×
Ad

ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಸದ್ಭಾವನಾ ರಾಯಭಾರಿಯಾಗಿ ರಹ್ಮಾನ್

Update: 2016-05-12 23:12 IST

ಹೊಸದಿಲ್ಲಿ, ಮೇ 12: ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್, ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಶೂಟರ್ ಅಭಿನವ್ ಬಿಂದ್ರಾ ಹಾಗೂ ಭಾರತ ರತ್ನ ಸಚಿನ್ ತೆಂಡುಲ್ಕರ್ ಬಳಿಕ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್.ರಹ್ಮಾನ್ ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಸದ್ಭಾವನಾ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.

ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಗುರುವಾರ ಎಆರ್ ರಹ್ಮಾನ್‌ರಿಂದ ಅಧಿಕೃತ ಲಿಖಿತ ದೃಢ ಪತ್ರವನ್ನು ಸ್ವೀಕರಿಸಿದೆ. ಆಗಸ್ಟ್ 2016ರಲ್ಲಿ ನಡೆಯಲಿರುವ ರಿಯೋ ಗೇಮ್ಸ್‌ಗೆ ಭಾರತ ತಂಡದ ಸದ್ಭಾವನಾ ರಾಯಭಾರಿ ಆಗುತ್ತಿರುವುದು ನನಗೆ ಖಂಡಿತವಾಗಿಯೂ ಹೆಮ್ಮೆಯ ವಿಷಯವಾಗಿದೆ ಎಂದು ರಹ್ಮಾನ್ ಹೇಳಿದ್ದಾರೆ.

ರಿಯೋ ಒಲಿಂಪಿಕ್ಸ್ ರಾಯಭಾರಿಯಾಗಿ ರಹ್ಮಾನ್‌ರನ್ನು ಸ್ವಾಗತಿಸಲು ನಾವು ಇಷ್ಟಪಡುತ್ತೇವೆ. ಒಲಿಂಪಿಕ್ಸ್ ಚಳುವಳಿಯನ್ನು ಜಾಗೃತಗೊಳಿಸಲು ಹಾಗೂ ಪ್ರಚಾರ ಪಡಿಸಲು ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ದಂತಕತೆ ನಮ್ಮಿಂದಿಗೆ ಇರುವುದು ದೊಡ್ಡ ಗೌರವ ಎಂದು ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News