×
Ad

ದಾವೂದ್‌ನ ಮನೆ ಪತ್ತೆಹಚ್ಚಿದ ದೇಶೀಯ ಟಿವಿ ಚ್ಯಾನೆಲ್!

Update: 2016-05-12 14:28 IST

ಹೊಸದಿಲ್ಲಿ, ಮೇ 12: ಭಾರತ ಹುಡುಕುತ್ತಿರುವ ಭೂಗತ ದೊರೆ ದಾವೂದ್ ಇಬ್ರಾಹೀಂನ ಕರಾಚಿಯ ಮನೆಯನ್ನು ಪತ್ತೆ ಮಾಡಿರುವುದಾಗಿ ದೇಶೀಯ ಟಿವಿ ಚ್ಯಾನೆಲ್ ಸಿಎನ್‌ಎನ್-ನ್ಯೂಸ್18 ಬಹಿರಂಪಡಿಸಿದೆ. ಕರಾಚಿಯ ಸದರ್ ಟೌನ್‌ನ ಕ್ಲಿಪ್ಟನ್ ಬ್ಲಾಕ್ ನಾಲ್ಕರ ಡಿ13 ಎಂಬ ಮನೆಯಲ್ಲಿ ದಾವೂದ್ ವಾಸವಿದ್ದಾನೆ ಎಂಬ ಮಾಹಿತಿಯನ್ನು ಗುಪ್ತಕ್ಯಾಮರಾ ಆಪರೇಷನ್ ಮೂಲಕ ಪತ್ತೆಹಚ್ಚಿ ಪ್ರಸಾರ ಮಾಡಿದೆ ಎಂದು ವರದಿಯಾಗಿದೆ. ದಾವೂದ್‌ನ ಅಂಗರಕ್ಷಕರೊಂದಿಗೂ ಪ್ರದೇಶದ ಜನರೊಂದಿಗೂ ಗುಪ್ತಕ್ಯಾಮರ ಇಟ್ಟು ಮಾತಾಡಲಾಗಿದೆ.

1993ರ ಮುಂಬೈಸ್ಫೋಟದ ಸೂತ್ರಧಾರಿಗಳಲ್ಲೋರ್ವನಾದ ದಾವೂದ್ ಕರಾಚಿಯಲ್ಲಿಲ್ಲ ಎಂದು ಪಾಕಿಸ್ತಾನದ ವಾದವನ್ನು ಸಿಎನ್‌ಎನ್-ನ್ಯೂಸ್ 18 ಮುರಿದಿದೆ ಎಂದು ಅದು ಹೇಳಿಕೊಂಡಿದೆ. ದಾವೂದ್‌ರ ಮನೆಯಾವುದೆಂದು ಕೇಳಿದಾಗ ಜನರು ಸರಿಯಾಗಿ ತೋರಿಸಿದರು. ಸ್ಥಳೀಯ ಪೊಲೀಸರು ಈ ವಿಷಯವನ್ನು ಒಪ್ಪಿಕೊಂಡಿದ್ದಾರೆಂದು ಚ್ಯಾನೆಲ್ ತಿಳಿಸಿದೆ. ಭಾರತ ಹುಡುಕುತ್ತಿರುವ ಭೀಕರ ಆರೋಪಿಯಾದ ದಾವೂದ್‌ಗೆ ಪಾಕಿಸ್ತಾನ ಆಶ್ರಯ ನೀಡುತ್ತಿದೆ ಎಂದು ಚ್ಯಾನೆಲ್ ಆರೋಪಿಸಿದೆ. ಅಬಾಟಾಬಾದ್‌ನಲ್ಲಿ ಉಸಾಮ ಬಿನ್ ಲಾದೆನ್ ಇದ್ದ ಮನೆಗೆ ಹೋಲುವ ಮನೆ ದಾವೂದ್ ಮನೆ ಕೂಡಾ ಆಗಿದೆ ಮಾತ್ರಲ್ಲ ದಾವೂದ್‌ನ ನಾಲ್ಕು ಟೆಲಿಫೋನ್ ನಂಬರ್‌ಗಳನ್ನು ಪತ್ತೆಹಚ್ಚಲಾಗಿದೆ ಎಂದು ಇಂಡಿಯಾ ಟುಡೆ ಚ್ಯಾನೆಲ್ ಈ ಮೊದಲು ಬಹಿರಂಗ ಪಡಿಸಿತ್ತು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News