×
Ad

ಸಂಸತ್ ಭವನದ ಸಮೀಪ ಮರಕ್ಕೆ ನೇಣುಬಿಗಿದು ಮ.ಪ್ರ.ನಿವಾಸಿ ಆತ್ಮಹತ್ಯೆ

Update: 2016-05-12 23:57 IST

ಹೊಸದಿಲ್ಲಿ, ಮೇ 12: ಸಂಸತ್‌ಭವನ ಸಂಕೀರ್ಣದ ಸಮೀಪವೇ 39 ವರ್ಷದವನೊಬ್ಬ ಗುರುವಾರ ಬೆಳಗ್ಗೆ ಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನನ್ನು ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ನಿವಾಸಿ ರಾಮ್ ದಯಾಳ್ ವರ್ಮಾ ಎಂದು ಗುರುತಿಸಲಾಗಿದೆ. ಪೊಲೀಸರು ಆತನ ಜೇಬಿನಿಂದ ಆತ್ಮಹತ್ಯೆ ಪತ್ರವೊಂದನ್ನು ಕೂಡಾ ವಶಪಡಿಸಿಕೊಂಡಿದ್ದಾರೆ. ರೈಲ್ ಭವನ್ ಹಾಗೂ ಸಂಸತ್‌ಭವನದ ಮಧ್ಯೆ ಇರುವ ವಿಜಯ್ ಚೌಕ್ ಪ್ರದೇಶದ ಮರವೊಂದರಲ್ಲಿ ಬೆಳಗ್ಗೆ 7:15ರ ವೇಳೆಗೆ ವರ್ಮಾನ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ನೇತಾಡುತ್ತಿದ್ದುದು ಪತ್ತೆಯಾಗಿತ್ತು. ಘಟನೆಗೆ ಸಂಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News