ಮಾಲೆಗಾಂವ್ ತನಿಖೆಗೆ ಎಳ್ಳುನೀರು

Update: 2016-05-13 15:35 GMT

ನವದೆಹಲಿ : 2008ರ ಮಾಲೆಗಾಂವ್ಸ್ಫೋಟ ಪ್ರಕರಣದ ತನಿಖೆಗೆ ಎಳ್ಳುನೀರುಬಿಟ್ಟಿದೆಯೋ ಎಂಬ ಶಂಕೆ ಬರುವಂತೆ ರಾಷ್ಟ್ರೀಯ ತನಿಖಾ ಏಜನ್ಸಿಶುಕ್ರವಾರ ಮುಂಬೈ ಕೋರ್ಟಿಗೆ ಸಲ್ಲಿಸಲಿರುವ ಚಾರ್ಜ್ ಶೀಟಿನಲ್ಲಿಆರೋಪಿಯಾಗಿ ಸಾಧ್ವಿ ಪ್ರಜ್ಞಾ ಠಾಕುರ್ ಹೆಸರು ಉಲ್ಲೇಖಿಸದಿರಲು ನಿರ್ಧರಿಸಿದೆ. ಇದರಿಂದ ಆಕೆ ಬಂಧನದಿಂದ ಶೀಘ್ರ ಬಿಡುಗಡೆಯಾಗುವ ಸಂಭವವಿದೆ.

26/11ರ ಮುಂಬೈ ದಾಳಿಯಲ್ಲಿ ಹುತಾತ್ಮರಾದ ಮಹಾರಾಷ್ಟ್ರದ ಮಾಜಿ ಎಟಿಎಸ್ ಮುಖ್ಯಸ್ಥಹೇಮಂತ್ ಕರ್ಕರೆ ಈ ಪ್ರಕರಣದಲ್ಲಿ ನಡೆಸಿದ್ದ ತನಿಖೆಯಲ್ಲಿ ಲೋಪವಿದೆಯೆಂದೂ, ಇನ್ನೊಬ್ಬ ಪ್ರಮುಖ ಆರೋಪಿ ಕರ್ನಲ್ ಪ್ರಸಾದ್ ಪುರೋಹಿತ್ ಅವರ ವಿರುದ್ಧ ಸುಳ್ಳು ಸಾಕ್ಷ್ಯ ಪ್ರಸ್ತುತಪಡಿಸಲಾಗಿದೆಯೆಂದೂಹಾಗೂ ಸಾಕ್ಷಿಗಳಿಂದ ಬಲವಂತವಾಗಿ ಹೇಳಿಕೆ ಪಡೆಯಲಾಗಿದೆಯೆಂದೂ ಚಾರ್ಜ್ ಶೀಟಿನಲ್ಲಿ ತಿಳಿಸಲಾಗಿದೆಯೆಂದು ಮೂಲಗಳು ಹೇಳಿವೆ.
ಎಟಿಎಸ್ ಸ್ವತಹ ಪುರೋಹಿತ್ ಅವರನ್ನು ದಿಯೋಲಾಲಿ ಸೇನಾ ಶಿಬಿರದಿಂದ 2008ರಲ್ಲಿ ಬಂಧಿಸುವಾಗ ಅಲ್ಲಿ ಬಾಂಬ್ ಇರಿಸಿತ್ತೆಂದೂ ಚಾರ್ಜ್‌ಶೀಟಿನಲ್ಲಿತಿಳಿಸಲಾಗುವ ಸಂಭವವಿದೆ’’ಎಂದು ಹೇಳಿರುವ ಎನ್‌ಐಎ ಅಧಿಕಾರಿಯೊಬ್ಬರು‘‘ಎಟಿಎಸ್ ಸ್ವತಹ ಆರ್‌ಡಿಎಕ್ಸ್ ಇರಿಸಿತ್ತು ಎಂಬುದಕ್ಕೆ ನಮ್ಮಲ್ಲಿಪುರಾವೆಯಿದೆ,’’ ಎಂದಿದ್ದಾರೆ.
ಪುರೋಹಿತ್ ಹಾಗೂ ಇತರ ಆರೋಪಿಗಳ ವಿರುದ್ಧಮಹಾರಾಷ್ಟ್ರ ಕಂಟ್ರೋಲ್ ಆಫ್ ಆರ್ಗನೈಸ್ಡ್ ಕ್ರೈಂ ಆಕ್ಟ್ ಅನ್ವಯ ದಾಖಲಿಸಲಾದ ಆರೋಪಗಳನ್ನು ಕೈಬಿಡಲಿದೆಯೆಂದು ತಿಳಿದು ಬಂದಿದ್ದ್ದು ಅವರೆಲ್ಲರ ಮೇಲೂ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯನ್ವರು ಚಾರ್ಜ್ ಶೀಟ್ ದಾಖಲಿಸಲಾಗುವುದು ಎಂದು ತಿಳಿದು ಬಂದಿದೆ.
ಇನ್ನೂ ಮೂವರು ಆರೋಪಿಗಳಿಗೆ ಎನ್‌ಐಎ ಕ್ಲೀನ್ ಚಿಟ್ ನೀಡಿದೆಯೆಂದೂ ಇವರಿಗೆ ನಾಲ್ವರನ್ನು ಬಲಿ ಪಡೆದ ಹಾಗೂ 79 ಮಂದಿ ಇತರರನ್ನು ಗಾಯಗೊಳಿಸಿದಮಾಲೆಗಾಂವ್ ಸ್ಫೋಟದ ಹಿಂದಿನ ಸಂಚು ತಿಳಿದಿರಲಿಲ್ಲವೆಂದುಹೇಳಲಾಗಿದೆ.
ಈ ಪ್ರಕರಣದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದ ರೋಹಿಣಿ ಸಾಲ್ಯಾನ್ ಜೂನ್ 24, 2015ರಂದು ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನವೊಂದರಲ್ಲಿ ಹೊಸ ಸರಕಾರ ಅಧಿಕಾರಕ್ಕೆ ಬಂದಂದಿನಿಂದತನಗೆ ಎನ್‌ಐಎಯಿಂದ ಈ ಪ್ರಕರಣದ ಆರೋಪಿಗಳ ಮೇಲೆ ‘ಮೃದು’ ಧೋರಣೆ ಅನುಸರಿಸುವಂತೆ ಒತ್ತಡವಿದೆಯೆಂದು ಹೇಳಿದ್ದರು. ಅಕ್ಟೋಬರ್ ತಿಂಗಳಲ್ಲಿ ಆಕೆಯನ್ನು ಹುದ್ದೆಯಿಂದ ಕೈಬಿಟ್ಟ ನಂತರ ತನ್ನನ್ನು ಸಂಪರ್ಕಿಸಿದ್ದ ಎನ್‌ಐಎ ಅಧಿಕಾರಿಯ ಹೆಸರನ್ನು ಆಕೆ ಬಹಿರಂಗ ಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News