‘ಸಾಮಾಜಿಕ ನ್ಯಾಯವನ್ನು ಕಿಟಕಿಯಿಂದ ಹೊರಕ್ಕೆಸೆಯಲಾಗಿದೆ’

Update: 2016-05-13 18:13 GMT

ಕೇಂದ್ರಕ್ಕೆ ಚಾಟಿ ಬೀಸಿದ ಸರ್ವೋಚ್ಚ ನ್ಯಾಯಾಲಯ

ಹೊಸದಿಲ್ಲಿ, ಮೇ 13: ದೇಶದ ನಾಲ್ಕನೆ ಒಂದು ಭಾಗವನ್ನು ಆವರಿಸಿರುವ ಬರ ಬಿಕ್ಕಟ್ಟು ಕುರಿತು ವಿಚಾರಣೆಯನ್ನು ನಡೆಸುತ್ತಿರುವ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ‘ಸಾಮಾಜಿಕ ನ್ಯಾಯವನ್ನು ಕಿಟಕಿಯಿಂದ ಹೊರಕ್ಕೆಸೆಯಲಾಗಿದೆ’ಎಂದು ಹೇಳುವ ಮೂಲಕ ಕೇಂದ್ರ ಸರಕಾರಕ್ಕೆ ಚಾಟಿ ಬೀಸಿತು.

ಬರ ಸಂಕಷ್ಟ ಮತ್ತು ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಹಣಪಾವತಿ ಯಲ್ಲಿ ವಿಳಂಬಕ್ಕೆ ಸಂಬಂಧಿಸಿ ದಂತೆ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಾ ಲಯವು ನಡೆಸುತ್ತಿದೆ. ಅದು ರಾಜ್ಯ ಸರಕಾರಗಳನ್ನೂ ಬಿಡಲಿಲ್ಲ. ಬೇಸಿಗೆ ರಜೆಯುದ್ದಕ್ಕೂ ಮಧ್ಯಾಹ್ನದ ಬಿಸಿಯೂಟ ವನ್ನು ಮುಂದುವರಿಸುವಂತೆ ಅವುಗಳಿಗೆ ಆದೇಶಿಸಿದ ನ್ಯಾಯಾ ಲಯವು, ಹಣದ ಕೊರತೆಯ ನೆಪವೊಡ್ಡಿ ರಾಜ್ಯಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ ಎಂದು ತರಾಟೆಗೆತ್ತಿಕೊಂಡಿತು.

ಬರದಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ರೈತರು ಮತ್ತು ಇತರರಿಗೆ ನೆರವಾಗಲು ಹಲವಾರು ಮಾರ್ಗಗಳು ಹಾಲಿ ವ್ಯವಸ್ಥೆಯಲ್ಲಿವೆ ಎಂದ ನ್ಯಾಯಾಲಯವು, ಉದ್ಯೋಗ ಖಾತರಿ ಮತ್ತು ಬಿಸಿಯೂಟದಂತಹ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುವಂತೆ ರಾಜ್ಯಗಳಿಗೆ ನಿರ್ದೇಶ ನೀಡಿತು. ವಿಪತ್ತು ನಿರ್ವಹಣೆಗಾಗಿರುವ ಹಣವನ್ನು ತಕ್ಷಣವೇ ಬಳಸಿಕೊಳ್ಳುವಂತೆ ಅದು ಅವುಗಳಿಗೆ ಸೂಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News