×
Ad

ಬಾಂಗ್ಲಾ ಜಮಾತೆ ನಾಯಕನ ಮರಣ ದಂಡನೆಯನ್ನು ಖಂಡಿಸಿದ ಟರ್ಕಿ

Update: 2016-05-12 19:28 IST

ಅಂಕಾರ (ಟರ್ಕಿ), ಮೇ 12: ಬಾಂಗ್ಲಾದೇಶದಲ್ಲಿ ಉನ್ನತ ಮುಸ್ಲಿಂ ನಾಯಕರೊಬ್ಬರನ್ನು ಗಲ್ಲಿಗೇರಿಸಿರುವುದನ್ನು ಟರ್ಕಿಪ್ರಬಲವಾಗಿ ಖಂಡಿಸಿದೆ ಹಾಗೂ ಈ ವಿಷಯದ ಬಗ್ಗೆ ಸಮಾಲೋಚನೆ ನಡೆಸುವುದಕ್ಕಾಗಿ ಗುರುವಾರ ತನ್ನ ಬಾಂಗ್ಲಾದೇಶ ರಾಯಭಾರಿಯನ್ನು ಹಿಂದಕ್ಕೆ ಕರೆಸಿಕೊಂಡಿದೆ ಎಂದು ಸರಕಾರಿ ಒಡೆತನದ ಅನಾತೋಲಿಯ ವಾರ್ತಾ ಸಂಸ್ಥೆ ವರದಿ ಮಾಡಿದೆ.

1971ರ ಪಾಕಿಸ್ತಾನ ಯುದ್ಧದ ಅವಧಿಯಲ್ಲಿ ಬುದ್ಧಿಜೀವಿಗಳ ಸಾಮೂಹಿಕ ಹತ್ಯೆ ನಡೆಸಿದರೆಂಬ ಆರೋಪದಲ್ಲಿ ಜಮಾತೆ ಇಸ್ಲಾಮಿ ಪಕ್ಷದ ನಾಯಕ ಮುತಿಉರ್ರಹ್ಮಾನ್ ನಿಝಾಮಿಯನ್ನು ಢಾಕಾದ ಜೈಲೊಂದರಲ್ಲಿ ಮಂಗಳವಾರ ರಾತ್ರಿ ಗಲ್ಲಿಗೇರಿಸಲಾಗಿತ್ತು.

ಬಾಂಗ್ಲಾದೇಶಕ್ಕೆ ಟರ್ಕಿಯ ರಾಯಭಾರಿ ಡೆವ್ರಿಮ್ ಉಝ್‌ಟರ್ಕ್ ಶೀಘ್ರವೇ ಟರ್ಕಿಗೆ ಮರಳುವ ನಿರೀಕ್ಷೆಯಿದೆ ಎಂದು ವಾರ್ತಾಸಂಸ್ಥೆ ಹೇಳಿದೆ. ಟರ್ಕಿಯ ವಿದೇಶ ಸಚಿವಾಲಯ ಈ ಗಲ್ಲನ್ನು ಈಗಾಗಲೇ ಖಂಡಿಸಿದೆ. ನಿಝಾಮಿ ಇಂಥ ಶಿಕ್ಷೆಗೆ ಅರ್ಹರಾಗಿದ್ದಾರೆ ಎಂದು ತಾನು ನಂಬುವುದಿಲ್ಲ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News