×
Ad

ಸುರೇಶ್‌ಗೋಪಿಯ ಕುರಿತು ಲಜ್ಜೆ ಅನಿಸುತ್ತಿದೆ

Update: 2016-05-13 11:45 IST

ಪಾವರಟ್ಟಿ, ಮೇ13: ಸುರೇಶ್ ಗೋಪಿ ನರೇಂದ್ರ ಮೋದಿಯ ಗುಲಾಮರೆಂಬ ಅವಸ್ಥೆಗೆ ಬದಲಾಗಿರುವುದನ್ನು ನೋಡಿ ನನಗೆ ಲಜ್ಜೆಯಾಗುತ್ತಿದೆ ಎಂದು ಮಳೆಯಾಳಂನ ಸ್ಟಾರ್ ನಿರ್ದೇಶಕ ಕಮಲ್ ಹೇಳಿದ್ದಾರೆ. ಅವನವನಿಗೆ ಒಂದು ಹುದ್ದೆ ಸಿಗುವವರೆಗೆ ಮಾತ್ರ ಆದರ್ಶ ಎಂಬಂತಾಗಿದೆ. ಇದಕ್ಕೆ ಕೆಪಿಸಿಸಿ ಅಧ್ಯಕ್ಷರು ಮತ್ತು ಸುರೇಶ್‌ಗೋಪಿ ಉತ್ತಮ ಉದಾಹರಣೆಯಾಗಿದ್ದಾರೆಂದು ಕಮಲ್ ಹೇಳಿದರು. ಕಮಲ್ ಪೂವತ್ತೂರಿನಲ್ಲಿ ಎಲ್‌ಡಿಎಫ್‌ನ ಸಾಂಸ್ಕೃತಿಕ ಸಂಗಮವನ್ನು ಉದ್ಘಾಟಿಸಿ ಮಾತಾಡುತ್ತಿದ್ದರು.

ಕೆಪಿಸಿಸಿ ಅಧ್ಯಕ್ಷ ಸುಧೀರನ್ ಭ್ರಷ್ಟಾಚಾರವನ್ನು ನುಂಗಿದ್ದು ಮಾತ್ರವಲ್ಲ ಅದರ ಮೇಲ್ಭಾಗದಲ್ಲಿ ಹತ್ತಿ ಕುಳಿತಿದ್ದಾರೆ. ಕೇರಳವನ್ನು ಸೋಮಾಲಿಯದೊಂದಿಗೆ ಹೋಲಿಸುವ ಮೂಲಕ ಪ್ರಧಾನಿ ರಾಷ್ಟ್ರವೊಂದನ್ನು ಅವಹೇಳನ ನಡೆಸಿದ್ದಾರೆ. ಇಂದು ವಿಶ್ವವಿದ್ಯಾನಿಲಯಗಳಲ್ಲಿ ಬಲಪಂಥೀಯ ನಿಲುವು ಮಾತ್ರ ಇದ್ದರೆ ಸಾಕೆಂಬ ಸ್ಥಿತಿ ಇದೆ.

ಅದನ್ನು ವಿರೋಧಿಸುವವರು ದೇಶದ್ರೋಹಿಗಳಾಗುತ್ತಾರೆ. ಮೊದಲು ಸಾಂಸ್ಕೃತಿಕ ಕೇಂದ್ರವಾಗಿದ್ದಲ್ಲೆಲ್ಲ ಅಹಿಂದೂಗಳಿಗೆ ಪ್ರವೇಶವಿಲ್ಲ ಎಂದು ಬೋರ್ಡ್ ಇಟ್ಟು ಧರ್ಮಕೇಂದ್ರಗಳನ್ನಾಗಿ ಮಾಡಲಾಗಿದೆ. ಕ್ರೆಕೆಟಿಗ ಶ್ರೀಶಾಂತ್ ಬಿಜೆಪಿಯ ಸರಿಯಾದ ರೂಪಗೊತ್ತಿಲ್ಲದ ವ್ಯಕ್ತಿ ಎಂದೂ ಕಮಲ್ ವ್ಯಂಗ್ಯವಾಡಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಸಾಹಿತಿ ವೈಶಾಖನ್ ವಹಿಸಿದರು. ಜಯರಾಜ್ ವಾರಿಯರ್, ಎಂಞಂಡಿಯೂರ್ ಚಂದ್ರ ಶೇಖರನ್, ಅರವಿಂದ್ ಚೂಂಡಲ್, ಡಾ,ಎನ್.ಆರ್. ಗ್ರಾಮಪ್ರಕಾಶ್, ಕವಿ ರಾವುಣ್ಣಿ ಮೊದಲಾದವರು ಮಾತಾಡಿದರು. ಪಿ.ಜಿ. ಸುಭಿದಾಸ್ ಸ್ವಾಗತಿಸಿದರು. ಶಾಜಿ ಕಾಕ್ಕಶ್ಶೇರಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News