ಜಿಶಾ ತಾಯಿಯ ಭೇಟಿ ಮಾಡದಂತೆ ಪತ್ರಕರ್ತರಿಗೆ ನಿಷೇಧ!

Update: 2016-05-13 05:45 GMT

ಪೆರುಂಬಾವೂರ್, ಮೇ 13: ದಾರುಣವಾಗಿ ಅತ್ಯಾಚಾರಕ್ಕೀಡಾಗಿ ಕೊಲೆಯಾದ ಕಾನೂನು ವಿದ್ಯಾರ್ಥಿ ಜಿಶಾರ ತಾಯಿಯನ್ನು ಭೇಟಿ ಮಾಡದಂತೆ ಪತ್ರಕರ್ತರಿಗೆ ನಿಷೇಧ ಹೇರಲಾಗಿದೆ. ಜಿಶಾ ಹತ್ಯೆಯ ಹಿಂದೆ ನೆರೆಹೊರೆಯವರ ಕೈಗಳು ಕೆಲಸ ಮಾಡಿವೆ ಎಂದು ಜಿಶಾ ತಾಯಿ ರಾಜೇಶ್ವರಿ ಹೇಳಿದ್ದರು. ತನಗೆ ಸಂದೇಹ ಇರುವವರ ಹೆಸರನ್ನೂ ಅವರು ಹೇಳಿದ್ದರು. ಈ ಸುದ್ದಿ ಪ್ರಕಟವಾದ ನಂತರ ಪೊಲೀಸ್ ಪತ್ರಕರ್ತರಿಗೆ ಅವರನ್ನು ಭೇಟಿ ಮಾಡದಂತೆ ಪೊಲೀಸರು ನಿಷೇಧ ಹೇರಿದರೆಂದು ವರದಿಯಾಗಿದೆ.

ಇದಲ್ಲದೆ ಸೋಲಾರ್ ಪ್ರಕರಣದ ಆರೋಪಿ ಸರಿತಾರಿಗೆ ರಾಜೇಶ್ವರಿಯವರನ್ನು ಭೇಟಿಯಾಗಲು ಪೊಲೀಸರು ಅವಕಾಶ ನೀಡಿದ್ದಾರೆ. ಗುರುವಾರ ದೀಪಾ ಮತ್ತು ಅಮ್ಮ ರಾಜೇಶ್ವರಿಯನ್ನು ಭೇಟಿಯಾಗಲು ಪ್ರಯತ್ನಿಸಿದ ಪತ್ರಕರ್ತರಿಗೆ ಪೊಲೀಸರು ಅನುಮತಿ ನೀಡಿಲ್ಲ.ಮಾಧ್ಯಮಗಳಿಗೆ ಅನುಮತಿ ನೀಡಬಾರದೆಂದು ನಮಗೆ ಸೂಚನೆ ಲಭಿಸಿದ್ದು ಆದ್ದರಿಂದ ರಾಜೇಶ್ವರಿಯವರನ್ನು ಭೇಟಿಯಾಗಲು ಅನುಮತಿ ನೀಡುವಂತಿಲ್ಲ ಎಂದು ಪೊಲೀಸರು ಹೇಳಿದರು. ಈ ನಡುವೆ ಜ್ವರಬಾಧಿಸಿದ್ದರಿಂದ ದೀಪಾರನ್ನು ತಾಲೂಕು ಆಸ್ಪತ್ರೆಗೆ ಸೇರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News