ಕೇರಳದಲ್ಲಿ ಜಾತ್ಯತೀತತೆ ನಾಶಪಡಿಸಲು ಸಂಘಪರಿವಾರಕ್ಕೆ ಅವಕಾಶ ನೀಡಬೇಡಿ: ತೀಸ್ಟಾ ಸೆಟಲ್ವಾಡ್

Update: 2016-05-12 09:00 GMT

ತಿರುವನಂತಪುರಂ, ಮೇ 12: ಕೇರಳದ ಜಾತ್ಯತೀತತೆಯನ್ನು ನಾಶಪಡಿಸಲು ಸಂಘಪರಿವಾರ ಶಕ್ತಿಗಳಿಗೆ ಅವಕಾಶ ಮಾಡಿಕೊಡಬೇಡಿ ಎಂದು ತೀಸ್ಟಾ ಸೆಟಲ್ವಾಡ್ ಹೇಳಿದ್ದಾರೆ. ಪ್ಯಾಶಿಸ್ಟ್ ವಿರೋಧಿ ಕನ್ವೆನ್ಶನ್‌ನ್ನು ಉದ್ಘಾಟಿಸಿ ಮಾತಾಡಿದ ಅವರು ಮೋದಿಯ ಗುಜರಾತ್ ಮಾದರಿ ಉನ್ನತ ಜಾತಿಯವರ ಅಭಿವೃದ್ಧಿಯಾಗಿದೆ. ಜಿಶಾ ಕೊಲೆಪಾತಕ ವಿರುದ್ಧ ಧ್ವನಿಯೆತ್ತುವ ಪ್ರಧಾನಿ ಹೈದರಾಬಾದ್‌ನ ರೋಹಿತ್ ವೇಮುಲಾ ಆತ್ಮಹತ್ಯೆಯಲ್ಲಿ ಹರಿಯಾಣ,ಮಹಾರಾಷ್ಟ್ರದಲ್ಲಿ ನಡೆದ ದಲಿತ ಸಾಮೂಹಿಕ ಸಂಹಾರದಲ್ಲಿ ಮೌನವನ್ನು ಪಾಲಿಸುತ್ತಿದ್ದಾರೆ. ರೈತರ ಭೂಮಿಯನ್ನು ಭಾರೀ ಉದ್ಯಮಿಗಳಿಗಾಗಿ ವಶಪಡಿಸಿಕೊಳ್ಳಲಾಗುತ್ತಿದೆ. ಹೀಗೆ ಸಾರ್ವಜನಿಕ ಸೊತ್ತುಗಳನ್ನು ಖಾಸಗಿ ಬಂಡವಾಳ ಶಾಹಿಗಳಿಗೆ ನೀಡುವುದನ್ನು ಮೋದಿ ಗುಜರಾತ್ ಮಾದರಿ ಎಂದು ಕರೆಯುತ್ತಿದ್ದಾರೆ. ಮೋದಿಯ ಪ್ಯಾಶಿಸ್ಟ್ ನಿಲುವುಗಳು ದಲಿತ ವಿರೋಧಗಳನ್ನೆಲ್ಲ ಕೇರಳೀಯರು ಅರಿತುಕೊಳ್ಳಬೇಕೆಂದು ಹೇಳಿದ್ದಾರೆಂದು ವರದಿಯಾಗಿದೆ.

ಸ್ವಾತಂತ್ರ್ಯದ ನಂತರ ಭಾರತದಲ್ಲಿ ಪ್ರಜಾಪ್ರಭುತ್ವದಲ್ಲಿ ಆಡಳಿತ ವರ್ಗದವರ ಅಭಿವೃದ್ಧಿ ಆಯಿತು ಎಂದು ಕನ್ವೆನ್ಸನ್‌ನಲ್ಲಿ ಭಾಗವಹಿಸಿದ್ದ ಪ್ರೋ. ರಾಜೀವನ್ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಜೀರ್ಣಾವಸ್ಥೆಯಲ್ಲಿರುವ ಪ್ರಜಾಪ್ರಭುತ್ವದಲ್ಲಿ ಮೇಲ್ವರ್ಗದ ದೌರ್ಜನ್ಯದ ಬಲಿಪಶುಗಳಾದ ದಲಿತ್-ಆದಿವಾಸಿ ವಿಭಾಗಗಳನ್ನು ಮೋದಿ ಮೋಡಿ ಮಾಡುತ್ತಿದ್ದಾರೆ. ಸಿಕೆ ಜಾನು ಎನ್‌ಡಿಎಯ ಅಭ್ಯರ್ಥಿಯಾಗಲು ಇದುವೇ ಕಾರಣವಾಗಿದೆ. ಮೇಲ್ವರ್ಗದ ಘೋಷಣೆಗಳಿಂದ ಈ ಪ್ಯಾಶಿಸಂನ್ನು ಎದುರಿಸಲು ಸಾಧ್ಯವಿಲ್ಲ ಎಂದು ರಾಜೀವನ್ ಹೇಳಿದ್ದಾರೆ. ಆರ್ಕಿಟೆಕ್ಟ್ ಜಿ. ಶಂಕರ್ ಅಧ್ಯಕ್ಷತೆ ವಹಿಸಿದರು. ಎಂ.ಎ.ಸೋಮಶೇಖರನ್, ಪ್ರೋ.ಪಿ.ಜೆ. ಜೇಮ್ಸ್, ಎನ್. ಸುಬ್ರಮಣ್ಯನ್, ವೇಣುಗೋಪಾಲ್ ಮುಂತಾದವರು ಈ ಸಂದರ್ಭದಲ್ಲಿ ಮಾತನಾಡಿದರು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News