ಐಪಿಸಿ ಸೆಕ್ಷನ್ 499 ಸಂವಿಧಾನಬದ್ಧ , ಮಾನನಷ್ಟ ಸಿವಿಲ್ ಅಲ್ಲ ’ಕ್ರಿಮಿನಲ್’ :ಸುಪ್ರೀಂ ಕೋರ್ಟ್
ಹೊಸದಿಲ್ಲಿ, ಮೇ 13: ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ತೀರ್ಪಿನಲ್ಲಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 499 ಸಂವಿಧಾನಬದ್ಧ ಎಂದು ಅಭಿಪ್ರಾಯಪಟ್ಟಿದೆ.
ಭಾರತೀಯ ದಂಡ ಸಂಹಿತೆ ಸೆಕ್ಷನ್ 499 ಅಸಂವಿಧಾನಿಕ ಇದನ್ನು ರದ್ದುಪಡಿಸುವಂತೆ ಎಐಸಿಸಿ ಉಪಧ್ಯಕ್ಷ ರಾಹುಲ್ ಗಾಂಧಿ, ದಿಲ್ಲಿ ಮುಖ್ಯ ಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ.
ಮಾನನಷ್ಟ ಪ್ರಕರಣವನ್ನು ಸಿವಿಲ್ ಕೇಸ್ ಎಂದು ಪರಿಗಣಿಸಬೇಕು ಎಂದು ಅವರು ನ್ಯಾಯಾಲಯವನ್ನು ಕೋರಿದ್ದರು.
ಐಪಿಸಿ ಸೆಕ್ಷನ್ 499 ಮಾನನಷ್ಟ ಮೊಕದ್ದಮೆಯನ್ನು ಸಿವಿಲ್ ಆಗಿ ಪರಿಗಣಿಸಲು ಸಾಧ್ಯವಿಲ್ಲ. ಮಾನನಷ್ಟ ಸಿವಿಲ್ ಅಲ್ಲ ಕ್ರಿಮಿನಲ್ ಎಂದು ಹೇಳಿರುವ ನ್ಯಾಯಾಲಯವು ಕೆಳಹಂತದ ನ್ಯಾಯಾಲವು ಇದರ ವಿಚಾರಣೆ ನಡೆಸುವಾಗ ಎಚ್ಚರ ವಹಿಸಿಬೇಕು ಎಂದು ಸೂಚನೆ ನೀಡಿದೆ
ನ್ಯಾಯಾಲಯದ ತೀರ್ಪಿನಂತೆ ನಾಯಕರ ವಿರುದ್ಧ ಸಲ್ಲಿಸಲಾದ ಮಾನನಷ್ಟ ಮೊಕದ್ದಮೆ ಹಾಗೆಯೇ ಮುಂದುವರಿಯಲಿದೆ.