×
Ad

ಭ್ರಷ್ಟಾಚಾರ ಬಹಿರಂಗವಾದಾಗ ಸೋನಿಯಾಗೆ ದೇಶ ಪ್ರೇಮ ನೆನಪಾಗುತ್ತದೆ: ಕೇರಳದಲ್ಲಿ ಅಮಿತ್‌ಶಾ

Update: 2016-05-11 12:07 IST

ತೃಶೂರ್, ಮೇ 11: ಪ್ರತಿಯೊಂದು ಭ್ರಷ್ಟಾಚಾರ ಬಹಿರಂಗಗೊಳ್ಳುವಾಗ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂದಿಗೆ ದೇಶ ಪ್ರೇಮ ನೆನಪಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಸೋನಿಯಾ ಗಾಂಧಿಯ ಪುತ್ರಪ್ರೇಮ ಮತ್ತು ಭ್ರಷ್ಟಾಚಾರ ಪ್ರೇಮವೂ ಜನರಿಗೆ ತಿಳಿಯಲಿದೆ ಎಂದು ಅಮಿತ್‌ಶಾ ತೃಶೂರ್ ಕೈಪಮಂಗದಲ್ಲಿ ಎನ್‌ಡಿಎ ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳಿದ್ದಾರೆ. ಭೂಮಿಯಲ್ಲೂ ಆಕಾಶದಲ್ಲೂ ಪಾತಾಳದಲ್ಲಿಯೂ ಭ್ರಷ್ಟಾಚಾರ ನಡೆಸಿದವರು ಯುಪಿಎ ಸರಕಾರದವರು. ರಿಮೋಟ್ ಕಂಟ್ರೋಲ್‌ನಿಂದ ಆ ಸರಕಾರವನ್ನು ನಿಯಂತ್ರಿಸಿದ್ದು ಸೋನಿಯಾ ಗಾಂಧಿ ಆಗಿದ್ದಾರೆ. ಭ್ರಷ್ಟಾಚಾರಿಗಳ ವಿರುದ್ಧ ಕ್ರಮ ಕೈಗೊಳ್ಳದೆ ಬಿಡುವುದಿಲ್ಲ ಎಂದ ಮೋದಿ ಸರಕಾರದ ತೀರ್ಮಾನದಿಂದಾಗಿ ಸೊನಿಯಾ ಗಾಂಧಿ ಭಾವವಿಕಾರಕ್ಕೊಳಗಾಗಿದ್ದಾರೆಂದುಅಮಿತ್ ಶಾ ಟೀಕಿಸಿದ್ದಾರೆ. ಯುಪಿಎ ಸರಕಾರದ ಅವಧಿಯಲ್ಲಿ ಕೇರಳದಲ್ಲಿ ಕಾಂಗ್ರೆಸ್ ಆಳುತ್ತಿತ್ತು. ಅವರು ಯಾವ ಅಭಿವೃದ್ಧಿಯನ್ನು ಮಾಡಿದ್ದಾರೆ. 90 ವರ್ಷ ವಯಸ್ಸಾಗಿರುವ ವಿಎಸ್ ಅಚ್ಯುತಾನಂದನ್‌ರನ್ನು ಮುಂದೆ ನಿಲ್ಲಿಸಿ ಚುನಾವಣೆ ಎದುರಿಸುತ್ತಿರುವ ಸಿಪಿಎಂನ್ನು ಪಿಣರಾಯಿವಿಜಯನ್ ನಿಜವಾಗಿ ಆಳುತ್ತಿದ್ದಾರೆ. ಬಿಜೆಪಿ ಕೋಮುವಾದಿಎಂದು ಹೇಳಿ ನಡೆದಾಡುವವರು ತಾವು ಆಳ್ವಿಕೆ ನಡೆಸುವ ಹದಿನಾಲ್ಕು ರಾಜ್ಯಗಳಲ್ಲಿ ಅಭಿವೃದ್ಧಿ ಮಾಡಿ ತೋರಿಸಲಿ ಎಂದು ಅಮಿತ್ ಶಾ ಹೇಳಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News