ಸೋಲಾರ್ ಪ್ರಕರಣ: ಮುಖ್ಯಮಂತ್ರಿ ಭೇಟಿಯ ದೃಶ್ಯ ಸಾಕ್ಷ್ಯಗಳನ್ನು ಆಯೋಗಕ್ಕೆ ಹಸ್ತಾಂತರಿಸಿದ ಸರಿತಾ!

Update: 2016-05-13 13:51 GMT

ಕೊಚ್ಚಿ, ಮೇ 13: ಕಲ್ಲಿನ ಗಣಿ ಮಾಲಕ ಶ್ರೀಧರನ್ ನಾಯರ್ ಜೊತೆ ಮುಖ್ಯಮಂತ್ರಿ ಉಮ್ಮನ್ ಚಾಂಡಿಯನ್ನು ಭೇಟಿ ಯಾದ ದೃಶ್ಯಗಳನ್ನು ಸೋಲಾರ್ ಆಯೋಗಕ್ಕೆ ಸರಿತಾ ಎಸ್. ನಾಯರ್ ಹಸ್ತಾಂತರಿಸಿದ್ದಾರೆ. ಮುಖ್ಯಮಂತ್ರಿಯ ಅಧಿಕೃತ ವಸತಿಯಾದ ಕ್ಲಿಫ್ ಹೌಸ್, ಗೆಸ್ಟ್‌ಹೌಸ್, ಸಚಿವ ಅನಿಲ್ ಕುಮಾರ್‌ರ ಅಧಿಕೃತ ವಸತಿಯಾದ ರೋಸ್ ಹೌಸ್ ಎಂಬಲ್ಲಿಯ ದೃಶ್ಯಗಳನ್ನು ಡಿಜಿಟಲ್ ರೂಪದಲ್ಲಿ ಆಯೋಗದ ಮುಂದೆ ಸರಿತಾ ಹಾಜರು ಪಡಿಸಿದ್ದಾರೆಂದು ವರದಿಯಾಗಿದೆ.

ನಾಲ್ಕುಸಚಿವರೊಂದಿಗೆ ಇರುವ ಖಾಸಗಿ ಕ್ಷಣಗಳ ದೃಶ್ಯಗಳೂ, ಮುಖ್ಯಮಂತ್ರಿಯ ಮಾಜಿ ಆಪ್ತ ಸಿಬ್ಬಂದಿ ಜಿಕ್ಕುಮೋನ್ ಸರಿತಾಗೆ ಕಳುಹಿಸಿದ ಇಮೇಲ್ ಸಂದೇಶಗಳನ್ನು ಆಯೋಗದ ಮುಂದೆ ಹಾಜರು ಪಡಿಸಬೇಕಾಗಿದೆ. ಒಂದು ಸಚಿವನ ಮೂಲಕ ಇನ್ನೊಬ್ಬ ಸಚಿವ ತನ್ನನ್ನೂ ಟ್ರಾಪ್ ಮಾಡಿದ್ದಾರೆಂದು ಸರಿತಾ ಹೇಳಿದ್ದಾರೆ.

ಮುಖ್ಯಮಂತ್ರಿಯೊಂದಿಗೆ ಭೇಟಿ ಮಾಡಿದ ದೃಶ್ಯಗಳನ್ನು ಪತ್ರಿಕಾ ಗೋಷ್ಠಿ ನಡೆಸಿ ಬಹಿರಂಗೊಳಿಸುವೆ. ಸಾಕ್ಷ್ಯಗಳನ್ನು ಸೋಲಾರ್ ಆಯೋಗ ಪರಿಶೀಲಿಸುತ್ತಿದೆ. ಆಯೋಗ ಅನುಮತಿ ನೀಡಿದರೆ ನಾಳೆಯೇ ದೃಶ್ಯಗಳನ್ನು ಹೊರಗೆ ಬಿಡುವೆ. ಆದರೆ ತನ್ನ ಖಾಸಗಿತನಕ್ಕೆ ಬಾಧಕವಾದ್ದರಿಂದ ಕೆಲವು ಖಾಸಗಿ ಕ್ಷಣಗಳ ದೃಶ್ಯಗಳನ್ನು ಬಹಿರಂಗಪಡಿಸಲಾರೆ ಎಂದು ಸರಿತಾ ಹೇಳಿದ್ದಾರೆ.

ಮುಖ್ಯಮಂತ್ರಿಯನ್ನು ಭೇಟಿಯಾದ ದೃಶ್ಯಗಳನ್ನು ಸರಿತಾ ಬಹಿರಂಗಗೊಳಿಸಿದ ಮೇಲೆ ಪ್ರತಿಕ್ರಿಯಿಸುತ್ತೇನೆ ಎಂದು ಶ್ರೀಧರನ್ ನಾಯರ್ ಹೇಳಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News