ವಕ್ಫ್ ಜಮೀನು ವ್ಯವಹಾರ ರದ್ದು ಪಡಿಸಿದ ಮಹಾರಾಷ್ಟ್ರ ಸರಕಾರ

Update: 2016-05-13 05:41 GMT

ಮುಂಬೈ, ಮೇ 13: ಸುಪ್ರೀಂಕೋರ್ಟ್ ಆದೇಶವನ್ನು ಮೀರಿ ನಡೆಸಿದ ವಕ್ಫಬೋರ್ಡ್ ಆಸ್ತಿಗಳ ಮಾರಾಟವನ್ನು ಮಹಾರಾಷ್ಟ್ರ ಸರಕಾರ ರದ್ದುಪಡಿಸಿದೆ. 2005 ಮತ್ತು 2010 ನಡುವೆ ನಡೆದಿದ್ದ ಎಪ್ಪತ್ತು ಭೂಮಿ ವ್ಯವಹಾರಗಳನ್ನು ಸರಕಾರ ರದ್ದುಪಡಿಸಿದೆ. ವಕ್ಫ್ ಬೋರ್ಡ್‌ನ ಆಸ್ತಿಗಳನ್ನು ಮಾರುವುದು, ಬಾಡಿಗೆಗೆ ಕೊಡುವುದಕ್ಕೆ ಸುಪ್ರೀಂ ಕೋರ್ಟ್‌ನಿಂದ ನಿಷೇಧ ಇರುವುದನ್ನು ಮೀರಿ ಜಮೀನು ಹಸ್ತಾಂತರ ನಡೆಸಲಾಗಿದೆ. ಆದ್ದರಿಂದ ಅಂತಹ ವ್ಯವಹಾರಗಳನ್ನು ರದ್ದುಪಡಿಸಲಾಗುವುದೆಂದು ಕಂದಾಯ ಸಚಿವ ಏಕನಾಥ ಕಾಡ್ಸೆ ಹೇಳಿದ್ದಾರೆಂದು ವರದಿಯಾಗಿದೆ. ಸುಪ್ರೀಂಕೋರ್ಟ್ ಆದೇಶಕ್ಕೆ ಬೆಲೆನೀಡದೆ ವ್ಯವಹಾರಕ್ಕೆ ಅನುಮತಿಸಿದ ಚ್ಯಾರಿಟಿ ಕಮೀಶನರ್‌ರ ವಿರುದ್ಧ ಸರಕಾರದ ಅತೃಪ್ತಿಯನ್ನು ವ್ಯಕ್ತಪಡಿಸಲು ಕಾನೂನು ಇಲಾಖೆಗೆ ಸೂಚನೆ ನೀಡಲಾಗಿದೆ. ಮಹಾರಾಷ್ಟ್ರದಲ್ಲಿ ಲಕ್ಷ ಹೆಕ್ಟೇರ್ ಜಮೀನು ವಕ್ಫ್ ಬೋರ್ಡ್‌ನ ಅಧೀನದಲ್ಲಿದೆ.ಮಾರಾಟ ನಿಷೇಧ ಆಸ್ತಿಗಳ ಸಾಲಿಗೆ ಈ ಎಲ್ಲ ಜಮೀನುಗಳನ್ನು ಸೇರಿಸಲಾಗಿದೆಎಂದೂ ಸಚಿವರುತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News