡುವುದಾಗಲೀ, ಇನ್ನಿತರ ಕ್ರಮಗಳನ್ನಾಗಲೀ ಕೈಗೊಳ್ಳುವುದಿಲ್ಲ. ಇವರಲ್ಲಿ ಬಹುತೇಕ ಮಂದಿ ಅಧಿಕಾರಕ್ಕೆ ಬರುವ ಮುನ್ನವೂ ಇಂಥ ಹೇಳಿಕೆ ನೀಡಲು ಕುಖ್ಯಾತರಾಗಿದ್ದವರೇ. ಇಷ್ಟಾಗಿಯೂ ಗಿರಿರಾಜ ಸಿಂಗ್ ಅಂಥವರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ಈ ಅವಧಿಯಲ್ಲಿ ಪ್ರಬಲ ಪ್ರಧಾನಿ ಎನಿಸಿಕೊಂಡ ನರೇಂದ್ರ ಮೋದಿ ಹಲವು ವಾರಗಳ ಕಾಲ ಮೌನವಾಗಿದ್ದು, ಬಳಿಕ, ಪೇಲವ, ಒಪ್ಪಿಕೊಳ್ಳಲಾಗದಂಥ ಹೇಳಿಕೆಯನ್ನು ಕಾಟಾಚಾರಕ್ಕೆ ನೀಡುತ್ತಾರೆ. ಇಂಥ ದ್ವೇಷದ ಹೇಳಿಕೆಗಳನ್ನು ನೀಡುವವರ ವಿರುದ್ಧ ಕ್ರಮ ಕೈಗೊಳ್ಳುವಂಥ ಯಾವ ಸೂಚನೆಯೂ ಇದರಲ್ಲಿ ಕಾಣುವುದಿಲ್ಲ.
ಸದ್ಯಕ್ಕೆ ಇದೆಲ್ಲವೂ ಎಲ್ಲರ ಸಹಕಾರದಿಂದ ನಡೆಯುವ ಸಂಘಟಿತ ಆಟ. ಕೆಲವರು ಪ್ರಚೋದನಾಕಾರಿ ಹೇಳಿಕೆ ನೀಡುತ್ತಾರೆ, ಆರೆಸ್ಸೆಸ್‌ನಂಥ ಸಂಘಟನೆಗಳ ಕೆಲವರು ಅದನ್ನು ಸಮರ್ಥಿಸುತ್ತಾರೆ ಅಥವಾ ಅದಕ್ಕೆ ದನಿಗೂಡಿಸುತ್ತಾರೆ. ಮತ್ತೆ ಕೆಲವರು ಇದು ಅಧಿಕೃತ ನಿಲುವು ಅಲ್ಲ ಎಂದು ಹೇಳಿದರೆ, ಪ್ರಧಾನಿಯವರು ಉದ್ದೇಶಪೂರ್ವಕವಾಗಿಯೇ ಜಾಣ ಮೌನ ವಹಿಸುತ್ತಾರೆ. ಇನ್ನೂ ಕುತೂಹಲದ ಅಂಶವೆಂದರೆ ಕೆಲ ಅವಹೇಳನಕಾರಿ ಹೇಳಿಕೆಗಳು ಆರಂಭದಲ್ಲಿ ಅಂಥ ಅವಹೇಳನಕಾರಿ ಎನಿಸುವುದಿಲ್ಲ. ಹಿಂದುತ್ವದ ಪೋಷಕ ಎನಿಸಿಕೊಂಡಿರುವ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ‘ಭಾರತ್ ಮಾತಾಕಿ ಜೈ’ ಘೋಷಣೆ ಬಗೆಗೆ ನೀಡಿದ ಹೇಳಿಕೆ ಇದಕ್ಕೆ ಉತ್ತಮ ಉದಾಹರಣೆ. ಮೊದಲು ಅವರು ಇದನ್ನು ಯುವಪೀಳಿಗೆಗೆ ಬೋಧಿಸುವುದಾಗಿ ಹೇಳಿದರು. ಬಳಿಕ ತಮ್ಮ ನಿಲುವಿನಿಂದ ಹಿಂದಕ್ಕೆ ಸರಿದು, ಇದು ಕಡ್ಡಾಯವಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಾತ್ಮಕವಾಗಿ ಅಸಾದುದ್ದೀನ್ ಉವೈಸಿ, ಗಂಟಲಿಗೆ ಚಾಕುವಿನಿಂದ ತಿವಿದರೂ ಹಾಗೆ ಹೇಳುವುದಿಲ್ಲ ಎಂದು ಪ್ರತಿರೋಧದ ಹೇಳಿಕೆ ನೀಡಿದರು. ಇದನ್ನು ಮುಂದುವರಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಭಾರತದಲ್ಲಿ ನೆಲೆ ನಿಲ್ಲಬೇಕು ಎಂಬ ಇಚ್ಛೆ ಇರುವ ಎಲ್ಲರಿಗೂ ಇದು ಕಡ್ಡಾಯ ಎಂದು ಹೇಳಿದರು. ಇದು ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದಾಳಿ ಎನ್ನಲೇಬೇಕಾಗುತ್ತದೆ. ಏಕೆಂದರೆ ಅವರು ಅಲ್ಲಾಹನನ್ನು ಬಿಟ್ಟು ಬೇರೆ ಯಾರನ್ನೂ ಪೂಜಿಸುವುದಿಲ್ಲ. ‘ಭಾರತ್ ಮಾತಾ ಕಿ ಜೈ’ ಎನ್ನುವುದು ದೇವತೆಯನ್ನು ಸ್ತುತಿಸಿದಂತೆ ಆಗುತ್ತದೆ. ಇದಕ್ಕೆ ಇಸ್ಲಾಂನಲ್ಲಿ ಅವಕಾಶ ಇಲ್ಲ ಎಂದು ಹೇಳುತ್ತಾರೆ.
ಆರೆಸ್ಸೆಸ್‌ನ ಸಹ ಪ್ರಯಾಣಿಕ ಯೋಗ ಗುರು ಹಾಗೂ ಉದ್ಯಮಿ ಬಾಬಾ ರಾಮ್‌ದೇವ್, ಭಾರತದ ಸಂವಿಧಾನ ಇಲ್ಲದಿದ್ದರೆ, ಈ ವೇಳೆಗೆ ಲಕ್ಷಾಂತರ ಶಿರಚ್ಛೇದಗಳು ನಡೆಯುತ್ತಿದ್ದವು ಎಂದು ಹೇಳಿಕೆ ನೀಡಿದರು. ಇದು ರಾಜಕೀಯವಾಗಿ ಅಧಿಕಾರದಲ್ಲಿರುವವರಿಗೆ ನಿಕಟವಾಗಿರುವವರಿಂದ ಬರುವ ಹೇಳಿಕೆಗಳು. ಆದರೆ ಈ ಬಗ್ಗೆ ವರದಿ ಮಾಡುವವರು, ಇದಕ್ಕೆ ಅಧಿಕಾರದಲ್ಲಿರುವ ಅತ್ಯುನ್ನತ ಸ್ಥಾನದಲ್ಲಿರುವವರಿಂದ ರಕ್ಷಣೆ ಸಿಗುತ್ತದೆ ಎಂಬ ಅರಿವು ಇಲ್ಲದೇ ಮುಗ್ಥತೆಯಿಂದ ಈ ಸಲಹೆಗಳನ್ನು ನೀಡಿರಬಹುದು.
ಇದು ಖಂಡಿತಾ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪೇಕ್ಷಣೀಯ ಪರಿಸ್ಥಿತಿಯಲ್ಲ. ಯಾವುದೇ ದೇಶದ ಪ್ರಜಾಪ್ರಭುತ್ವದ ಗುಣಮಟ್ಟವನ್ನು ಅಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಇರುವ ಸುರಕ್ಷತೆ ಹಾಗೂ ಭದ್ರತೆಯ ಆಧಾರದಲ್ಲಿ ನಿರ್ಧರಿಸಬೇಕು. ನಿಜ; ಹಿಂದೆ ಕೂಡಾ ಅಲ್ಪಸಂಖ್ಯಾತ ವಿರೋಧಿ ಹಿಂಸೆಗಳು ಭಾರತೀಯ ರಾಜಕೀಯ ಚಿತ್ರಣದ ಅವಿಭಾಜ್ಯ ಅಂಗವಾಗಿದ್ದವು. ಆದರೆ ಇದೀಗ ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದ ಬಳಿಕ, ಅಸಹಿಷ್ಣುತೆ ಮತ್ತು ಭೇದ ಕಲ್ಪಿಸುವಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಪ್ರಶಸ್ತಿ ಪುರಸ್ಕೃತರು ಯಾವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೋ ಅದು ಖಂಡಿತವಾಗಿಯೂ ನಿಜ. ಅಭದ್ರತೆಯ ಮನೋಭಾವದ ಜತೆಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಲ್ಲೆ ಹಾಗೂ ಅಸಹಿಷ್ಣುತೆ ಜೊತೆಜೊತೆಗೆ ಸಾಗುತ್ತಿದೆ.
ಮೋದಿ ಅಮೆರಿಕಕ್ಕೆ ಪ್ರಮುಖ ಪ್ರವಾಸ ಕೈಗೊಳ್ಳಲು ಸಿದ್ಧತೆ ನಡೆಸುತ್ತಿರುವ ವೇಳೆಯಲ್ಲೇ ಈ ವರದಿ ಬಹಿರಂಗವಾಗಿದೆ. ಆದರೆ ಬಹುತೇಕ ಈ ವರದಿ ಗ್ರಂಥಾಲಯಗಳ ಮತ್ತೊಂದು ದಾಖಲೆಯಾಗಿ ಉಳಿಯುತ್ತದೆ.