ಮೂವರಿಗೆ ಸಿಬಿಐ ಸಮನ್ಸ್
Update: 2016-05-10 23:52 IST
ಹೊಸದಿಲ್ಲಿ, ಮೇ 10: ಆಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣದ ತನಿಖೆಗೆ ಸಂಬಂಧಿಸಿ ಸಿಬಿಐ ಮಂಗಳವಾರ, ವಕೀಲ ಗೌತಂ ಖೇತಾನ್, ಐಡಿಎಸ್ ಇನ್ಫೋಟೆಕ್‌ನ ಆಡಳಿತ ನಿರ್ದೇಶಕ ಪ್ರತಾಪ್ ಅಗರ್ವಾಲ್ ಹಾಗೂ ಏರೊಮ್ಯಾಟ್ರಿಕ್ಸ್‌ನ ಸಿಇಒ ಪ್ರವೀಣ್ ಬಕ್ಷಿಗೆ ಸಮನ್ಸ್ ನೀಡಿದೆ.
ಸಿಬಿಐ ಶುಕ್ರವಾರ ಖೇತಾನ್ ಹಾಗೂ ವಾಯು ದಳದ ಮಾಜಿ ದಂಡನಾಯಕ ಎಸ್.ಪಿ.ತ್ಯಾಗಿಯವರ ಮೂವರು ಸೋದರ ಸಂಬಂಧಿಗಳಾದ ರಾಜೀವ್, ಸಂಜೀವ್ ಹಾಗೂ ಸಂದೀಪ್ ತ್ಯಾಗಿಯವರ ವಿಚಾರಣೆ ನಡೆಸಿತ್ತು.
ವಿಚಾರಣೆಯು ಐಡಿಎಸ್ ಟ್ಯುನೀಶಿಯದ ಖಾತೆಗಳು ಹಾಗೂ ಅದಕ್ಕೆ ಪಾವತಿಯಾಗಿರುವ ಹಣದ ಕುರಿತಾಗಿತ್ತು.