×
Ad

ಬೀಫ್ ಬ್ಯಾನ್ ನಿಂದ ದೇಶದ ಆರ್ಥಿಕತೆಗೆ ಹಾನಿ : ಆದಿ ಗೊದ್ರೇಜ್

Update: 2016-05-12 13:30 IST

ಮುಂಬೈ, ಮೇ.12: ಸರಕಾರದ ಗೋಮಾಂಸ ನಿಷೇಧ ನೀತಿ ಹಾಗೂ ಹಲವು ರಾಜ್ಯಗಳಲ್ಲಿ ಜಾರಿಗೊಳಿಸಲಾಗಿರುವಪಾನ ನಿಷೇಧವು ದೇಶದ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ, ಎಂದು ಖ್ಯಾತ ಉದ್ಯಮಿ ಆದಿ ಗೊದ್ರೇಜ್ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ನೀಡಲಾದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ನೀತಿಗಳು ಇಲ್ಲಿಯ ತನಕ ಉತ್ತಮವಾಗಿದೆ ಎಂದೂ ಅವರು ಹೇಳಿದ್ದಾರೆ.

‘‘ಆದರೆ ಕೆಲವು ರಾಜ್ಯಗಳಲ್ಲಿ ಜಾರಿಗೆ ಬಂದಿರುವ ಗೋಮಾಂಸ ನಿಷೇಧ ಕೃಷಿ ಕ್ಷೇತ್ರದ ಮೇಲೆ ಪರಿಣಾಮ ಬೀರಿದೆ. ಹಾಗಾದರೆ ವಯಸ್ಸಾದ ದನಗಳನ್ನು ಏನು ಮಾಡುವುದು?’’ ಎಂದು ಗೊದ್ರೇಜ್ ಪ್ರಶ್ನಿಸಿದ್ದಾರೆ.

‘‘ಹಿಂದು ಧರ್ಮ ಗೋಮಾಂಸ ಸೇವನೆಗೆ ವಿರೋಧವಾಗಿ ಏನೂ ಹೇಳಿಲ್ಲ. ಈ ಪದ್ಧತಿ ಹಲವಾರು ವರ್ಷಗಳಲ್ಲಿ ಬರಗಾಲದ ಸಂದರ್ಭ ಸಾಮನ್ಯವಾಗಿತ್ತು. ದನಗಳನ್ನು ಕೊಲ್ಲಬೇಡಿ, ಮಕ್ಕಳಿಗೆ ಹಾಲು ನೀಡುವ ಅವುಗಳನ್ನು ಸಂರಕ್ಷಿಸಬೇಕೆಂದು ಹಿರಿಯರು ಹೇಳುತ್ತಿರುವುದೇ ಕಾಲ ಸರಿದ ಹಾಗೆ ಒಂದು ಧಾರ್ಮಿಕ ನಂಬಕೆಯಾಗಿ ಬಿಟ್ಟಿದೆ. ಇದು ಹಾಸ್ಯಾಸ್ಪದ. ವೈದಿಕ ಕಾಲದ ಭಾರತೀಯರು ಗೋಮಾಂಸ ಸೇವಿಸುತ್ತಿದ್ದರು,’’ಎಂದು ಆದಿ ಗೊದ್ರೇಜ್ ಸಂದರ್ಶನದಲ್ಲಿ ಹೇಳಿದ್ದಾರೆ.

ಬಿಹಾರ ಹಾಗೂ ಕೇರಳದಲ್ಲಿ ಮದ್ಯ ನಿಷೇಧ ಕ್ರಮದ ಬಗ್ಗೆ ಮಾತನಾಡಿದ ಅವರು ಈ ಕ್ರಮವನ್ನು ಕೇವಲ ಚುನಾವಣಾ ದೃಷ್ಟಿಯಿಂದ ಕೈಗೊಳ್ಳಲಾಗಿದೆ ಎಂದು ಹೇಳಿದರು. ಪಾನ ನಿಷೇಧ ಯಾವುದೇ ದೇಶದ ಆರ್ಥಿಕ ಅಭಿವೃದ್ಧಿಗೆ ಅಡ್ಡಗಾಲಿಕ್ಕಲಿದೆಯೆಂದು ಅವರು ಹೇಳಿದರು.
ಅದೇ ಸಮಯ ಉದ್ಯಮ ನಡೆಸಲು ಅನುಕೂಲಕರ ವಾತಾವರಣ ನಿರ್ಮಿಸಲಾಗಿದೆಯೆಂದು ಅವರು ಸರಕಾರವನ್ನು ಹೊಗಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News