ಬಾಕಿಯುಳಿದಿರುವ ಐಟಿಆರ್ ಸಲ್ಲಿಕೆಗೆ ಆ.31 ಕೊನೆಯ ದಿನ
Update: 2016-05-09 23:59 IST
ಹೊಸದಿಲ್ಲಿ,ಮೇ 9: 2009-2014ರ ನಡುವಿನ ಆರು ತೆರಿಗೆ ವರ್ಷಗಳಿಗೆ ಆದಾಯ ತೆರಿಗೆ ರಿಟರ್ನ್‌ಗಳು ತನ್ನ ಬೆಂಗಳೂರು ಸ್ವೀಕಾರ ಕೇಂದ್ರದಲ್ಲಿ ಐಟಿಆರ್-5 ಹಿಂಬರಹ ನಮೂನೆಗಳನ್ನು ಸಲ್ಲಿಸದಿರುವ ಕಾರಣಕ್ಕೆ ಸಂಸ್ಕರಣೆಗೆ ಮತ್ತು ಮರುಪಾವತಿಗೆ ಬಾಕಿಯಿರುವ ತೆರಿಗೆದಾತರಿಗೆ ಆ.31ನ್ನು ಕೊನೆಯ ದಿನವಾಗಿ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ(ಸಿಡಿಬಿಟಿ)ಯು ಘೋಷಿಸಿದೆ.
‘ಅಂತಿಮ ಅವಕಾಶ’ದ ಕೊಡುಗೆಯನ್ನು ಮುಂದಿಟ್ಟಿರುವ ಆದಾಯ ತೆರಿಗೆ ಇಲಾಖೆಯು,ಇಂತಹ ತೆರಿಗೆದಾತರು ತನ್ನ ಪೋರ್ಟಲ್‌ಗಳ ಮೂಲಕ ತಮ್ಮ ಆದಾಯ ತೆರಿಗೆ ರಿಟರ್ನ್‌ಗಳನ್ನು ತಕ್ಷಣವೇ ದೃಢಪಡಿಸಬೇಕೆಂದು ಸೂಚಿಸಿದೆ. ಅಥವಾ ತೆರಿಗೆದಾತರು ಆ.31ಕ್ಕೆ ಮುನ್ನ ಐಟಿಆರ್-5ರ ದೃಢೀಕೃತ ಪ್ರತಿಯನ್ನು ಸ್ಪೀಡ್ ಪೋಸ್ಟ್ ಮೂಲಕ ಬೆಂಗಳೂರಿನ ತನ್ನ ಸ್ವೀಕಾರ ಕೇಂದ್ರಕ್ಕೆ ಕಳುಹಿಸಬಹುದಾಗಿದೆ ಎಂದೂ ಅದು ತಿಳಿಸಿದೆ.