×
Ad

ಅಸಂಸದೀಯ ಶಬ್ದಗಳ ಬಳಕೆಗೆ ಸ್ಪೀಕರ್ ಕಳವಳ

Update: 2016-05-09 23:54 IST

ಹೊಸದಿಲ್ಲಿ,ಮೇ 9: ಸದಸ್ಯರಿಂದ ಅಸಂಸದೀಯ ಶಬ್ದಗಳ ಬಗ್ಗೆ ಇಂದು ತೀವ್ರ ಕಳವಳ ವ್ಯಕ್ತಪಡಿಸಿದ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು, ಸಂಸದರು ಆಕ್ಷೇಪಾರ್ಹ ಶಬ್ದಗಳ ಬಳಕೆ ಬಗ್ಗೆ ಸ್ವಯಂ ನಿರ್ಬಂಧವನ್ನು ಹೇರಿಕೊಳ್ಳಬೇಕು, ಇಲ್ಲದಿದ್ದರೆ ತಾನು ಈ ವಿಷಯದಲ್ಲಿ ಅವರಿಗೆ ಪಾಠ ತೆಗೆದುಕೊಳ್ಳಬೇಕಾಗಬಹುದು ಎಂದು ಹೇಳಿದರು.

ಶೂನ್ಯ ವೇಳೆಯಲ್ಲಿ ಬಿಜೆಪಿ ಸದಸ್ಯ ಸಂಜಯ ಜೈಸ್ವಾಲ್ ಅವರು ಭಾರತೀಯ ವೈದ್ಯಕೀಯ ಮಂಡಳಿ(ಎಂಸಿಐ)ಯನ್ನು ಪ್ರಸ್ತಾಪಿಸಿ ಆಕ್ಷೇಪಾರ್ಹ ಶಬ್ದವೊಂದನ್ನು ಬಳಸಿದಾಗ ಕೆರಳಿದ ಮಹಾಜನ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಜೈಸ್ವಾಲ್ ಬಳಸಿದ ಶಬ್ದದ ಬಗ್ಗೆ ತಕ್ಷಣ ಸ್ಪೀಕರ್ ಗಮನವನ್ನು ಸೆಳೆದ ಸಂಸದೀಯ ವ್ಯವಹಾರಗಳ ಸಚಿವ ಎಂ.ವೆಂಕಯ್ಯ ನಾಯ್ಡು ಅವರು, ಅದನ್ನು ಕಡತದಿಂದ ಅಳಿಸದಿದ್ದರೆ ನಾಳೆ ವೃತ್ತಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ಹೇಳಿದರು.

ಎಂಸಿಐ ನಡೆಸುತ್ತಿರುವ,ವಿವಾದದ ಸುಳಿಯಲ್ಲಿ ಸಿಲುಕಿರುವ ವೈದ್ಯಕೀಯ ಪರೀಕ್ಷೆಯನ್ನು ಆಕ್ಷೇಪಿಸಿ ಜೈಸ್ವಾಲ್ ಮಾತನಾಡುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News