×
Ad

ಸಿಖ್ ವೇಷದಲ್ಲಿ ಬಿಎ ಪರೀಕ್ಷೆ ಬರೆದರೆ ಪ್ರಧಾನಿ ಮೋದಿ ?

Update: 2016-05-11 08:50 IST

ಹೊಸದಿಲ್ಲಿ, ಮೇ 11: ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಶಾಸ್ತ್ರದಲ್ಲಿ 1979 ರಲ್ಲಿ ಪಡೆದಿರುವ ಬಿಎ ಪದವಿ ಅಧಿಕೃತ ಎಂದು ದಿಲ್ಲಿ ವಿಶ್ವವಿದ್ಯಾಲಯ ಸ್ಪಷ್ಟಪಡಿಸಿದೆ.

ಬಿಜೆಪಿ ಸೋಮವಾರ ಬಹಿರಂಗಪಡಿಸಿದ ಎರಡು ಅಂಕಪಟ್ಟಿಗಳಲ್ಲಿ ಕಂಡುಬಂದ ಹೆಸರಿನ ದೋಷ ತೀರಾ ಸಾಮಾನ್ಯವಾಗಿದ್ದು, ವಿಶ್ವವಿದ್ಯಾಲಯದ ಪರೀಕ್ಷಾಂಗ ಇಲಾಖೆ ಕೋರಿಕೆಯ ಮೇಲೆ ಇದನ್ನು ದೃಢೀಕರಿಸಿದೆ ಎಂದು ವಿವಿ ತಿಳಿಸಿದೆ.

ಬಿಜೆಪಿ ಮುಖಂಡರು ನೀಡಿದ ದಾಖಲೆಗಳನ್ನು ತಿರಸ್ಕರಿಸಿರುವ ಆಪ್‌ನ ಅಶುತೋಷ್, ಆಶಿಸ್ ಖೇತನ್, ಸಂಜಯ್ ಸಿಂಗ್ ಮತ್ತು ದಿಲೀಪ್ ಪಾಂಡೆ ಈ ಪದವಿಯ ಅಸಲಿತನವನ್ನು ದೃಢೀಕರಿಸುವಂತೆ ದಿಲ್ಲಿ ವಿವಿಗೆ ಆಗ್ರಹಿಸಿದ್ದರು. ಆದರೆ ವಿವಿ ಉಪಕುಲಪತಿಗಳನ್ನು ಭೇಟಿಯಾಗುವ ಅವಕಾಶವಿಲ್ಲದೆ ಹಿಂದಿರುಗಬೇಕಾಯಿತು.

ಯಾವನೇ ವಿದ್ಯಾರ್ಥಿಯ ಖಾಸಗಿತನದ ರಕ್ಷಣೆ ವಿಶ್ವವಿದ್ಯಾಲಯದ ಹೊಣೆ ಎಂದಿರುವ ರಿಜಿಸ್ಟ್ರಾರ್ ತರುಣ್‌ದಾಸ್, ಪ್ರಧಾನ ಮಂತ್ರಿಗಳಿಗೆ ನೀಡಿದ ಪದವಿಯ ಸಾಚಾತನದ ಬಗ್ಗೆ ನಾವು ನಮ್ಮ ದಾಖಲೆಗಳನ್ನು ಪರಿಶೀಲಿಸಿದ್ದೇವೆ. 1978ರಲ್ಲಿ ಅವರು ಪರೀಕ್ಷೆಗಳನ್ನು ಪೂರೈಸಿದ್ದು, 1979ರಲ್ಲಿ ಅವರಿಗೆ ಪದವಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಆದರೆ ಇದನ್ನು ಒಪ್ಪದ ಆಪ್, ಇದು ನಕಲಿ ಡಿಗ್ರಿ ಎಂದು ಸಾಬೀತುಪಡಿಸಲು ಮತ್ತಷ್ಟು ದಾಖಲೆಗಳನ್ನು ಬುಧವಾರ ಮುಂದಿಡುವುದಾಗಿ ಹೇಳಿಕೊಂಡಿದೆ.

 1975ರಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿತ್ತು. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಕೇಂದ್ರ ಸಚಿವ ಅರುಣ್ ಜೇಟ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿರುವಂತೆ, ಪರೀಕ್ಷೆ ಸಂದರ್ಭದಲ್ಲಿ ಮೋದಿ ಅವರು ಎಬಿವಿಪಿ ಕಚೇರಿಯಲ್ಲಿ ವಾಸ್ತವ್ಯವಿದ್ದರು. ಮೋದಿ ಅವರದೇ ಹೇಳಿಕೆಯಂತೆ, ಅವರು ಪರೀಕ್ಷೆ ವೇಳೆ ಭೂಗತರಾಗಿದ್ದುಕೊಂಡು ಸಿಖ್ ವೇಷದಲ್ಲಿ ತಿರುಗಾಡುತ್ತಿದ್ದರು. ಅವರು ಪರೀಕ್ಷೆಗಳನ್ನು ಸಿಖ್ ವೇಷದಲ್ಲೇ ಬರೆದಿದ್ದರೆ ? ಎಂದು ಆಪ್ ಮುಖಂಡರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News