ಪೇನ್ ಕಿಲ್ಲರ್ ಕಾಂಬಿ ಫ್ಲಾಂ 'ಕಳಪೆ' : ಮಾರುಕಟ್ಟೆಯಿಂದ ಹಿಂದಕ್ಕೆ

Update: 2016-05-12 12:30 GMT

ನವದೆಹಲಿ : ಔಷಧಿ ನಿಯಂತ್ರಕ ಸಂಸ್ಥೆಸೆಂಟ್ರಲ್ ಡ್ರಗ್ಸ್ ಸ್ಟಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ದೇಶದಲ್ಲಿ ಜನಪ್ರಿಯವಾಗಿರುವ ಪೇನ್ ಕಿಲ್ಲರ್ ಕಾಂಬಿ ಫ್ಲಾಂ ಮಾತ್ರೆಗಳನ್ನು ಅವುಗಳ ಗುಣಮಟ್ಟ ಸಮಾಧಾನಕರವಾಗಿಲ್ಲವೆಂದು ಮಾರುಕಟ್ಟೆಯಿಮದ ಹಂತ ಹಂತವಾಗಿ ಹಿಂದಕ್ಕೆ ಪಡೆಯುತ್ತಿದೆ.

ಕಾಂಬಿ ಫ್ಲಾಂ ಮಾತ್ರೆಯ ಕೆಲವೊಂದು ಬ್ಯಾಚುಗಳು ಕೆಲವೊಂದು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದುಆರ್ಗನೈಸೇಶನ್ ತನ್ನ ವೆಬ್ ಸೈಟಿನಲ್ಲಿ ಹೇಳಿದೆ.

ಮಾತ್ರೆ ಅಥವಾ ಕ್ಯಾಪ್ಸೂಲ್ ಒಂದು ಅದನ್ನು ಸೇವಿಸಿದ ಮನುಷ್ಯನ ದೇಹದಲ್ಲಿ ತನ್ನ ಕಾರ್ಯ ನಿರ್ವಹಿಸಲು ತೆಗೆದುಕೊಳ್ಳುವ ಸಮಯವನ್ನು ಡಿಸ್ ಇಂಟಗ್ರೇಶನ್ ಪರೀಕ್ಷೆ ಮೂಲಕ ತಿಳಿಯಬಹುದಾಗಿದ್ದು ಈ ಪರೀಕ್ಷೆಯಲ್ಲಿ ಕಾಂಬಿ ಫ್ಲಾಂ ವಿಫಲವಾಗಿದೆಯೆಂದು ತಿಳಿದು ಬಂದಿದೆ.

ಕಾಂಬಿ ಫ್ಲಾಂ ಪ್ಯಾರಾಸಿಟಮಾಲ್ ಹಾಗೂ ಐಬುಪ್ರುಫೆನ್ ಕಾಂಬಿನೇಶನ್ಮಾತ್ರೆಯಾಗಿದ್ದು ಫ್ರೆಂಚ್ ಕಂಪೆನಿ ಸ್ಯಾನೊಫಿ ಭಾರತದಲ್ಲಿ ತಯಾರಿಸುವ ಐದು ಪ್ರಮುಖ ಬ್ರ್ಯಾಂಡುಗಳಲ್ಲಿ ಒಂದಾಗಿದೆ.

ಔಷಧಿ ನಿಯಂತ್ರಕ ಸಂಸ್ಥೆ ಪರೀಕ್ಷಿಸಿದಕಾಂಬಿ ಫ್ಲಾಂ ಬ್ಯಾಚುಗಳು ಜೂನ್ 2015 ಹಾಗೂ ಜುಲೈ 2015 ಉತ್ಪಾದನಾ ದಿನಾಂಕ ಹಾಗೂ ಕ್ರಮವಾಗಿ ಮೇ 2018 ಹಾಗೂ ಜೂನ್ 2018 ಎಕ್ಸ್ ಪೈರಿ ದಿನಾಂಕ ಹೊಂದಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News