ಪೇಸ್‌ಗೆ 16 ವರ್ಷಗಳ ನಂತರ ಒಲಿಯಿತು ಡಬಲ್ಸ್ ಪ್ರಶಸ್ತಿ
Update: 2016-05-09 23:03 IST
ಬುಸಾನ್, ಮೇ 9: ಬುಸಾನ್ ಓಪನ್ ಚಾಲೆಂಜರ್ ಟೂರ್ನಿಯಲ್ಲಿ ಭಾರತದ ಹಿರಿಯ ಆಟಗಾರ ಲಿಯಾಂಡರ್ ಪೇಸ್ ಡಬಲ್ಸ್ ಪ್ರಶಸ್ತಿಯನ್ನು ಜಯಿಸಿದ್ದಾರೆ. ಪೇಸ್‌ಗೆ 16 ವರ್ಷಗಳ ಬಳಿಕ ಒಲಿದ ಮೊದಲ ಡಬಲ್ಸ್ ಪ್ರಶಸ್ತಿ ಇದಾಗಿದೆ.
ರವಿವಾರ ನಡೆದ ಬುಸಾನ್ ಓಪನ್ ಚಾಲೆಂಜರ್ ಟೂರ್ನಿಯ ಫೈನಲ್‌ನಲ್ಲಿ ಪೇಸ್ ಹಾಗೂ ಸ್ಯಾಮ್ ಗ್ರಾತ್ ಜೋಡಿ ಅವಳಿ ಸಹೋದರರಾದ ಸ್ಯಾಂಚೈ ಹಾಗೂ ಸ್ಯಾಂಚಾಟ್ ರಟಿವತನರನ್ನು 4-6, 6-1, 10-7 ಸೆಟ್‌ಗಳ ಅಂತರದಿಂದ ಮಣಿಸಿ ಈ ವರ್ಷ ಮೊದಲ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಇಂಡೋ-ಆಸ್ಟ್ರೇಲಿಯದ ಜೋಡಿ ಪೇಸ್-ಸ್ಯಾಮ್ ಗ್ರಾತ್ 1 ಗಂಟೆ, 9 ನಿಮಿಷಗಳಲ್ಲಿ ಪಂದ್ಯವನ್ನು ಗೆದ್ದುಕೊಂಡಿತು. ಪೇಸ್ ಹೊಸ ಜೊತೆಗಾರ ಸ್ಯಾಮ್ ಗ್ರಾತ್‌ರೊಂದಿಗೆ ಮೊದಲ ಬಾರಿ ಡಬಲ್ಸ್ ಪ್ರಶಸ್ತಿ ಜಯಿಸಿದ್ದಾರೆ. ಪೇಸ್ 2000ರಲ್ಲಿ ಕೊನೆಯ ಬಾರಿ ಚಾಲೆಂಜರ್ ಟ್ರೋಫಿಯನ್ನು ಜಯಿಸಿದ್ದರು.