ತಮಿಳುನಾಡು: ಗೌರವ ಹತ್ಯೆಗೀಡಾದ ದಲಿತ ಶಂಕರ್‌ನ ಪತ್ನಿ ಕೌಸಲ್ಯರಿಂದ ಆತ್ಮಹತ್ಯೆ ಯತ್ನ
ಚೆನ್ನೈ, ಮೇ 12: ಅನ್ಯಜಾತಿಯವನನ್ನು ಮದುವೆಯಾಗಿದ್ದಕ್ಕಾಗಿ ಉದುಮಲ್ ಪೇಟೆಯಲ್ಲಿ ನಡು ರಸ್ತೆಯಲ್ಲಿ ಹಾಕಿ ಕೊಲ್ಲಲಾದ ದಲಿತ ವಿದ್ಯಾರ್ಥಿ ಶಂಕರ್‌ನ ಪತ್ನಿ ಕೌಸಲ್ಯ ಆತ್ಮಹತ್ಯೆಗೆ ಶ್ರಮಿಸಿರುವುದಾಗಿ ವರದಿಯಾಗಿದೆ. ಕುಮರಲಿಂಗಂನ ಪತಿಯ ಮನೆಯಲ್ಲಿ ಕೌಸಲ್ಯ ಆತ್ಮಹತ್ಯೆಗೆ ಶ್ರಮಿಸಿದ್ದು ಅವರನ್ನು ಉದುಮಲ್ ಪೇಟೆಯ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಕೌಸಲ್ಯ ಪತಿ ಮನೆಯಲ್ಲಿಯೇ ವಾಸಿಸುತ್ತಿದ್ದಾರೆ.
ಮಾರ್ಚ್ 13ಕ್ಕೆ ನಡೆದಿದ್ದ ದಾಳಿಯಲ್ಲಿ ಶಂಕರ್ ಮೃತನಾಗಿದ್ದರೆ ಕೌಸಲ್ಯರಿಗೂ ಗಾಯಗಳಾಗಿದ್ದವು. ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಕೌಸಲ್ಯ ಇತ್ತೀಚಗಷ್ಟೆ ಆಸ್ಪತ್ರೆಯಿಂದ ಮನೆಗೆ ಬಂದಿದ್ದರು. ಪೊಳ್ಳಾಚಿಯ ಖಾಸಗಿ ಇಂಜಿನಿಯರಿಂಗ ಕಾಲೇಜ್‌ನಲ್ಲಿ ಪರಿಚಯವಾಗಿ ಶಂಕರ್ ಮತ್ತು ಕೌಸಲ್ಯ ವಿವಾಹಿತರಾಗಿದ್ದರು.
ಕೌಸಲ್ಯರ ತಂದೆ ಚಿನ್ನಸ್ವಾಮಿ ಸಹಿತ ಆರು ಮಂದಿಯನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಎರಡು ಸಲ ಚಿನ್ನಸ್ವಾಮಿ ಕೌಸಲ್ಯರಲ್ಲಿ ಶಂಕರ್‌ನೊಂದಿಗಿನ ಸಂಬಂಧ ತೊರೆದು ಬರಬೇಕೆಂದು ಹೇಳಿದ್ದರೂ ಕೌಸಲ್ಯ ಅದಕ್ಕೆ ಸಿದ್ಧರಾಗಿರಲಿಲ್ಲ. ಅಂತಿಮವಾಗಿ ನಡುರಸ್ತೆಯಲ್ಲಿ ಹಲ್ಲೆ ಮಾಡಿ ಶಂಕರ್‌ನನ್ನು ಕೊಲ್ಲಲಾಗಿತ್ತು.