ಮೋದಿಗೆ ತೀಕ್ಷ್ಣ ಸಲಹೆ:ನಿರುಂಕಶತೆ ಕೊನೆಗೊಳಿಸಿ, ಹಿಟ್ಲರನಂತೆ ಆಗಬೇಡಿ: ಎಚ್ಚರಿಸಿದ ಶಿವಸೇನೆ
ಮುಂಬೈ ಮೇ 12: ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿದ ಮೋದಿ ಸರಕಾರದ ನಿರ್ಧಾರ ಅದಕ್ಕೆ ದುಬಾರಿಯಾಗಿದೆ. ಈಗ ಕೇಂದ್ರ ಹಾಗೂ ಮಹಾರಾಷ್ಟ್ರದಲ್ಲಿ ಬಿಜೆಪಿ ಸರಕಾರಗಳಲ್ಲಿ ಭಾಗಿಯಾಗಿರುವ ಶಿವಸೇನೆ ಬಿಜೆಪಿಯನ್ನು ತೀಕ್ಷ್ಣವಾಗಿ ಟೀಕಿಸಿದೆ. ಗಡಿಬಿಡಿಯಲ್ಲಿ ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿ ಶಕ್ತಿ ತೋರಿಸಲು ಪ್ರಯತ್ನಿಸಿದವರು ಈಗ ಸ್ವಯಂ ಚಿತ್ ಆಗಿದ್ದಾರೆ ಎಂದು ಶಿವಸೇನೆ ಮಾರ್ಮಿಕ ಪ್ರಹಾರ ನೀಡಿದೆ ಎಂದು ವರದಿಯಾಗಿದೆ. ಪಕ್ಷದ ಮುಖಪತ್ರಿಕೆ ಸಾಮ್ನಾದಲ್ಲಿ ಪ್ರಕಟವಾಧ ಸಂಪಾದಕೀಯದಲ್ಲಿ ಶಿವಸೇನೆ ಉತ್ತರಾಖಂಡದಲ್ಲಿ ಏನು ನಡೆಯಿತೋ ಆದರಿಂದಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ತುತ್ತೂರಿ ಮತ್ತು ಡೋಲು ಬಾರಿಸುವ ಅವಕಾಶ ಮಾಡಿಕೊಟ್ಟಿತು. ಅಲ್ಲಿ ಏನೆಲ್ಲ ನಡೆಯಿತೋ ಅವೆಲ್ಲವೂ ಪ್ರಧಾನಿಯ ಇಚ್ಛೆಂಂತೆ ನಡೆದಿರಬೇಕು. ಉತ್ತರಾಖಂಡದ ಕೋರ್ಟ್ ಆಡಳಿತಗಾರರ ತಪ್ಪಿನಿಂದಾಗಿ ಹಸ್ತಕ್ಷೇಪಿಸುವಂತಾಯಿತು ಎಂದು ಶಿವಸೇನೆ ಹೇಳಿದೆ.
ಉತ್ತರಾಖಂಡದಲ್ಲಾದ ಗಡಿಬಿಡಿ ಮತ್ತು ಚೇಷ್ಟೆಗಳಿಗಾಗಿ ಜನರು ನಿಮಗೆ ಅಧಿಕಾರವನ್ನು ಕೊಟ್ಟಿಲ್ಲ ಎಂದಿರುವ ಶಿವಸೇನೆ ತನ್ನ ಮುಖಪತ್ರಿಕೆಯ ಸಂಪಾದಕೀಯದಲ್ಲಿ ನಿರುಂಕುಶರರಾಗಬೇಡಿ, ನಿರಂಕುಶ ಹಿಟ್ಲರನ ಗರ್ವ, ಅಹಂಕಾರ ಕೊನೆಯಾಗಿದೆ ಮತ್ತು ಅಂಧಕಾರದ ಕಂದಕದಲ್ಲಿ ಅವನು ಸ್ವಯಂ ಗುಂಡು ಹೊಡೆದುಕೊಳ್ಳಬೇಕಾಯಿತು. ಆದ್ದರಿಂದ ಪ್ರಜಾಪ್ರಭುತ್ವದ ಮಹತ್ವವನ್ನು ತಿಳಿದುಕೊಳ್ಳಿರಿ. ಜನರು ಆಳ್ವಿಕೆ ನಡೆಸಲಿಕ್ಕಾಗಿ ಎರಡಲಗಿನ ಖಡ್ಗವನ್ನು ನೀಡಿದ್ದಾರೆ. ಈ ಖಡ್ಗದಿಂದ ಸ್ವಂತಮೂಗನ್ನು ಕೊಯ್ಯಬೇಡಿರಿ ಎಚ್ಚರಿಕೆ ನೀಡಿದೆ.