ನಿಝಾಮಿಗೆ ಗಲ್ಲು: ಪಾಕ್-ಬಾಂಗ್ಲಾ ವಾಗ್ಯುದ್ಧ
ಇಸ್ಲಾಮಾಬಾದ್ ಮೇ 12: ಬಾಂಗ್ಲಾದ ಜಮಾಅತೆ ಇಸ್ಲಾಮಿ ನಾಯಕ ಮುತೀಉರ್ರಹ್ಮಾನ್ ನಿಝಾಮಿಗೆ ಬಾಂಗ್ಲಾ ಸರಕಾರ ಗಲ್ಲು ಶಿಕ್ಷೆ ನೀಡಿರುವ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳ ನಡುವೆ ವಾಗ್ಯುದ್ಧ ಸ್ಫೋಟಗೊಂಡಿದೆ. ಎರಡು ದೇಶಗಳು ಪರಸ್ಪರ ಕಟು ಟೀಕೆಗಿಳಿದಿವೆ. ನಿಝಾಮಿಗೆ ಗಲ್ಲು ಶಿಕ್ಷೆನೀಡಿದ ಬಾಂಗ್ಲಾದ ದೇಶದ ಕ್ರಮಕ್ಕೆ ಪಾಕಿಸ್ತಾನ ತೀವ್ರ ದುಃಖವನ್ನು ಪ್ರಕಟಿಸಿ, ನಿಝಾಮಿ ಪಾಕಿಸ್ತಾನದ ಸಂವಿಧಾನ ಮತ್ತು ಕಾನೂನನ್ನು ಜಾರಿಯಲ್ಲಿರಿಸಲು ಪ್ರಯತ್ನಿಸಿದ್ದರು ಅಷ್ಟೇ ಎಂದು ಪಾಕಿಸ್ತಾನ ಹೇಳಿದೆ.
" ಬಾಂಗ್ಲಾ ಜಮಾಅತ್‌ನ ನಾಯಕರಾಗಿದ್ದ ಮುತೀಉರ್ರಹ್ಮಾನ್ ನಿಝಾಮಿಗೆ 1971 ಡಿಸೆಂಬರ್‌ಗಿಂತ ಮೊದಲಿನ ಅಪರಾಧ ಎಂಬ ನೆಪಮುಂದಿಟ್ಟು ಬಾಂಗ್ಲಾ ದೇಶ ಗಲ್ಲು ಶಿಕ್ಷೆ ನೀಡಿದ್ದಕ್ಕೆ ತೀವ್ರ ದುಃಖವಾಗಿದೆ ಎಂದಿರುವ ಪಾಕಿಸ್ತಾನದ ವಿದೇಶ ವಿಭಾಗವು, ನಿಝಾಮಿಯ ಅಪರಾಧವೆಂದರೆ ಕೇವಲ ಪಾಕಿಸ್ತಾನದ ಸಂವಿಧಾನ ಹಾಗೂ ಕಾನೂನನ್ನು ಜಾರಿಯಲ್ಲಿರಿಸಲು ಶ್ರಮಿಸಿದ್ದಾಗಿತ್ತು" ಎಂದು ಶೋಕ ವ್ಯಕ್ತಪಡಿಸಿದೆ. ಬಾಂಗ್ಲಾದೇಶವು ಇದಕ್ಕೆ ಪ್ರತಿಕ್ರಿಯಿಸಿ ನಿಝಾಮಿಯ ದೇಶದ್ರೋಹಿ ಪಾತ್ರವನ್ನು ಇಸ್ಲಾಮಾಬಾದ್‌ನ ಹೇಳಿಕೆ ಸರಿಯಾಗಿದೆ ಎಂದು ಸಮರ್ಥಿಸುತ್ತಿದೆ ಎಂದು ಟೀಕಿಸಿದೆ. ಮಾತ್ರವಲ್ಲ ನಿಝಾಮಿ ಬಾಂಗ್ಲಾದೇಶದ ವಿರುದ್ಧಪಾಕಿಸ್ತಾನದ ಸೈನಿಕರಿಗೆ ನೆರವಾಗಿದ್ದರು ಎಂದು ಪಾಕಿಸ್ತಾನದ ವಿರುದ್ಧ ಉಗ್ರವಾಗಿ ಎರಗಿದೆ.
"ಇಸ್ಲಾಮಾಬಾದ್ ಹೊರಡಿಸಿರುವ ಹೇಳಿಕೆಯು ಬಾಂಗ್ಲಾ ದೇಶದ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪವಾಗಿದೆ.ಪಾಕಿಸ್ತಾನ ಆಗಾಗ ಹೀಗೆ ಮಾಡುತ್ತಿದೆ" ಎಂದೂ ಬಾಂಗ್ಲಾ ವಿದೇಶ ಸಚಿವಾಲಯ ಹೇಳಿದೆ.
ಬಾಂಗ್ಲಾದಕ್ರಮದ ವಿರುದ್ಧ ವಿಷಾದ ವ್ಯಕ್ತಪಡಿಸಿರುವ ಪಾಕಿಸ್ತಾನ 1974ರಲ್ಲಿ , ಬಾಂಗ್ಲಾ, ಪಾಕಿಸ್ತಾ ಮತ್ತು ಭಾರತಗಳ ನಡುವೆ ನಡೆದಿದ್ದ ತ್ರಿಪಕ್ಷೀಯ ಒಪ್ಪಂದದ ವಿರೋಧಿ ಕ್ರಮವಿದು ಎಂದು ಗುಡುಗಿದೆ. ಜಮಾಅತ್ ನಾಯಕ ನಿಝಾಮಿಗೆ ಗಲ್ಲು ಶಿಕ್ಷೆ ವಿಧಿಸಿದ ನಂತರ ಇವೆರಡೂ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನೆಲೆಯಾಗಿದೆ ಎಂದು ವರದಿಯಾಗಿದೆ.