×
Ad

50,000 ವರ್ಷಗಳ ಹಿಂದಿನ ಮಾನವ ನಿರ್ಮಿತ ಕೊಡಲಿ ಪತ್ತೆ

Update: 2016-05-11 19:45 IST

ಸಿಡ್ನಿ, ಮೇ 11: ಆಸ್ಟ್ರೇಲಿಯದಲ್ಲಿ ಪತ್ತೆಯಾದ ಬಂಡೆಯ ಸೀಳೊಂದು ಜಗತ್ತಿನ ಅತ್ಯಂತ ಹಳೆಯ ಗೊತ್ತಿರುವ ಕೊಡಲಿಯೆಂದು ನಂಬಲಾಗಿದೆ ಹಾಗೂ ದೇಶಕ್ಕೆ ಸುಮಾರು 50,000 ವರ್ಷಗಳ ಹಿಂದೆ ಮಾನವರು ಬಂದ ಸಮಯದ ಕೊಡಲಿ ಅದಾಗಿದೆ ಎಂದು ವಿಜ್ಞಾನಿಗಳು ಬುಧವಾರ ಹೇಳಿದ್ದಾರೆ.
ಕೊಡಲಿಯ ಒಂದು ತುಂಡು ಪಶ್ಚಿಮ ಆಸ್ಟ್ರೇಲಿಯದ ವಿರಳ ಜನಸಂಖ್ಯೆಯಿರುವ ಕಿಂಬರ್ಲಿ ವಲಯದಲ್ಲಿ ಪತ್ತೆಯಾಗಿದೆ. ಆದಿ ಕಾಲದ ದೇಶಿ ತಂತ್ರಜ್ಞಾನ ಹೊಸತನದಿಂದ ಕೂಡಿತ್ತು ಎಂಬುದನ್ನು ಅದರ ಕಾಲ ಸೂಚಿಸುತ್ತದೆ.
‘‘ಇದು ಜಗತ್ತಿನ ಅತ್ಯಂತ ಹಳೆಯ ಕೊಡಲಿ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ’’ ಎಂದು ಈ ಬಂಡೆಯ ತುಂಡಿನ ವಿಶ್ಲೇಷಣೆ ನಡೆಸಿದ ಸಿಡ್ನಿ ವಿಶ್ವವಿದ್ಯಾನಿಲಯದ ಪೀಟರ್ ಹಿಸ್‌ಕಾಕ್ ಹೇಳಿದರು.
ಅದನ್ನು 1990ರ ದಶಕದಲ್ಲಿ ಅಗೆಯಲಾಗಿತ್ತು. ಆದರೆ ಅದರ ಮಹತ್ವ ಇತ್ತೀಚಿನವರೆಗೂ ಗೊತ್ತಾಗಿರಲಿಲ್ಲ. ‘‘ಅದು ನಯಗೊಳಿಸಲಾದ ಕೊಡಲಿಯೊಂದರ ಒಂದು ತುಂಡು ಮಾತ್ರ’’ ಎಂದರು.
ಆಸ್ಟ್ರೇಲಿಯಕ್ಕೆ ಮಾನವರು ಸುಮಾರು 50,000 ವರ್ಷಗಳ ಹಿಂದೆ ಬಂದರು ಎಂದು ಭಾವಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News